ಬೆಂಗಳೂರು, ಏ.12,ವರನಟ ದಿ.ಡಾ.ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 14 ವರ್ಷಗಳೇ ಸಂದಿವೆ. ಕೊರೊನಾ ಸೋಂಕು ಇದೀಗ ರಾಜ್ ಕುಮಾರ್ ಪುಣ್ಯಸ್ಮರಣೆಗೂ ತಟ್ಟಿದ್ದು, ಪ್ರತಿವರ್ಷ ಸಾವಿರಾರು ಅಭಿಮಾನಿಗಳು ರಾಜ್ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ರಾಜ್ ಸಮಾಧಿಗೆ ತೆರಳಿ ಪೂಜೆನಮನ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ವರನಟನ ಪುಣ್ಯಸ್ಮರಣೆಗೂ ಕರಾಳ ಛಾಯೆಯಂತೆ ಆಚರಿಸಿದೆ.14ನೇ ಪುಣ್ಯಸ್ಮರಣೆಯಾದ ಇಂದು ಬೆಳಿಗ್ಗೆ ರಾಜ್ ಕುಮಾರ್ ಹಿರಿಯ ಪುತ್ರ ಚಂದನ ವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಬ್ಬರೇ ತಂದೆಯ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.