ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಶ್ರೀ ನಾಮಕರಣ ಮಾಡಲು ರಾಯ್ಕರ್ ಒತ್ತಾಯ
ಕೊಪ್ಪಳ 12: ಇಲ್ಲಿನ ಧಾರ್ಮಿಕ ಇತಿಹಾಸಿಕ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಪರಮಪೂಜ್ಯ ಗವಿಶ್ರೀ ಅವರ ಹೆಸರು ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಕೊಪ್ಪಳ ನಗರಸಭೆಯ ಮಾಜಿ ಸದಸ್ಯ ಪ್ರಶಾಂತ ರಾಯ್ಕರ್ ಒತ್ತಾಯಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ಅವರುಈಗಾಗಲೇ ಹಲವು ಜನ ಹಲವು ಹೆಸರುಗಳನ್ನು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು ಒತ್ತಾಯಿಸುತ್ತಿದ್ದಾರೆ ಆದರೆ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಗವಿಶ್ರೀ ಎಂಬ ಹೆಸರು ಸೂಕ್ತವಾಗಿದೆ, ರೈಲ್ವೆ ಇಲಾಖೆಯ ಮುಖ್ಯ ನೈರುತ್ಯ ಕಚೇರಿ ಹುಬ್ಬಳ್ಳಿಯಲ್ಲಿದ್ದು ಹುಬ್ಬಳ್ಳಿಯ ರೈಲ್ವೆ ಸ್ಥಾನಕ್ಕೂ ಕೂಡ ಸಿದ್ದಾರೋಡ ಮಠದ ಹೆಸರಿಡಲಾಗಿದೆ, ಅದರಂತೆ ಕೊಪ್ಪಳಕ್ಕೂ ಕೂಡ ಈ ಭಾಗದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಮತ್ತು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ದಾಸೋಹ ಜೊತೆಗೆ ಅಕ್ಷರ ಕ್ರಾಂತಿ ನೀಡುವಲ್ಲಿ ಸಂಜೀವಿನಿಯಾಗಿ ಶ್ರಮಿಸುತ್ತಿರುವ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಗವಿಶ್ರೀ ಎಂಬ ಹೆಸರು ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವುದು ಸೂಕ್ತವಾಗಿದೆ ಎಂದು ಪ್ರಶಾಂತ್ ರಾಯ್ಕರ್ ವಿವರಿಸಿದ್ದಾರೆ .
ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಗವಿಶ್ರೀ ಹೆಸರನ್ನು ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದರು, ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡು ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿ ಶ್ರೀ ಹೆಸರು ನಾಮಕರಣ ಮಾಡಲು ಅವರು ಒತ್ತಾಯಿಸಿದ್ದಾರೆ.