ಮಳೆ ಇಳಿಮುಖ : ಆಗಾಗ ರಭಸದ ಮಳೆ : ಸಮುದ್ರದಂಡೆಗೆ ತೆರಳಿದಂತೆ ಜಿಲ್ಲಾಡಳಿತ ಎಚ್ಚರಿಕೆ
Rainfall decreasing: Frequent heavy rains: District administration warns as it moves towards the coa
ಕಾರವಾರ 18 : ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಕರಾವಳಿಯಲ್ಲಿ ಆಗಾಗ ರಭಸದ ಮಳೆ ಸುರಿದಿದೆ. ಕಾರವಾರ, ಕುಮಟಾ, ಅಂಕೋಲಾದಲ್ಲಿ ಆಗಾಗ ಮಳೆ ಸುರಿದಿದೆ . ಅಣಶಿ ಘಟ್ಟದಲ್ಲಿ ಭರ್ಜರಿ ಮಳೆಯಾಗಿದೆ. ಕಡಲಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಇಳಿಯದಂತೆ ಜಿಲ್ಲಾಡಳಿತ, ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗ ತಿಳಿಸಿದೆ.
ಸಮುದ್ರದಲ್ಲಿ ಭಾರಿ ಅಲೆ ಏಳುವ ಸಂಭವ ಇರುವ ಕಾರಣ 4.7 ಮೀಟರ್ ಎತ್ತರಕ್ಕೆ ಅಲೆ ಏಳಲಿವೆ .ಕಾರಣ ಪ್ರವಾಸಿಗರು, ಮಕ್ಕಳುಸಮುದ್ರದಂಡೆಗೆ ತೆರಳಿದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.ಮಳೆ ಮತ್ತು ಹಾನಿಯ ವಿವರ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 44.3 ಮಿಮೀ,ಭಟ್ಕಳದಲ್ಲಿ 17.4 ಹಳಿಯಾಳ 4.2, ಹೊನ್ನಾವರ 26.8, ಕಾರವಾರ 29.7, ಕುಮಟಾ 23, ಮುಂಡಗೋಡ 5.5, ಸಿದ್ದಾಪುರ 58.3, ಶಿರಸಿ 43.8 , ಸೂಪಾ 23, ಯಲ್ಲಾಪುರ 19.7, ದಾಂಡೇಲಿಯಲ್ಲಿ 4.5 ಮಿಲಿ ಮೀಟರ್ ಮಳೆ ಸುರಿದಿದ್ದು, 11 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.ಜೂನ್ 1 ರಿಂದ ಇದುವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ , 28 ಕಿ.ಮೀ ರಾಜ್ಯ ಹೆದ್ದಾರಿ, 59 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ,135.3 ಕಿಮೀ ಗ್ರಾಮೀಣ ರಸ್ತೆ, 44 ಸೇತುವೆಗಳು, 2 ಶಾಲಾ ಕಟ್ಟಡಗಳು,14 ಅಂಗನವಾಡಿ ಕಟ್ಟಡಗಳು,1371 ವಿದ್ಯುತ್ ಕಂಬಗಳು,57 ಟ್ರಾನ್ಸ್ ಫಾರ್ಮರ್‌ಗಳು,3.392 ಕಿ.ಮೀ ಉದ್ದದ ವಿದ್ಯುತ್ ತಂತಿಗಳಿಗೆ ಹಾನಿ ಸಂಭವಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 