ದೇಶದ 8 ರಾಜ್ಯಗಳಲ್ಲಿ ರಾಜ್ಯಸಭಾ ಚುನಾವಣೆ: ಸಂಜೆಯೇ ಫಲಿತಾಂಶ

ನವದೆಹಲಿ, ಜೂನ್19, ದೇಶದ 8 ರಾಜ್ಯಗಳಲ್ಲಿ    ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ (ಇಂದು ) ಚುನಾವಣೆ ನಡೆಯುತ್ತಿದ್ದು,  ಬೆಳಗ್ಗೆ ಯಿಂದಲೇ   ಚುನಾವಣೆ  ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್ ನಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ಕೊರೋನಾ ಸೋಂಕಿನ ಕಾರಣ  ಮುಂದೂಡಲಾಗಿತ್ತು. ಕರ್ನಾಟಕದಿಂದ   4 ಹಾಗೂ ಅರುಣಾಚಲಪ್ರದೇಶದ ಒಂದು ಸ್ಥಾನಕ್ಕೆ  ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಕರ್ನಾಟಕದಿಂದ  ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ನಿಂದ ಎಚ್ .ಡಿ . ದೇವೇಗೌಡ ಆಯ್ಕೆಯಾಗಿದ್ದಾರೆ. ಅರುಣಾಚಲಪ್ರದೇಶದಲ್ಲಿ ನಬಾಮ್ ರೆಬಿಯಾ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಹಾಗೂ ಉಳಿದ ಎಂಟು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಗೆ ಕೆಲ ಶಾಸಕರು ರಾಜೀನಾಮೆ ನೀಡಿರುವುದು ಚುನಾವಣಾ ಕಣ ಮತ್ತಷ್ಟು  ರಂಗೇರುವಂತೆ ಮಾಡಿದೆ,   ಸಂಜೆಯೆ  ಅಧಿಕೃತ ಫಲಿತಾಂಶ  ಪ್ರಕಟವಾಗಲಿದೆ.