ಚಿತ್ರರಂಗದಲ್ಲಿ ಯಶಸ್ವಿಯಾಗಿ 15 ವರ್ಷ ಪೂರೈಸಿದ ರಾಗಿಣಿ
Ragini successfully completes 15 years in the film industry
ಏಳು-ಬೀಳಿನ ಹಾದಿಯಲ್ಲಿ ಬಣ್ಣದ ಪಯಣ
ಸ್ಯಾಂಡಲ್‌ವುಡ್‌ನಲ್ಲಿ ತುಪ್ಪದ ಹುಡಗಿ ಎಂದೇ ಖ್ಯಾತಿ ಪಡೆದಿರುವ ರಾಗಿಣಿ ದ್ವಿವೇದಿ ಚಿತ್ರರಂಗಕ್ಕೆ ಬಂದು ಈಗ 15 ವರ್ಷ ಕಳೆದಿದೆ. ಈ 15 ವರ್ಷದ ಜರ್ನಿಯಲ್ಲಿ ರಾಗಿಣಿ ಸಾಕಷ್ಟು ಏಳು-ಬೀಳುಗಳನ್ನು ಅನುಭವಿಸಿದ್ದಾರೆ. ಹೌದು 2010ರಲ್ಲಿ 'ವೀರ ಮದಕರಿ' ಸಿನಿಮಾ ಮೂಲಕ ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಾಗಿಣಿ ಯಶಸ್ವಿಯಾಗಿ 15 ವರ್ಷ ಪೂರೈಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸಿರುವ ರಾಗಿಣಿ ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ರಾಗಿಣಿ, ಹಲವಾರು ಬಡವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಜೊತೆಗೆ ಹಲವು ಮಂಗಳ ಮುಖಿಯರ ಜೀವ ಶೈಲಿ ಬದಲಿಸುವಲ್ಲಿ ಶ್ರಮ ಪಟ್ಟಿದ್ದಾರೆ. ಮೂಲತಃ ಪಂಜಾಬಿನವಳಾದ ರಾಗಿಣಿ ಈಗ ಕನ್ನಡ ಮನೆ ಮಗಳಾಗಿದ್ದಾರೆ. ಈ ಪಂಜಾಬಿ ಬೆಡಗಿ ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದದ್ದೆ ಅಪರೂಪ.
ತಮ್ಮ ಈ 15 ವರ್ಷದ ಬಣ್ಣದ ಜರ್ನಿ ಬಗ್ಗೆ ಮಾತನಾಡುವ ರಾಗಿಣಿ, 'ನಾನು ಅಂದುಕೊಂಡಿರಲಿಲ್ಲ ನಟಿ ಆಗುತ್ತೆನೆ ಎಂದು. ಬಾಸ್ಕಿ ಬಾಲ್ ಕ್ರಿಡೆ ಇಷ್ಟ ಪಟ್ಟು ಆಡತಾ ಇದ್ದೆ. ನಂತರ ಮಾಡೆಲಿಂಗ್ ಲೈಫ್ ಶೂರು ಆಯ್ತು. ಮೊದಲು ಕನ್ನಡ ಇಂಡಸ್ಟ್ರಿ ಇದೆ ಅಂತ ನಂಗೆ ಗೊತ್ತೆ ಇರಲಿಲ್ಲ. ಎಲ್ಲರು ನನ್ನ ಮೊದಲ ಸಿನಿಮಾ 'ವೀರ ಮದಕರಿ' ಎಂದುಕೊಂಡಿದ್ದಾರೆ. ಅದಕ್ಕೂ ಮೊದಲು 'ಹೋಳಿ' ಎಂಬ ಸಿನಿಮಾದಲ್ಲಿ ನಟಿಸಿದ್ದ. ಆ ಚಿತ್ರದ ಪ್ರೆಸ್ ಮಿಟ್‌ನಲ್ಲಿ ಹಿರಿಯ ಪತ್ರಕರ್ತರೊಂದಿಗೆ ಜಗಳ ಮಾಡಿಕೊಂಡು ಹೋಗಿದ್ದೆ. ಆಗ ನಂಗೆ ಮೊದಲು ಕನ್ನಡ ಕಲಿಬೇಕು ಅನಿಸಿತು. 'ವೀರ ಮದಕರಿ' ಸಿನಿಮಾ ಶೂಟ್‌ಗೂ ಮೊದಲು ಸುದೀಪ್ ಅವರನ್ನು ಬೇಟಿ ಆದೆ. ಅವರ ಬಗ್ಗೆ ನಂಗೆ ಗೊತ್ತೆ ಇರಲಿಲ್ಲ. 'ವೀರ ಮದಕರಿ' ಶೂಟಿಂಗ್‌ನಲ್ಲಿ ನಂಗೆ ಸುದೀಪ್ ಸರ್ ತುಂಬಾ ಸಪೋರ್ಟ್ ಮಾಡಿದರು. ಈ 15 ವರ್ಷದಲ್ಲಿ ಶಿವಣ್ಣ, ಉಪೇಂದ್ರ, ಸೇರಿದಂತೆ ಎಲ್ಲ ಸ್ಟಾರ್ ಹಾಗೂ ಹೊಸ ಕಲಾವಿದರೊಂದಿಗೆ ನಟಿಸಿದ್ದೇನೆ. ಈ ಜರ್ನಿ ನಂಗೆ ಈಜಿ ಇರಲಿಲ್ಲ. ಸಾಕಷ್ಟು ಕಷ್ಟ ಅನುಭವಿಸಿ ಬಂದೆ. ಕಷ್ಟದ ಸಮಯದಲ್ಲಿ ಯಾರು ನನ್ನ ಜೊತೆ ಇರಲಿಲ್ಲ. ನಾನು ಎಲ್ಲರ ಕಷ್ಟದಲ್ಲಿ ಇದ್ದೆ. ಆದ್ರೂ ನಂಗೆ ಯಾರೂ ಸಾಥ್ ನೀಡಲಿಲ್ಲ. ಜೀವನದಲ್ಲಿ ಏನಾದರೂ ಮಾಡಬೇಕು ಎಂದಾಗ ಕಷ್ಟ ಹಾಗೂ ಒಳ್ಳೆಯ ದಿನ ಇರುತ್ತೆ ಅದನ್ನು ದಾಟಿ ಹೋಗಬೇಕು. ಕನ್ನಡ ಇಂಡಸ್ಟ್ರಿ ನಂಗೆ ಮನೆ ಆದರೂ ಬೇರೆ ಇಂಡಸ್ಟ್ರಿಯಿಂದ ಸಿಕ್ಕ ಪ್ರೀತಿ, ಸಪೋರ್ಟ್ ಇಲ್ಲಿಂದ ಸಿಗಲಿಲ್ಲ' ಎಂದು ಭಾವುಕರಾದರು.
ಮತ್ತೆ ಮುಂದುವರೇದು ಮಾತನಾಡುವ ರಾಗಿಣಿ, 'ಆದರೂ ಕನ್ನಡ ಇಂಡಸ್ಟ್ರಿ ನನ್ನ ಮನೆಯೇ. ಯಾರು ಬಂದರು ಬರದೆ ಇದ್ದರೂ ನನಗೋಸ್ಕರ ನಿಲ್ಲಬೇಕು ಎಂಬುದು ನನ್ನ ಹಠ. ಮುಂದಿನ ದಿನಗಳಲ್ಲಿ ಇಂಡಸ್ಟ್ರಿಗಾಗಿ ಏನಾದರೂ ಮಾಡುವ ಆಸೆ ಇದೆ. ಅದನ್ನು ಮಾಡಿಯೇ ಮಾಡುತ್ತೇನೆ. ಸದ್ಯ ರೀಲೀಸ್‌ಗೆ ಸಿದ್ದವಿರುವ 'ವೃಷಭ' ಸಿನಿಮಾ ಅದ್ಭುತವಾಗಿ ಬಂದಿದೆ. ಒಂದು ವರ್ಷದ ನಂತರ ನನ್ನ ಸಿನಿಮಾ ಬರತಾ ಇದ್ದು ಮೊದಲಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ಪಾತ್ರ ಮಾಡಿದ್ದೇನೆ. ಇದು ನನಗೆ ಕಮ್ ಬ್ಯಾಕ್ ಸಿನಿಮಾ ಎನ್ನಬಹುದು. ಸದ್ಯ ಮೂರು ಕನ್ನಡ, ಎರಡು ತಮಿಳು, ತೆಲುಗು, ಮಲಯಾಳಂ ಹಾಗೂ ಒಂದು ಹಿಂದಿ ಸಿನಿಮಾಗಳ ಕೆಲಸ ನಡೆಯುತ್ತಿದೆ. ಈ 15 ವರ್ಷದಲ್ಲಿ ಇಂಡಸ್ಟ್ರಿ ತುಂಬಾ ಬದಲಾಗಿದೆ. ಅದಕ್ಕೆ ತಕ್ಕಂತೆ ನಾವು ಸಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ರಾಜಕೀಯಕ್ಕೆ ಹೋಗುತ್ತೇನೆ. ಜೊತೆಗೆ ನಾವು ತಂಡ ಕಟ್ಟಿಕೊಂಡಿದ್ದು, ಆ ಮೂಲಕ ಇಂಡಸ್ಟ್ರಿಗೆ ಒಳ್ಳೆಯ ನಟರು, ತಂತ್ರಜ್ಞರನ್ನು ಕೊಡುವ ಕೆಲಸ ನಡಿತಾ ಇದೆ' ಎಂದು ಹೇಳಿಕೊಂಡರು.
ಇದೇ ಸಂದರ್ಭದಲ್ಲಿ ನಿರ್ಮಾಪಕ ನಿರ್ಮಾಪಕ ತರುಣ್, ಪತ್ರಕರ್ತರಾದ ಮನು, ಜಗದೀಶ್, ಸುನೈನಾ, ವಿ.ಸಿ.ಎನ್ ಮಂಜು ಸೇರಿದಂತೆ ಹಲವರು ತಮ್ಮ ಹಾಗೂ ರಾಗಿಣಿ ಅವರ ಒಡನಾಟದ ಬಗ್ಗೆ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 