ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ರಾಚಪ್ಪ ಗೊಂಡಬಾಳ ಆಯ್ಕೆ
Rachappa Gondaba selected for Karunada Padma Shri award
ಕೊಪ್ಪಳ 21: ಕರ್ಮ ಭೂಮಿ ಕನ್ನಡ ಸಂಘ ಬಿಚೋಲಿಯಂ ಗೋವಾ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಹಾಗೂ ಗಿಣಿಗೇರಿಯ ಹೊಸಪೇಟೆ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅಸಿಸ್ಟೆಂಟ್ ಫೋರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವ ರಾಚಪ್ಪ ಗೊಂಡಬಾಳ ರವರು ಆಯ್ಕೆಗೊಂಡಿದ್ದಾರೆ,ಬರುವ ಡಿಸೆಂಬರ್ 7 ರಂದು ಪಕ್ಕದ ಗೋವಾ ರಾಜ್ಯದ ಬಿಚೋಲಿಯಂ ನಗರದ ಹೀರಾ ಬಾಯಿ ಮೆಮೋರಿಯಲ್ ಹಾಲ್ ನಲ್ಲಿ 16 ನೇ ಬಾರಿಗೆ ಜರುಗಲಿರುವ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಹಾಗೂ ಗಿಣಿಗೇರಿಯ ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅಸಿಸ್ಟೆಂಟ್ ಫೋರ್ ಮೆನ್ ರಾಗಿ ಸೇವೆ ಸಲ್ಲಿಸುತ್ತಿರುವ ಅವರ ಉತ್ತಮ ತಾಂತ್ರಿಕ ಸೇವೆ ಮತ್ತು ಸಮಾಜ ಸೇವೆ ಗಾಗಿ ಅವರನ್ನು ಸದರಿ ಪ್ರಶಸ್ತಿಗೆ ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ,ಕರ್ನಾಟಕ ಜಾಗೃತಿ ವೇದಿಕೆಯ ಸಂಚಾಲಕ ಮಹೇಶ್ ಬಾಬು ಸುರುವೇ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಸದರಿಯವರಿಗೆ ಈ ಹಿಂದೆಯೂ ಸಹ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ನಾಗರಿಕರ ವೇದಿಕೆ ವತಿಯಿಂದ ಕೊಡ ಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಸಹ ಅವರ ಉತ್ತಮ ತಾಂತ್ರಿಕ ಸೇವೆ ಮತ್ತು ಸಮಾಜ ಸೇವೆಗಾಗಿ ಪ್ರಶಸ್ತಿ ನೀಡಿ ಸತ್ಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ,ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಹಾಗೂ ಗಿಣಿಗೇರಿಯ ಹೊಸಪೇಟೆ ಸ್ಟೀಲ್ ಕಾರ್ಖಾನೆಯ ಅಸಿಸ್ಟೆಂಟ್ ಫೋರ್ ಮೆನ್ ರಾಗಿರುವ ರಾಚಪ್ಪ ಗೊಂಡಬಾಳ ರವರಿಗೆ ಗೋವಾ ಕನ್ನಡಿಗರ ಸಮ್ಮೇಳನದಲ್ಲಿ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಇಲ್ಲಿನ ಅವರ ಸ್ನೇಹಿತರ ಬಳಗ ಮತ್ತು ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 