ರೇಲ್ವೇ ಮೇಲ್ಸುತುವೆ ನಿಮಾರ್ಣ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಎಚ್ಚರಿಕೆ
Railway Overhead Line Construction Struggle Committee President Ravindra Gowda F. Patil warns
ರಾಣೇಬೆನ್ನೂರು 24: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವಾಣಿಜ್ಯ ನಗರ, ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನ ರೇಲ್ವೆ ಗೇಟ್ ನಂ. 217 ರಲ್ಲಿ ದಿನನಿತ್ಯ ಸರಣಿ ರೇಲ್ವೆ ಅಪಘಾತಗಳು ಜರುಗುತ್ತಿದ್ದು ಕೂಡಲೆ ಕೇಂದ್ರ ಸರಕಾರ ಈಗಾಗಲೆ ಗೇಟ್ ನಂ. 219 ನಿರ್ಮಿಸಿದಂತೆ ಗೇಟ್ ನಂ 218 ್ಘ 217 ಕ್ಕೂ ರೇಲ್ವೆ ಮೇಲ್ಸುತುವೆ ನಿರ್ಮಿಸಿ ಸರಣಿ ಅಪಘಾತಕ್ಕೆ ಕೊನೆ ಹಾಡಬೇಕು ಎಂದು ರೇಲ್ವೆ ಮೇಲ್ಸುತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರಗೌಡ ಎಫ್. ಪಾಟೀಲ ಕೇಂದ್ರ ಸರಕಾರಕ್ಕೆ ಎಚ್ಚರಿಸಿದರು. ಅವರು ಇತ್ತೀಚೆಗೆ ತಾಲೂಕಿನ ಸಿದ್ದಾಪುರ ತಾಂಡಾದ ಲಕ್ಷ್ಮೀ ಅಶೋಕಪ್ಪ ಲಮಾಣಿ ಎಂಬ 32 ವರ್ಷದ ಮಹಿಳೆ ಯುಗಾದಿ ಹಬ್ಬದ ಸಂತೆ ಮಾಡಿಕೊಂಡು,
ರೇಲ್ವೆ ಹಳಿ ದಾಟುತ್ತಿರುವಾಗ ರೇಲ್ವೆ ಗೇಟ್ ನಂ. 217 ರ ಮೇಡ್ಲೇರಿ ರಸ್ತೆ ರೇಲ್ವೆ ಟ್ರ್ಯಾಕ್ ಬಳಿ ಎಕ್ಸ್‌ಪ್ರೆಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆಯ ವಿರುದ್ಧವಾಗಿ ಮೃತ ಮಹಿಳೆಯ ಶವವನ್ನಿಟ್ಟುಕೊಂಡು ಅನ್ಯಾಯದ ಸಾವಿಗೆ ಮುಖ್ಯ ಕಾರಣವಾಗಿರುವ ಅವೈಜ್ಞಾನಿಕ ರೈಲ್ವೆ ಟ್ರ್ಯಾಕ್ ಮುಖ್ಯ ಕಾರಣ ಎಂದು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು ನಿತ್ಯ ನಿರಂತರವಾಗಿ ಈ ಮೇಡ್ಲೇರಿ ರಸ್ತೆಯ ರೈಲ್ವೆ ಗೇಟ್ ನಂ. 217 ರ ಹತ್ತಿರ ರೈಲ್ವೆ ಬಂದಾಗಲೊಮ್ಮೆ ಅನಾಹುತಗಳು ಜರುಗುತ್ತಿದ್ದು ದಿನದ 24 ಗಂಟೆಗಳೊಗಾಗಿ 58 ಬಾರಿ ಎರಡೂ ಕಡೆಯಿಂದ ಗೇಟನ್ನು ಹಾಕುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದು ರೈಲ್ವೆ ಇಲಾಖೆಗೆ ಗೊತ್ತಿಲ್ಲದ ವಿಚಾರವಲ್ಲ, ಹೀಗಿದ್ದು ಜಾಣ ಕುರುಡರಂತೆ ವರ್ತಿಸುತ್ತಿರುವ ಇಲಾಖೆಯ ಹಿರಿಯ ಅಧಿಕಾರಿಗಳ ಬೇಜಾವ್ದಾರಿತನದಿಂದ ಈ ಗೇಟ್ ನಂ. 217 ಮತ್ತು 218 ಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸಿ ಕರ್ತವ್ಯಲೋಪ ಎಸಗಿ ಅಮಾಯಕರ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ ಎಂದು ಪಾಟೀಲರು ರೈಲ್ವೆ ಇಲಾಖೆಯ ತಾಂತ್ರಿಕ ವರ್ಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೃತ ಲಕ್ಷ್ಮೀ ಅಶೋಕ ಲಮಾಣಿ ಇವರಿಗೆ ಏಳು ತಿಂಗಳ ಹೆಣ್ಣು ಮಗು ಸೇರಿದಂತೆ ನಾಲ್ಕು ಜನ ಸುಪುತ್ರಿಯರು ಮತ್ತು ಪತಿ ಅಶೋಕನನ್ನು ಬಿಟ್ಟು ಅಗಲಿದ್ದಾರೆ. ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಈ ಬಡ ಕುಟುಂಬ ಯುಗಾದಿ ಹಬ್ಬದ ಸಂತೆ ಮಾಡಿಕೊಂಡು ಸಂಬ್ರಮದಿಂದ ಹಬ್ಬ ಆಚರಿಸಬೇಕಾದ ಕುಟುಂಬ ಅಧಿಕಾರಿಗಳ ರೈಲ್ವೆ ಇಲಾಖೆಯ ನಿರ್ಲಕ್ಷ್ಯತನದಿಂದ ಶೋಕ ಸಾಗರದಲ್ಲಿ ಮುಳುಗಿದ್ದು ಬೇಸರದ ಸಂಗತಿಯಾಗಿದೆ ಎಂದು ಪಾಟೀಲರು ಈ ಮಹಿಳೆಯ ಸಾವಿನ ಹೊಣೆಯನ್ನು ರೈಲ್ವೆ ಇಲಾಖೆಯೆ ಹೊರಬೇಕೆಂದರು. ಈ ಸಂದರ್ಭದಲ್ಲಿ ಸಿದ್ದಾಪುರ ತಾಂಡಾದ ಕುಮಾರ ಲಮಾಣಿ, ನಾಗರಾಜ ತಾವರೆಪ್ಪ ಲಮಾಣಿ, ರಾಮಪ್ಪ ಶಂಕ್ರ್ಪ ಲಮಾಣಿ, ಪಾಲಾಕ್ಷಪ್ಪ ಲಮಾಣಿ, ದೇವಪ್ಪ ಲಮಾಣಿ ಸೇರಿದಂತೆ ತಾಂಡಾಗಳ ನೂರಾರು ಜನ ಭಾಗಿಯಾಗಿದ್ದರು. ದಾವಣಗೆರೆಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್.ಐ.ಆರ್. ದಾಖಲಾಗಿದ್ದು ರಾಣೇಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು. ರೈಲ್ವೆ ಪೊಲೀಸ್ ಇಲಾಖೆಯ ದಾವಣಗೆರೆಯ ಎ.ಎಸ್.ಐ. ಜಾನ ಮತ್ತು ಹರಿಹರ ರೈಲ್ವೆ ಪೊಲೀಸ್ ಹೆಡ್ ಕಾನ್ಟೇಬಲ್ ಕೊಟ್ರೋಶ ಮತ್ತು ದಿನೇಶ ಹಾಜರಿದ್ದರು. .
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 