ರಾಘವೇಂದ್ರ ಹೋಟೆಲ್ ಪ್ರಾರಂಭೋತ್ಸವ: ಗವಿಶ್ರೀ ಗಳಿಗೆ ಹಾಗೂ ಮಾಜಿ ಸಂಸದರಿಗೆ ಸನ್ಮಾನ
Raghavendra Hotel Inauguration: Gavishris and former MPs felicitated
ರಾಘವೇಂದ್ರ ಹೋಟೆಲ್ ಪ್ರಾರಂಭೋತ್ಸವ: ಗವಿಶ್ರೀ ಗಳಿಗೆ ಹಾಗೂ ಮಾಜಿ ಸಂಸದರಿಗೆ ಸನ್ಮಾನ
ಕೊಪ್ಪಳ 15: ನಗರದ ಗಡಿಯಾರ ಕಂಬದ ಬಳಿ ಗವಿಮಠ ರಸ್ತೆಯಲ್ಲಿ ಬರುವ ಹೋಟೆಲ್ ಹೊಸ ರಾಘವೇಂದ್ರ ಭವನ ಪ್ರಾರಂಭೋತ್ಸವ ಇತ್ತೀಚೆಗೆ ಜರುಗಿತು, ಸದರಿ ಪ್ರಾರಂಭೋತ್ಸವ ಸಮಾರಂಭದಲ್ಲಿ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾಲ್ಗೊಂಡು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಾದ ಮಾಡಿ ಶುಭ ಕೋರಿದರು,
ಅಲ್ಲದೆ ಮಾಜಿ ಸಂಸದ ಸಂಗಣ್ಣ ಕರಡಿ ಯವರು ಸಹ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಅವರನ್ನು ಸಹ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ರಾಘವೇಂದ್ರ ಮಠದ ಮುಖ್ಯ ವ್ಯವಸ್ಥಾಪಕ ಜಗನ್ನಾಥ್ ರವರು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಪೂಜಾ ಕಾರ್ಯಕ್ರಮ ನೆರವೇರಿಸಿದರು, ನಗರದ ವಾಣಿಜ್ಯಧ್ಯಮಿ ಸಿದ್ದಣ್ಣ ಮಾಲ್ವಾಡ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ಅಲ್ಲದೆ ಸದರಿ ಹೊಸ ಹೋಟೆಲ್ ರಾಘವೇಂದ್ರ ಭವನ ಮಾಲಕರು ಮತ್ತು ಪ್ರೊಪ್ರೈಟರ್ ಶೈಲಜಾ ತಾಯಪ್ಪ ಹುಳ್ಳಿ ಮತ್ತು ಅವರ ಮಕ್ಕಳಾದ ಸತೀಶ್, ಸಂತೋಷ್, ಮತ್ತು ಶಿಲ್ಪಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರೆಲ್ಲರನ್ನು ಹುಳ್ಳಿ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 