ಅ.15ರಿಂದ ರಾಘವೇಂದ್ರ ಶ್ರೀಗಳು 348ನೇ ಆರಾಧನಾ ಮಹೋತ್ಸವ
ಲೋಕದರ್ಶನವರದಿ
ಹಾವೇರಿ : ನಗರದಲ್ಲಿ 310 ವರ್ಷಗಳ ಹಿಂದೆ ಸ್ಥಾಪಿತವಾದ ಹಾಗೂ ಮಂತ್ರಾಲಯ 2ನೇ ವೃಂದಾವನವೂ ಸಹ ಭಕ್ತಿಯ ನೆಲೆಯಾಗಿದೆ. ಕಲಿಯುಗದಕಾಮಧೇನುವಾಗಿ ಲಕ್ಷೊಪಲಕ್ಷ ಭಕ್ತ ಶ್ರೇಷ್ಠರಿಗೆ ಹೊಸ ಬೆಳಕಾಗಿ ಶ್ರೇಷ್ಠ ಗುರುಗಳಾಗಿ ನಂತರ ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಅ. 15ರಿಂದ 19ರವರೆಗೆ ನಾಲ್ಕು ದಿನಗಳವರೆಗೆ ಪೂವರ್ಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಅ.15ರಂದು (ಪಾಡ್ಯ) ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪೂವರ್ಾರಾಧನೆ ಬೆಳಿಗ್ಗೆ 7-00ಗಂಟೆಗೆ ಅಷ್ಟೋತ್ತರ ಹಾಗೂ 9-30ಗಂಟೆಗೆ ಪಂಚಾಮೃತ ಅಲಂಕಾರ ಮಧ್ಯಾಹ್ನ 12-30ಕ್ಕೆ ಹಸ್ತೋದಕ ಸಾಯಂಕಾಲ 7-00 ಗಂಟೆಗೆ ಗುರುರಾಯರು ಪಾದಗಟ್ಟಿಗೆ ಬರುವುದು.
ಅ.16ರಂದು ಬೆಳಿಗ್ಗೆ 7-30ಕ್ಕೆ ಅಷ್ಟೋತ್ತರ, ಮುಂ.9-00ಕ್ಕೆ ಪಾದಪೂಜೆ ಪಂಚಾಮೃತ ಅಲಂಕಾರ, 12.30ಕ್ಕೆ ಅಷ್ಟೋದಕ ಸಂಜೆ 7 ಗಂಟೆಗೆ ರಾಯರ ಹೂವಿನ ರಥೋತ್ಸವ ನಂತರ ಅಷ್ಟಾವಧಾನ, ಮಹಾಮಂಗಳಾರುತಿ.
ಅ.17ರಂದು ತೃತಿಯಾಶ್ರೀ ಗುರು ಸಾರ್ವಭೌಮರ ಉತ್ತರಾಧನೆ ಬೆಳಿಗ್ಗೆ 6-00ಗಂಟೆಗೆ ಅಷ್ಟೋತ್ತರ, ಮುಂಜಾನೆ 8 ಗಂಟೆಗೆ ಪಂಚಾಮೃತ, ಅಲಂಕಾರ ಮತ್ತು ಮುಂಜಾನೆ 10-00 ಪಾದಪೂಜೆ ಮಧ್ಯಾಹ್ನ 12.30ಗಂಟೆಗೆ ಹಸ್ತೋದಕ, ಸಾಯಂಕಾಲ ರಾಯರ ಹೂವಿನ ರಥೋತ್ಸವ, ರಾತ್ರಿ 8 ಗಂಟೆಗೆ ಅಷ್ಟಾವಧಾನ ಮಹಾಮಂಗಳಾರತಿ.
ಅ.18ರಂದು ಬೆಳಗ್ಗೆ 5 ಗಂಟೆಗೆ ಅಷ್ಟೋತ್ತರ, ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಲಂಕಾರ, ಮುಂಜಾನೆ 10 ಗಂಟೆ ಬೆಳ್ಳಿ ರಥೋತ್ಸವ ಬೆಳಗ್ಗೆ 11 ಗಂಟೆ ರಾಯರ ಮಹಾರಥೋತ್ಸವ. ಮಧ್ಯಾಹ್ನ 2 ಗಂಟೆಗೆ ತೀರ್ಥಪ್ರಸಾದ.
ಅ.19ರಂದು ಬೆಳಗ್ಗೆ 10 ಗಂಟೆಗೆ ಅವಭೃತ ಸ್ನಾನ, 11 ಗಂಟೆಗೆ ಅಷ್ಟೋತ್ತರ, ಮಧ್ಯಾಹ್ನ 12 ಗಂಟೆಗೆ ಹಸ್ತೋದಕ ರಾತ್ರಿ 8 ಗಂಟೆಗೆ ಅಷ್ಟೋದಾನ ಮುಂತಾದ ಕಾರ್ಯಕ್ರಮಕ್ಕೆ ಭಾಗವಹಿಸಿ ಗುರುರಾಯರ ಕೃಪೆಗೆ ಪಾತ್ರರಾಗಬೇಕೆಂದು ಡಾ|| ರಾಜಣ್ಣ ಎಸ್. ವೈದ್ಯ, ಹಾಗೂ ಡಾ|| ಮುರುಳಿಧರ ಎಸ್. ವೈದ್ಯ ಡಾ|| ವೀಣಾ ಎಸ್. ವೈದ್ಯ ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 