ಆರ್.ಎಸ್.ಎಸ್. ದಲಿತರಿಗಲ್ಲವೇ? ದಲಿತರು ಹಿಂದೂಗಳಲ್ಲವೇ? ಜ್ಯೋತಿ ಪ್ರಶ್ನೆ
RSS is not for Dalits? Aren't Dalits Hindus? Jyoti's question
ಲೋಕದರ್ಶನ ವರದಿ
ಕೊಪ್ಪಳ: ಸಂವಿಧಾನ, ನೆಲದ ಕಾನೂನಿನ ಪ್ರಕಾರ ಪ್ರಶ್ನೆ ಮಾಡುವದು ಮೋದಿ ಕಾಲದಲ್ಲಿ ತಪ್ಪು ಎನ್ನುವದಾದರೆ ಸಂವಿಧಾನಕ್ಕೆ ನೆಲೆ ಎಲ್ಲಿ?, ಆರ್.ಎಸ್.ಎಸ್. ಬಗ್ಗೆ ದಲಿತರು ಪ್ರಶ್ನೆ ಮಾಡಬಾರದು ಎಂದರೆ ದಲಿತರು ಹಿಂದೂಗಳೇ ಅಲ್ಲ ಎಂದು ಭಾಗವತ್ ಘೋಷಣೆ ಮಾಡುತ್ತಾರಾ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಪ್ರಶ್ನೆ ಮಾಡಿದ್ದಾರೆ. ಅವರು ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿಯಲ್ಲಿ ದಲಿತರು ಕೇವಲ ಅಲ್ಲಿನ ಮನುವಾದಿ ಜನರ ರಕ್ಷಣೆಗಾಗಿ ಇರುವದು ಎನ್ನುವದಕ್ಕೆ ಬಿಜೆಪಿ ದಲಿತ ಸಂಸದ ರಮೇಶ ಜಿಗಜಿಣಗಿ ಅವರು ಗೃಹ ಸಚಿವ ಪ್ರ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿ ತೋರಿಸಿದ್ದಾರೆ.
ದಲಿತರು ಆರ್.ಎಸ್.ಎಸ್. ತಡವಬಾರದು, ದಲಿತರಿಗ್ಯಾಕೆ ಬೇಕು ಅದರ ಉಸಾಬರಿ ಎನ್ನುವ ಮೂಲಕ ದಲಿತರು ಈಗಲೂ ಶೂದ್ರರು, ಅವರು ಪ್ರಶ್ನೆ ಮಾಡಲು ಸಹ ಯೋಗ್ಯರಲ್ಲ ಎನ್ನುವಂತಿದೆ. ಅಲ್ಲದೇ ಬಿಜೆಪಿಯ ಕೆಲವು ಮುಖಂಡರು ಖರ್ಗೆ ಅವರನ್ನು ಸಂಬೋಧಿಸುತ್ತಾ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಕವಚನದಲ್ಲಿ ಹೀಯಾಳಿಸಿದ್ದಾರೆ, ಮೋದಿಗಿಂತ ಹೆಚ್ಚು ಬಾರಿ ಜನರಿಂದ ಆಯ್ಕೆಯಾದ ಮೋದಿಗಿಂತ ವಯಸ್ಸಿನಲ್ಲಿ ಜ್ಞಾನದಲ್ಲಿ ಬಹಳಷ್ಟು ಎತ್ತರದಲ್ಲಿ ಇರುವ ಖರ್ಗೆ ಅವರ ಬಗ್ಗೆ ಇನ್ನೊಮ್ಮೆ ಸ್ವಾಭಿಮಾನಿ ದಲಿತರು ಸುಮ್ಮನಿರಲ್ಲ.
ಇನ್ನು ದೇಶ ಅಂದರೆ ಧರ್ಮ ಅಲ್ಲ ದೇಶ ಅಂದರೆ ಇಲ್ಲಿನ ಜನ ಅನ್ನುವದು ನೆನಪಿರಲಿ. ಖರ್ಗೆ ಅವರ ಜೊತೆಗೆ ಇಡೀ ದೇಶದ ಸ್ವಾಭಿಮಾನಿ ದಲಿತರೆಲ್ಲರೂ ಇದ್ದೇವೆ. ದೇಶದ ನೂರಾರು ದಲಿತ ಮಹಿಳೆಯರು ದೌರ್ಜನ್ಯ, ಅತ್ಯಾಚಾರ, ಕೊಲೆಗೆ ಬಲಿಯಾದಾಗ ಪ್ರಶ್ನೆ ಮಾಡದ, ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡದ ಜಿಗಜಿಣಗಿ ಈಗ ಮಾಧ್ಯಮದ ಮುಂದೆ ಬಂದಿರುವದು ಅತ್ಯಂತ ನಾಚಿಕೆ ತರಿಸುವ ಕೆಲಸ ಎಂದು ಗೊಂಡಬಾಳ ದೂರಿದ್ದಾರೆ. ಗೃಹ ಸಚಿವರಾಗಿ ಕಾನೂನು ಪ್ರಕಾರ ಪ್ರಶ್ನೆ ಮಾಡುವದನ್ನೇ ತಪ್ಪು ಎನ್ನುವದಾದರೆ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ದಲಿತರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಅಷ್ಟಕ್ಕೂ ಮೋಹನ್ ಭಾಗವತ್ ಅವರು ಮೋದಿಗಿಂತ ದೊಡ್ಟವರಾಗಿರಬಹುದು ಆದರೆ ಸಂವಿಧಾನಕ್ಕಿಂತ ದೊಡ್ಡವರಲ್ಲ. ಒಂದು ಸಂಘಟನೆ, ಅದೂ ಕಾನೂನಿನ ಮಾನ್ಯತೆ ಇಲ್ಲದ ಜನರ ಗುಂಪನ್ನು ಧರ್ಮಕ್ಕೆ ಸಮಾನ ಎನ್ನುವದಾದರೆ ಹಿಂದೂ ಎನ್ನುವದು ಧರ್ಮವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಆದರೆ ಆ ಹಿಂದೂ ಎಂಬ ಜೀವನ ಶೈಲಿಗೆ ಮಾನ್ಯತೆ ಕೊಟ್ಟಿದ್ದು ಅಂಬೇಡ್ಕರ್ ಮತ್ತು ನೆಹರು ಅವರು ಎಂಬ ತಿಳುವಳಿಕೆ ಇದ್ದರೆ ಉತ್ತಮ ಎಂದು ಗೊಂಡಬಾಳ ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 