ರಾಜೀವ್‌ತಾರಾನಾಥ್ ವಿಶ್ವಕಂಡ ಶ್ರೇಷ್ಠ ಸರೋದ್‌ವಾದಕರು ಮಾತ್ರವಲ್ಲ, ಸಂಗೀತ ಲೋಕದ ಮಾಂತ್ರಿಕ : ಡಾ.ರಹಮತ್ ತರೀಕೆರೆ
Rajiv Taranath Vishwakanda is not only a great sarodist, but also a magician of the music world: Dr.
ಲೋಕದರ್ಶನ ವರದಿ
ರಾಜೀವ್‌ತಾರಾನಾಥ್ ವಿಶ್ವಕಂಡ ಶ್ರೇಷ್ಠ ಸರೋದ್‌ವಾದಕರು ಮಾತ್ರವಲ್ಲ, ಸಂಗೀತ ಲೋಕದ ಮಾಂತ್ರಿಕ : ಡಾ.ರಹಮತ್ ತರೀಕೆರೆ
ಧಾರವಾಡ 18 : ಪಂಡಿತ ರಾಜೀವ್‌ತಾರಾನಾಥ್ ವಿಶ್ವಕಂಡ ಒಬ್ಬ ಸರ್ವಶ್ರೇಷ್ಠ ಸರೋದ್ ವಾದಕರು ಮಾತ್ರವಲ್ಲ, ಸಂಗೀತ ಲೋಕದ ಮಾಂತ್ರಿಕರಾಗಿದ್ದರು. ಅವರು ಬಹುತ್ವ ಭಾರತದ ಭವ್ಯ ಕನಸುಗಾರರಾಗಿದ್ದರು ಎಂದು ಹೊಸಪೇಟೆಯ ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪಂ.ರಾಜೀವ್ ತಾರಾನಾಥ ಅವರ 93ನೇಯ ಜನ್ಮದಿನದ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೊ.ರಾಜೀವ್‌ತಾರಾನಾಥರು ಜಾತಿ, ಧರ್ಮ, ಗಡಿ, ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್‌ದಾರ್ಶನಿಕರು, ಸೂಫಿ ಪಂಥದ ಪ್ರತಿಪಾದರು ಭೋಧಿಸಿದ ಬಹುತ್ವದ ಕಲ್ಪನೆಯಂತೆ ನಾನು ಎನ್ನದೇ ನಾವು ಎಂಬ ಭಾವನೆಯ ಸಾಮರಸ್ಯದ ಸಹಬಾಳ್ವೆಯ ಚಿಂತನೆ ಒಳಗೊಂಡ ಬಹುತ್ವಗುಣ ಇಷ್ಟಪಟ್ಟವರಾಗಿದ್ದರು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ವಿಭಿನ್ನವಾಗಿಕಾಣುವ ಪರಿ ಖಂಡಿಸಿದವರಾಗಿದ್ದರು. ಅವರಲಿ ್ಲಅಪಾರವಾದ ಪ್ರಯೋಗಶೀಲ ಗುಣವಿತ್ತು.
ಆಂಗ್ಲ ಭಾಷಾ ಪಂಡಿತರಾದಅವರು ಪ್ರಾಧ್ಯಾಪಕ ಹುದ್ದೆತೊರೆದು ಸಂಗೀತದ ಬಗ್ಗೆ ಆಸಕ್ತಿ ಹೊಂದಿದರು. ಖ್ಯಾತ ಸಂಗೀತಗಾರರಾದ ಅಲಿ ಅಕ್ಬರ್‌ಖಾನರಿಂದ ಪ್ರಭಾವಿತರಾದ ರಾಜೀವ ತಾರಾನಾಥಅವರೇ ನನ್ನಗುರು ಎಂದು ಒಪ್ಪಿಕೊಂಡು ಸಂಗೀತ ಪರಂಪರೆ ಮುಂದುವರೆಸಿದರು. ಹಲವಾರು ಭಾಷೆ ಬಲ್ಲ ಪ್ರಖಾಂಡ ಪಂಡಿತರಾಗಿದ್ದು. ಭಾರತದ ಇಂದಿನ ಸ್ಥಿತಿಗತಿಯ ಬಗ್ಗೆ ವಿಷಾದಿಸಿದ್ದರು ಎಂದು ಹೇಳಿದರು.
ಧಾರವಾಡ ನಿರಂಜನ ವಿಚಾರ ವೇದಿಕೆಯ ಸಂಚಾಲಕ ಎಚ್.ಜಿ. ದೇಸಾಯಿ ಮಾತನಾಡಿ, ಪಂ.ರಾಜೀವತಾರಾನಾಥರುಅಪರೂಪದ ಸಂಗೀತ ವಿದ್ವಾಂಸರು ಪಂಡಿತರಾಜೀವತಾರಾನಾಥರಿಗೆ ಸಂಗೀತದ ಬಳುವಳಿ ತಮ್ಮ ಮನೆಯಿಂದಲೇಎರವಲು ಪಡೆದಿದ್ದರು. ಡಾ. ತಾರಾನಾಥರು ತಮ್ಮತಂದೆ ಹಾಗೂ ಗುರುವಿನಿಂದ ಪ್ರಭಾವಿತರಾದವರಾಗಿದ್ದರೆಂದು ಹೇಳಿದರು.
ಮೈಸೂರಿನ ಖ್ಯಾತತಬಲಾ ವಾದಕರಾದ ಭೀಮಾಶಂಕರ್ ಬಿದನೂರ ಮಾತನಾಡಿ, ಪಂ.ರಾಜೀವತಾರಾನಾಥ ನನ್ನಂತಹ ಅನೇಕ ಸಂಗೀತ ಕಲಾವಿದರನ್ನು ಮಕ್ಕಳಂತೆ ಬೆಳೆಸಿ ಪ್ರೋತ್ಸಾಹಿಸಿದರು. ಅವರದು ಮೇರು ವ್ಯಕ್ತಿತ್ವ, ನಿಷ್ಠುರ ಗುಣವುಳ್ಳ ಉದಾರಿಗಳಾಗಿದ್ದರು.ನಾವು ಇಂದುಗುರುಭಕ್ತಿ ಹೇಗೆಂಬುದನ್ನುಅವರಿಂದಲೇಕಲಿಯಬೇಕೆಂದರು.
ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಪರಿಚಯಿಸಿದರು.ಕೆ.ರಾಮರಡ್ಡಿ ನಿರ್ವಹಿಸಿದರು.ಡಾ. ಸಿ. ಬಿ. ಐನಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಎಂ.ಡಿ.ಒಕ್ಕುಂದ, ಎಂ.ಎಂ. ಚಿಕ್ಕಮಠ, ಚಂದ್ರಶೇಖರಅಮೀನಗಡ, ಎ.ಎಲ್. ದೇಸಾಯಿ ಸೇರಿದಂತೆ ಸಂಗೀತಾಸಕ್ತರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 