ಕ್ರೀಡಾ ವಿಜೇತರಿಗೆ ಅಭಿನಂದಿಸಿದ ಆರ್ ಟಿ ಪಾಟೀಲ
RT Patil congratulates sports winners
ಕ್ರೀಡಾ ವಿಜೇತರಿಗೆ ಅಭಿನಂದಿಸಿದ ಆರ್ ಟಿ ಪಾಟೀಲ
ರನ್ನ ಬೆಳಗಲಿ 03 : 03/08್ಷ02ಸಮೀಪದ ನಾಗರಾಳ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚಿಗೆ ಸನ್ 2025-26ನೇ ಸಾಲಿನ ಮಹಾಲಿಂಗಪುರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಜರುಗಿತು.ಕ್ರೀಡೆಗಳು ವ್ಯಕ್ತಿತ್ವವನ್ನು ನಿರ್ಮಿಸುವುದರೊಂದಿಗೆ ದೈಹಿಕ ಸದೃಢತೆಯನ್ನು ನೀಡುತ್ತವೆ.ಬಾಲ್ಯದ ಜೀವನದಲ್ಲಿ ನಿತ್ಯ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಶಾರೀರಿಕ ಸಂಪತ್ತನ್ನು ಗಳಿಸಿ, ಮೊಬೈಲ್ ಇಂದ ದೂರವಿದ್ದು ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿ ಎಂದು ತಿಳಿಸಿದ ಸಂಸ್ಥೆಯ ಅಧ್ಯಕ್ಷರಾದ ಆರ್ ಟಿ ಪಾಟೀಲ ಮತ್ತು ಕಾರ್ಯದರ್ಶಿಗಳಾದ ಆಯ್, ಆಯ್ ಅರಗಂಜಿ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಅಭಿನಂದಿಸಿ ಸತ್ಕರಿಸಿದರು.ಮುಖ್ಯೋಪಾಧ್ಯರಾದ ಅಶೋಕ ಯಡಹಳ್ಳಿ. ಸಹಶಿಕ್ಷಕರಾದ ಕೆ ಎ ಹೊಸಮನಿ, ಜಿ ಆರ್ ನೆಸೂರ, ಆರ್ ಜಿ ಮಾದರ,ಗೋವಿಂದ ಹಾದಿಮನಿ,ವಿ ಎಮ್ ಕಾಂಬಳೆ, ದೈಹಿಕ ಶಿಕ್ಷಕರಾದ ಮಲ್ಲಪ್ಪ ಹಸಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 