ಗೃಹ ರಕ್ಷಕ ದಳದಲ್ಲಿ ರಾಜಪೀರ್ ಸೇವೆ ಅನನ್ಯ

ಗೃಹ ರಕ್ಷಕ ದಳದಲ್ಲಿ ರಾಜಪೀರ್ ಸೇವೆ ಅನನ್ಯ  Rajpir's service in the Home Guard is unique

ಹೂವಿನ ಹಡಗಲಿ 01: ಗೃಹರಕ್ಷಕ ದಳದ ಕೆ ರಾಜಪೀರ್ ಗೃಹರಕ್ಷಕ ದಳದ ಕಾರ್ಯ ವೈಖರಿ ಅನನ್ಯ ಎಂದು ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು. 

ಪಟ್ಟಣದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಸೋಮವಾರ ಇಲ್ಲಿನ ಗೃಹರಕ್ಷಕ ದಳದ ವತಿಯಿಂದ ವಯೋ ನಿವೃತ್ತ ಹೊಂದಿರುವ ಕೆ ರಾಜಪೀರ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಹೂವಿನ ಹಡಗಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಜಾತ್ರೆ ಚುನಾವಣೆ ದೊಡ್ಡ ದೊಡ್ಡ ಸಮಾರಂಭಗಳು ನೆಡೆದಾಗ ಗೃಹರಕ್ಷಕ ದಳದವರು ಹಗಲಿರುಳು ತಮ್ಮನ್ನು ಸೇವೆಗೆ ಅರ​‍್ಿಸಿಕೊಂಡವರು ಎಂದು ಬಣ್ಣಿಸಿದರು. ಕೆ ರಾಜಪೀರ್ ಜಿಲ್ಲಾ ಗೃಹರಕ್ಷಕ ದಳದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ ಎಂದು ಹೇಳಿದರು. 

ಸಿ ಪಿ ಐ ದೀಪಕ್ ಭೂಸರೆಡ್ಡಿ ಜಿ ಬಿ ಆರ್ ಕಾಲೇಜು ಪ್ರಾಂಶುಪಾಲ ಪ್ರೊ ಎಸ್ ಎಸ್ ಪಾಟೀಲ್, ಡಾ ಬಿ ಟಿ ಫಣಿರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ ಕಲ್ಮಠ ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಗೃಹರಕ್ಷಕ ದಳದ ಹಿಂದಿನ ಅಧಿಕಾರಿ ಶಂಕರ್ ರಾವ್ ಇತರರು ಉಪಸ್ಥಿತರಿದ್ದರು. 

ಗೃಹರಕ್ಷಕ ದಳದವರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕೆ ರಾಜಪೀರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೆ ರಾಜಪೀರ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ನಿರ್ವಹಿಸಿದರು.