ಎಚ್‌ಐವಿ ಏಡ್ಸ್‌ ತಡೆಗೆ ಜಾಗೃತಿ ಮೂಡಿಸುವುದು ಅವಶ್ಯ: ಡಾ ರಾಜೇಶ್ವರಿ

ಎಚ್‌ಐವಿ ಏಡ್ಸ್‌ ತಡೆಗೆ ಜಾಗೃತಿ ಮೂಡಿಸುವುದು ಅವಶ್ಯ: ಡಾ ರಾಜೇಶ್ವರಿ Raising awareness is essential to prevent HIV-AIDS: Dr Rajeshwari

ಶಿಗ್ಗಾವಿ 05 : ಎಚ್ ಐವಿ ಸೋಂಕು ಹಾಗೂ ಏಡ್ಸ್‌ ಕಾಯಿಲೆ ತಡೆಗಟ್ಟಲು ಜನಸಾಮಾನ್ಯರಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯೆ ಡಾ.ರಾಜೇಶ್ವರಿ ಚನ್ನಗೌಡ್ರ ಹೇಳಿದರು.  

ಪಟ್ಟಣದ ಅಂಬೇಡ್ಕರ್ ಸಂಕೀರ್ಣ ದಲ್ಲಿ ರಾಜ್ಯ ಏಡ್ಸ್‌ ಪ್ರಿವೆಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ತಾಲೂಕಾ ಆರೋಗ್ಯ ಇಲಾಖೆ, ತಾಲೂಕ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ, ಹಾಗೂ ವಿವಿಧ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಜೀವನದಲ್ಲಿ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವದಕ್ಕಿಂತ ಬರದ ಹಾಗೆ ಜಾಗೃತಿ ವಹಿಸಬೇಕಾಗಿರುವುದು ಮುಖ್ಯ ಅಲ್ಲದೇ ಸೊಂಕೀತರನ್ನು ಕಳಂಕ ಮತ್ತು ತಾರತಮ್ಯದಿಂದ ಕಾಣದೇ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.  ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ.ಎ.ಆರ್ ಮಾತನಾಡಿ ಇಂದು ಬದಲಾದ ಜೀವನ ಶೈಲಿಯಿಂದ ಹಲವಾರು ರೋಗಗಳನ್ನು ನಾವಾಗಿಯೇ ಆವ್ಹಾನಿಸುತ್ತಿದ್ದೇವೆ. ಆರೋಗ್ಯವೇ ಭಾಗ್ಯ ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದಲ್ಲಿ ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಮುಖ್ಯ. ಹೆಚ್‌.ಐ.ವ್ಹಿ ಸೋಂಕು ಅಸುರಕ್ಷಿತ ಲೈಂಗಿಕ ಕ್ರಿಯೆ ಮೂಲಕ ಹೆಚ್ಚಾಗಿ ಹರಡುತ್ತದೆ ಎಂದರು.  ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪ್ಯಾನಲ್ ಅಡ್ವೋಕೆಟ್‌ ಎ.ಎನ್, ಕನಕನ್ನವರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ದೀಪಾ ಉಣಕಲ್, ಸರೋಜಾ ಹರಿಜನ, ಹನುಮಂತ ಮಾದರ, ಯಶೋಧ, ಎಸ್ ಸಿ ಕೋರಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.