ಕ್ವಿಟ್‌ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
Quit India Movement Day and Chaitanya Bharat celebration program inaugurated
ರಾಣಿಬೆನ್ನೂರ 17: ಭಾರತ ಸುಸಂಸ್ಕೃತ ರಾಷ್ಟ್ರ, ಸ್ವಾತಂತ್ರ್ಯ ಹೋರಾಟಗಾರರ ಫಲವೇ ಇಂದಿನ ಭಾರತ. ವಿದೇಶಿಯರು ನಮ್ಮನ್ನು ದಾಸ್ಯತನದಿಂದ ಕಂಡರೂ ಈ ಸುಸಂಸ್ಕೃತ ರಾಷ್ಟ್ರದ ಮೇಲೆ ದಾಳಿ ಮಾಡಲು ಬ್ರಿಟೀಷರು ನಮ್ಮವರನ್ನೇ ನಮ್ಮ ವಿರುದ್ಧ ನಿಲ್ಲುವಂತೆ ಸಂಚು ರೂಪಿಸುತ್ತಿದ್ದರು. ಈ ಗುಲಾಮಗಿರಿತನದಿಂದ ಮುಕ್ತಿಗೊಳಿಸಿದವರು ಸ್ವಾತಂತ್ರ್ಯ ಹೋರಾಟಗಾರರು. ಅವರ ಹೋರಾಟದ ಫಲವಾಗಿ ಲಭಿಸಿದ ಈ ಸ್ವಾತಂತ್ರ್ಯವನ್ನು ನಾವೆಲ್ಲಾ ಸಂರಕ್ಷಿಸಬೇಕಾಗಿದೆ ಎಂದು ಹಾವೇರಿ ಬಸವೇಶ್ವರ ಬಿಇಡಿ ಕಾಲೇಜು ಪ್ರಾಚಾರ್ಯ ಪ್ರೊಽ ಮಂಜುನಾಥ ವಡ್ಡರ ಹೇಳಿದರು.
ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ಕ್ವಿಟ್ ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಮಗೆ ಸುಮ್ಮನೆ ಬಂದಿದ್ದಲ್ಲ ಸಾವಿರಾರು ಜನರ ತ್ಯಾಗ ಮತ್ತು ಬಲಿದಾನವೇ ಇದಕ್ಕೆ ಕಾರಣ, ಅಂತಹ ಸ್ವಾತಂತ್ರ್ಯಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಎನ್.ಎಸ್.ಎಸ್ ಕಾರ್ಯಕ್ರಾಮಾಧಿಕಾರಿಗಳಾದ ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಎಂ.ಎಂ.ಮೃತ್ಯುಂಜಯ, ಶಿವಕುಮಾರ ಬಿಸಲಳ್ಳಿ.ಎ. ಶಂಕರನಾಯ್ಕ,
ಡಾ. ಹೆಚ್. ಐ. ಬ್ಯಾಡಗಿ, ಶ್ರೀಕಾಂತ ಗೌಡಶಿವಣ್ಣನವರ ಸೇರಿದಂತೆ ಮತ್ತಿತರರು ಇದ್ದರು. ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ಕ್ವಿಟ್ ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮವನ್ನು ಪ್ರಾಚಾರ್ಯ ಪ್ರೊಽ ಮಂಜುನಾಥ ವಡ್ಡರ ಉದ್ಘಾಟಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 