ಹಾರೂಗೇರಿಯ ಆರ್ಥಿಕ ಚೈತನ್ಯ ರಾಜಶೇಖರ
Rajashekar, the economic dynamism of Harugeri
ಹಾರೂಗೇರಿ 23 : ಈ ಭಾಗದ ಬಡವರು, ವ್ಯಾಪಾರಸ್ತರು, ಉದ್ಯಮಿಗಳು, ರೈತರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಾರೂಗೇರಿಯ ಆರ್ಥಿಕ ಚೈತನ್ಯರಾದ ರಾಜಶೇಖರ ಪಾಟೀಲರಿಗೆ ಬೆಳಗಾವಿ ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ ಲಭಿಸಿದ್ದು, ಎಲ್ಲರಲ್ಲೂ ಹರ್ಷ ಮನೆ ಮಾಡಿದೆ ಎಂದು ಹುಬ್ಬಳ್ಳಿ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಚೇರ‌್ಮನ್ ಚನ್ನವೀರ ಮುಂಗುರವಾಡಿ ಹೇಳಿದರು.
ಪಟ್ಟಣದ ಜನತಾ ಸಹಕಾರ ಬ್ಯಾಂಕಿನ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪುರಸ್ಕೃತ ರಾಜಶೇಖರ ಪಾಟೀಲ ಗೌಡರಿಗೆ ಅಭಿನಂದನಾ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಸ್ಥಾಪಕ ಅಧ್ಯಕ್ಷ ಬಿ.ಆರ್.ಪಾಟೀಲರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ರಾಜಶೇಖರ ಪಾಟೀಲರು ಸಹಕಾರ ತತ್ವದಡಿ ಸಮಾಜದ ಋಣ ತೀರಿಸುತ್ತಿದ್ದಾರೆಂದು ಹೇಳಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಅಮರಶೆಟ್ಟಿ ಮಾತನಾಡುತ್ತ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಅವರ ಸಮರ್ಥ ಅಧ್ಯಕ್ಷತೆಯಲ್ಲಿ 2024-25ನೇ ಆರ್ಥಿಕ ವರ್ಷದಲ್ಲಿ ಜನತಾ ಬ್ಯಾಂಕು 1.19 ಕೋಟಿ ರೂ. ಮೀರಿ ನಿವ್ವಳ ಲಾಭ ಗಳಿಸಿದೆ ಎಂದರು.
ಈವೇಳೆ ಬ್ಯಾಂಕಿನ ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಉಗಾರ ಖುರ್ದ, ರಾಯಬಾಗ ಮತ್ತು ಅಥಣಿ ಶಾಖೆಗಳ ಸಿಬ್ಬಂದಿಯವರು ಬೆಳಗಾವಿ ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ರಾಜಶೇಖರ ಪಾಟೀಲ ಅವರನ್ನು ಸತ್ಕರಿಸಿ, ಅಭಿನಂದಿಸಿದರು.
ಬ್ಯಾಂಕ್ ಉಪಾಧ್ಯಕ್ಷ ತಮ್ಮಣ್ಣಪ್ಪ ತೇಲಿ, ಆಡಳಿತ ಮಂಡಳಿ ವ್ಯವಸ್ಥಾಪನ ಸಮಿತಿ ಸದಸ್ಯ ಡಾ.ಸಿ.ಆರ್.ಗುಡಸಿ, ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಸಂಜೀವ ಅವಕ್ಕನವರ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಭಾವಿ, ಹಣಮಂತ ಮಡಿವಾಳ, ರಾಮಪ್ಪ ನಾಯಿಕ, ಬಸಗೌಡ ಪಾಟೀಲ, ಜಯಶ್ರೀ ಪಾಟೀಲ, ಎಂ.ಬಿ.ಮಠಪತಿ, ಎಸ್.ಟಿ.ತೇಲಿ, ಸುಬ್ಬಣ್ಣವರ, ಚಿಂಚಲಿ, ಶಾಖಾ ವ್ಯವಸ್ಥಾಪಕರಾದ ಅಶೋಕ ಪಾಟೀಲ, ಆನಂದ ಗುರವ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 