ಹ್ಯಾಟ್ರಿಕ್ ಅಧ್ಯಕ್ಷರಾಗಿ ರಾಜಶೇಖರ್ ಗೌಡ ಆಡೂರ, ಉಪಾಧ್ಯಕ್ಷರಾಗಿ ಕಣ್ಣಿಪೂಜಾ ಅವಿರೋಧ ಆಯ್ಕೆ
Rajashekhar Gowda Adoora elected unopposed as Hattrick President, Kannipooja as Vice President
ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ :
ಕೊಪ್ಪಳ 19: ನಗರದ ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗೆ ಸತತವಾಗಿ ಮೂರನೇ ಬಾರಿಗೆ ಹ್ಯಾಟ್ರಿಕ್ ಅಧ್ಯಕ್ಷರಾಗಿ ರಾಜಶೇಖರಗೌಡ ಆಡೂರ ಉಪಾಧ್ಯಕ್ಷರಾಗಿ ಕಣ್ಣಿಪೂಜಾ ಗಣೇಶಕುಮಾರ ಅವರು ಗುರುವಾರದಂದು ಅವಿರೋಧವಾಗಿ ಆಯ್ಕೆಗೊಂಡರು.
ನಂತರ ನೂತನ ಅಧ್ಯಕ್ಷ ರಾಜಶೇಖರ ಗೌಡ ಆಡೂರ ಮಾತನಾಡಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣೀಭೂತರಾದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರನ್ನು ಅಭಿನಂದಿಸುವೆ ಎಲ್ಲಾರ ಸಲಹೆ ಸೂಚನೆ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ರಾಜಶೇಖರಗೌಡ ಆಡೂರ ಉಪಾಧ್ಯಕ್ಷರಾದ ಕಣ್ಣಿಪೂಜಾ ಗಣೇಶಕುಮಾರ ಅವರನ್ನು ನಿರ್ದೇಶಕರಾದ ಗವಿಸಿದ್ದಪ್ಪ ತಳಕಲ್ , ಮಲ್ಲಿಕಾರ್ಜುನ ಪಾಟೀಲ್ , ವಿಶ್ವನಾಥ ಅಗಡಿ, ಬಾಬಾ ಅರಗಂಜಿ,ರಮೇಶ ಕವಲೂರ,ಶ್ರೀಶೈಲಪ್ಪ ಅಂಗಡಿ,ಬಸಯ್ಯ ಹಿರೇಮಠ,ನಾಗರಾಜ ಅರಕೇರಿ, ಬಸವರಾಜ ಶಹಪೂರ,ರಾಜೇಂದ್ರಕುಮಾರ ಶೆಟ್ಟರ್, ಸೈಯದ್ ಶಹನಾಜ ಬೇಗಮ್, ಬ್ಯಾಂಕಿನಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಜೋಶಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ದೆಕೊಪ್ಪ, ಸಹಾಯಕ ವ್ಯವಸ್ಥಾಪಕರಾದ ವೀರಮ್ಮ ನರಗುಂದ, ಹಿರಿಯ ಸಹಾಯಕ ಐ.ಜೆ. ನದೀಮುಲ್ಲಾ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 