ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ
R.B. Patil insists on putting up a nameplate
ಗಂಗಾವತಿ 23: ಗಂಗಾವತಿ ನಗರಸಭೆ ವ್ಯಾಪ್ತಿಯ ಬಹತೇಕ ಬೀದಿಗಳು ಒಂದೇ ಹೆಸರಿನಿಂದ ಕರೆಯುವುದರಿಂದಾಗಿ ವಿಳಾಸ ಸರಿಯಾಗಿ ದೊರೆಯದೆ ಅಂಚೆ ಇಲಾಖೆ ಸೇರಿದಂತೆ ಹೊಸದಾಗಿ ಮನೆಗೆ ಬರುವ ಅತಿಥಿಗಳು ಇಡೀಯಾಗಿ ಏರಿಯಾ ಎಡತಾಕುವ ಸ್ಥಿತಿ ನಿರ್ಮಾಣವಾಗಿದ್ದು ನಗರಸಭೆ ಪ್ರತೀಬೀದಿಗೂ ಶೀಘ್ರ ಸೂಚನಾ ನಾಮಫಲಕ ಹಾಕುವ ಮುಖೇನ ವಾರ್ಡುಗಳ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಬೇಕೆಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್‌ನ ಡಾ.ಆರ್.ಬಿ.ಪಾಟೀಲ್ ವಕೀಲರು ಒತ್ತಾಯಿಸಿದ್ದಾರೆ.
ನಗರದ ಗುಂಡಮ್ಮ ಕ್ಯಾಂಪ್, ಮುರಹರಿ ನಗರ, ಟೀಚರ್ಸ ಕಾಲೋನಿ, ಲಕ್ಷ್ಮೀ ಕ್ಯಾಂಪ್, ಅಂಬೇಡ್ಕರ್ ನಗರ, ಗಾಂಧಿನಗರ, ವಿರುಪಾಪುರ, ಜಂತಕಲ್, ಚಲುವಾದಿ ವಾಡ, ಬೇಂಡರವಾಡ, ಕಿಲ್ಲಾ ಏರಿಯಾ, ಲಿಂಗರಾಜ್ ಕ್ಯಾಂಪ್, ಹೆಚ್.ಆರ್.ಎಸ್.ಕ್ಯಾಂಪ್, ಬನ್ನಿಗಿಡ ಕ್ಯಾಂಪ್, ಡಗ್ಗಿ ಕ್ಯಾಂಪ್, ಪ್ರಶಾಂತ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಸೂಚನಾ ಫಲಕಗಳಲ್ಲಿದೆ ಸುಮಾರು ಏಳೆಂಟು ಬೀದಿಗಳು ಒಂದೇ ಹಸರಿನಿಂದ ಕರೆಯುವುದರಿಂದಾಗಿ ಮನೆಗಳ ವಿಳಾಸ ಹುಡುಕುವುದು ತುಂಬಾ ಕಷ್ಟದಾಯಕವಾಗುತ್ತಿದೆ, ಕಾರಣ ನಗರಸಭೆ ಪೌರಾಯುಕ್ತರು ಕೂಡಲೆ ಸೂಚನಾ ನಾಮಫಲಕ ಹಾಕುವ ಮೂಲಕ ವಿಳಾಸ ಹುಡುಕಿ ಬರುವವರಿಗೆ ಸರಿಯಾಗಿ ಮಾಹಿತಿ ದೊರೆಯುವಂತೆ ಮಾಡಬೇಕೆಂದು ಪಾಟೀಲರು ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 