ದಿ. 22 ರಂದು ಆರ್‌ಸಿಯು ಕೌಶಲ್ಯ ಅಭಿಯಾನ ಕಾರ್ಯಕ್ರಮ

ದಿ. 22 ರಂದು ಆರ್‌ಸಿಯು ಕೌಶಲ್ಯ ಅಭಿಯಾನ ಕಾರ್ಯಕ್ರಮ RCU Skill Campaign Program on 22nd

ಲೋಕದರ್ಶನ ವರದಿ 

ಕಾಗವಾಡ 23: ಬೆಳಗಾವಿ ನಗರದ ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ದಿ. 22 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಶಿಕ್ಷಣದಿಂದ ಉದ್ಯೋಗದತ್ತ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವ ಆರ್‌ಸಿಯು ಕೌಶಲ್ಯ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ ಸಿ.ಎಂ. ತ್ಯಾಗರಾಜ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಮನದಟ್ಟನೆ ಮಾಡಿದರು. 

ದೇಶಪಾಂಡೆ ಫೌಂಡೇಶನ್ ಸದಸ್ಯ ರಹೆಮಾನ ಅಮ್ಮಣಗಿ ಮಾತನಾಡಿ, 90 ದಿನಗಳ ತರಬೇತಿಯಲ್ಲಿ ನೀಡಲಾಗುವ ವಿಷಯಗಳ ಸಂಪೂರ್ಣವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. 

ಈ ವೇಳೆ ಕಾಲೇಜಿನ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎ.ಬಿ. ಪಾಟೀಲ, ಮಹಾವೀರ ಹರದಿ, ಉಪ ಪ್ರಾಂಶುಪಾಲ ಡಾ. ಭರತ ಅಲಸಂದಿ, ಪ್ರೋ. ನಿರ್ಮಲಾ ಗಡಾದ, ಶ್ರೀಮತಿ ಪೂನಮ ಪಾಟೀಲ, ನಾಗವೇಣಿ ಧರೆಣ್ಣವರ ಸೇರಿದಂತೆ ಮಹಾವಿದ್ಯಾಲಯ ಬೋದಕ-ಬೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.