ರಾಹುಲ್ ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೆ "ದೇಶಗಳಿಗೆ ಭೇಟಿ
Rahul visits countries without informing security agencies
ಪಟ್ನಾ: 'ದೇಶದ ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ' ಎಂದು ಬಿಜೆಪಿ ರ್್ಟರಾಯ ಅಧ್ಯಕ್ಷ ನಿತಿನ್ ನ"ನ್ ಬುಧವಾರ ಆರೋಪಿಸಿದರು.
ಕಳೆದ ವಾರ ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಯಲ್ಲಿ ಅಮೇರಿಕಾ-ಭಾರತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ 'ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿ ಯುವ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೇ ರಾಹುಲ್ ಗಾಂಧಿ "ರುದ್ಧ ವಾಗ್ದಾಳಿ ನಡೆಸಿರುವ ನಿತಿನ್, ಕುಟುಂಬದ 'ರಾಜಿ ಕಾರ್ಯ'ವನ್ನು ಬ"ರಂಗಪಡಿಸುತ್ತೇನೆ' ಎಂದು ಹೇಳಿದರು.
'ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೇ ರಾಹುಲ್ ಅವರು 247 ಬಾರಿ
"ದೇಶಗಳಿಗೆ ಭೇಟಿ ನೀಡಿದ್ದಾರೆ. ಇದೆಲ್ಲವೂ ರಾಹುಲ್ ಗಾಂಧಿಯವರ 'ರಾಜಿ ಕಾರ್ಯದ' ಭಾಗವಾಗಿದೆ' ಎಂದು ದೂರಿದರು.
'ರಾಹುಲ್ ಅವರ ಅಜ್ಜ ಜವಾಹರಲಾಲ್ ನೆಹರೂ ಅವರಿಂದ ಪ್ರಾರಂಭವಾಗಿರುವ ಈ 'ರಾಜಿ ಕಾರ್ಯ' ತಲೆಮಾರುಗಳವರೆಗೆ ಮುಂದುವರಿದಿದೆ' ಎಂದು ಪ್ರತಿಪಾದಿಸಿದರು.
'ರಾಹುಲ್ ಅವರು "ದೇಶದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ಪರ"ರುವ 'ಶಕ್ತಿ'ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ ಬಿಲಿಯನೇರ್ ಜಾರ್ಜ್ ಸೊರೊಸ್, ಯುಎಸ್ ಕಾಂಗ್ರೆಸ್ ಸದಸ್ಯ ಇಲ್ಹಾನ್ ಒಮರ್ ಮತ್ತು ಕೀನ್ಯಾದ ಫೈನಾನ್ಷಿಯರ್ ಶಕೀರ್ ಮೆರಾಲಿ ಕೂಡ ಸೇರಿದ್ದಾರೆ' ಎಂದು ಹೇಳಿದರು.
'2004 ರಿಂದ 2014 ರವರೆಗೆ ರಾಹುಲ್ ತಾು ಸೋನಿಯಾ ಗಾಂಧಿ ಅವರು 'ಸೂಪರ್ ಪ್ರಧಾನಿ'ಯಾಗಿದ್ದರು. ಅಂತಹ ಉನ್ನತ ಸಾಂ"ಧಾನಿಕ ಹುದ್ದೆಯ ಅಧಿಕಾರವನ್ನೂ ಅವರು 'ರಾಜಿ ಕಾರ್ಯ'ಕ್ಕಾಗಿ ಬಳಸಿಕೊಂಡಿದ್ದರು' ಎಂದು ಹೇಳಿದರು.
'ರಾಹುಲ್ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 'ತಮ್ಮ ವೈಯಕ್ತಿಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಬೊಫೋರ್ಸ್ ಒಪ್ಪಂದವನ್ನು ಬಳಸಿಕೊಂಡಿದ್ದರು' ಎಂದು ಆರೋಪಿಸಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 