ಮಳೆ ನೀರು ಸಂಗ್ರಹಣಾ ಅಭಿಯಾನ ಹಾಗೂ ಪ್ರತಿಜ್ಞಾ ವಿಧಿ ಬೋಧನೆ
Rainwater Harvesting Campaign and Administration of the Pledge
ಸವದತ್ತಿ 31 : ಮಳೆ ನೀರಿನ ಪ್ರತಿಯೊಂದು ಹನಿಯನ್ನು ಉಳಿಸಿ, ಭವಿಷ್ಯದ ನೀರಿನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸದುದ್ದೇಶದಿಂದ ಸವದತ್ತಿ ಯಲ್ಲಮ್ಮಾ ನಗರಸಭೆಯ ವತಿಯಿಂದ ಮಳೆ ನೀರು ಸಂಗ್ರಹಣಾ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ ಪೌರಾಯುಕ್ತ ಸಂಗನಬಸಯ್ಯ ಗದಗಿನಮಠ ಅವರ ನೇತೃತ್ವದಲ್ಲಿ ಈ ಅಭಿಯಾನದಡಿ ವಿಶೇಷ ಕಾರ್ಯಕ್ರಮ ಜರುಗಿತು. ಸಾರ್ವಜನಿಕರಲ್ಲಿ ಮಳೆ ನೀರು ಸಂರಕ್ಷಣೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ, ನಗರಸಭೆಯ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಮಳೆ ನೀರು ಸಂಗ್ರಹಣೆ ಮಾಡುವ ಕುರಿತು ಪ್ರತಿಜ್ಞೆ ಬೋಧಿಸಲಾಯಿತು.
ಮಳೆ ನೀರನ್ನು ವ್ಯರ್ಥವಾಗಿ ಹಾಯಬಿಡದೆ, ಪ್ರತಿಯೊಬ್ಬರೂ ತಮ್ಮ ಮನೆ, ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಮಳೆ ನೀರು ಸಂಗ್ರಹಣಾ ಘಟಕಗಳನ್ನು ಅಳವಡಿಸಿಕೊಳ್ಳುವಂತೆ ಈ ವೇಳೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಈ ವೇಳೆ ಹಿರಿಯ ಅಭಿಯಂತರು ಶಂಕರ ದಂಡಿನ, ಬಿ.ಎಚ್.ಆನಿ, ಎಮ್.ಐ.ಪಾಟೀಲ್, ಚಂದ್ರಶೇಖರ ಮಲಕಣ್ಣವರ, ಮಹಾಬಲೇಶ್ವರ ಕಡಕೋಳ, ರಮೇಶ್ ಹಿರೇಹೊಳಿ, ಖಲಂದರ ಖನಗಾವಿ, ಶ್ವೇತಾ ನಾಯಕ, ಶಿವಾಜಿ ಕುದರಿ, ಮಲೀಕ ಚೂರಿಖಾನ, ಅಬ್ದುಲ್ ದಫೇದಾರ, ಹಾಗೂ ಸಿಬ್ಬಂದಿಗಳು, ಹಾಗೂ ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ, ಮುಂದಿನ ದಿನಗಳಲ್ಲಿ ಜಲ ಸಂರಕ್ಷಣೆ ಮಾಡುವ ಗಟ್ಟಿ ನಿರ್ಧಾರ ಕೈಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 