ಸ್ವಚ್ಛ ಸವರ್ೇಕ್ಷಣ ಗ್ರಾಮೀಣ ಜನಾಂದೋಲನಕ್ಕೆ ಬಳ್ಳಾರಿಯಲ್ಲಿ ಶೀಘ್ರ ಚಾಲನೆ: ಸಿಇಒ

 

ಬಳ್ಳಾರಿ25: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ನೈರ್ಮಲ್ಯವನ್ನು  ಸುಧಾರಣೆ  ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆ ಅಡಿ ಸ್ವಚ್ಛ ಸವರ್ೆಕ್ಷಣ ಗ್ರಾಮೀಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿಯೂ ಶೀಘ್ರದಲ್ಲಿ ಸ್ವಚ್ಛ ಸವರ್ೇಕ್ಷಣ ಗ್ರಾಮೀಣ ಜನಾಂದೋಲನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.

ಬೃಹತ್ ಪ್ರಮಾಣದಲ್ಲಿ ನಾಗರಿಕರು ಸ್ವಚ್ಛ ಭಾರತ್ ಮಿಷನ್ ಸವರ್ೆಕ್ಷಣೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಚಿತ್ವ ಸ್ವಚ್ಛತೆ ಹಾಘೂ ನೈರ್ಮಲ್ಯದ ಮಹತ್ವದ  ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಮಾಹಿತಿ ಪಡೆಯುವುದು ಈ ಸವರ್ೆಕ್ಷಣೆಯ ಮೂಲ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

        ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮುದಾಯದಲ್ಲಿನ ಸ್ವಚ್ಛತೆಯ ದೃಷ್ಟಿಕೋನ, ಅವರ ಶಿಫಾರಸ್ಸುಗಳು ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾ) ಎಂ.ಐ.ಎಸ್ನಲಿ ್ಲಜಿಯೋಟ್ಯಾಗ್ ಫೋಟೋ ಆರೋಹಿಸಿರುವುದು, ಬಯಲು ಬಹಿದರ್ೆಸೆ ಮುಕ್ತವಾದ ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ ಪಡೆದ ಪ್ರಗತಿ ವರದಿ ಹಾಗೂ ನೈರ್ಮಲ್ಯ, ಸಮಗ್ರ ಶುಚಿತ್ವದ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆ ಮತ್ತು ರಾಜ್ಯಗಳಿಗೆ ಶ್ರೇಯಾಂಕಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿಯೂ ಈ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ ಬಳ್ಳಾರಿ ಜಿಲ್ಲೆಯನ್ನು ಉತ್ತಮಶ್ರೇಣಿ ಅಂಕಗಳನ್ನು ಪಡೆದುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ. 

*ಉತ್ತಮ ಶ್ರೇಣಿ ಪಡೆದ ಜಿಲ್ಲೆ,ರಾಜ್ಯಗಳಿಗೆ ಅ.2ರಂದು ಪುರಸ್ಕಾರ: 2018 ಅಕ್ಟೋಬರ್ 2ರಂದು ನವದೆಹಲಿಯಲ್ಲಿ ನಡೆಯುವ ಗಾಂಧಿ ಜಯಂತಿ ದಿನದಂದು ಕೇಂದ್ರ ಸಕರ್ಾರ ಉತ್ತಮ ಶ್ರೇಣಿ ಪಡೆದ ಜಿಲ್ಲೆ ಮತ್ತು ರಾಜ್ಯಗಳಿಗೆ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಾದ್ಯಂತ 680 ಜಿಲ್ಲೆಗಳು, 6,980 ಗ್ರಾಮಗಳು, 34,000 ಸಾರ್ವಜನಿಕ ಸ್ಥಳಗಳು ಹಾಗೂ 50 ಲಕ್ಷ ನಾಗರಿಕರ ಸಂದರ್ಶನ ಮತ್ತು ಅವರ ಅಭಿಪ್ರಾಯಗಳನ್ನು ಪಡೆಯುವುದು ಈ ಸವರ್ೇಕ್ಷಣ ಮುಖ್ಯ ಉದ್ದೇಶವಾಗಿದೆ ಎಂದು ಜಿಪಂ ಸಿಇಒ ರಾಜೇಂದ್ರ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶೀಘ್ರ ಆರಂಭಿಸಲು ತೀಮರ್ಾನಿಸಲಾಗಿರುವ ಈ ಸವರ್ೇಕ್ಷಣ ಜನಾಂದೋಲನ ಕಾರ್ಯಕ್ರಮದ ಕುರಿತು ಗ್ರಾಪಂ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

*ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ: ಈ ಸಮೀಕ್ಷೆಯನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ನೇಮಿಸಿರುವ ಖಾಸಗಿ ಸಂಸ್ಥೆಗಳು ಕೈಗೊಳ್ಳುತ್ತಿದ್ದು ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸ್ವಚ್ಛತೆಯ ಬಗ್ಗೆ ಜನರ ಗ್ರಹಿಕೆ, ಕಾರ್ಯಕ್ರಮ ಸುಧಾರಣೆಗೆ ಜನರ ಶಿಫಾರಸುಗಳು, ಸ್ವಚ್ಛ ಭಾರತ್ ಮೀಷನ್(ಗ್ರಾ) ಯೋಜನೆಯ ದತ್ತಾಂಶಗಳ ಬಗ್ಗೆ ಸಮೀಕ್ಷೆ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ/ಗ್ರಾಮ ಪಂಚಾಯಿತಿಗಳಲ್ಲಿನ ಸಮಗ್ರ ಶುಚಿತ್ವ, ಸ್ವಚ್ಚತೆ ಕುರಿತು ಕ್ರಮ ವಹಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

*ಸಮೀಕ್ಷೆ/ಮೌಲ್ಯ ಮಾಪನ/ಶ್ರೇಣಿ ನಿಧರ್ಾರ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಒಖನಲ್ಲಿನ ಪ್ರಗತಿಯ ದತ್ತಾಂಶಗಳಿಗೆ ಶೇ.35 ಅಂಕಗಳು ನಿಗಧಿಪಡಿಸಿದೆ. ನಾಗರಿಕರು ನೀಡುವ ಮಾಹಿತಿಯ ಆಧಾರದಲ್ಲಿ ಅಂಕಿ ಅಂಶಗಳ ಸಂಗ್ರಹಣೆಗೆ  ಶೇ.35 ಅಂಕಗಳು, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯಕೇಂದ್ರ, ಸಂತೆ, ಬಸ್ ನಿಲ್ದಾಣ ಮತ್ತು ಧಾಮರ್ಿಕ ಸ್ಥಳಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳ ನೇರ ಪರಿವೀಕ್ಷಣೆಗೆ ಶೇ.30 ರಷ್ಟು ಅಂಕಗಳನ್ನು ನಿಗಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಣಣಠಿ://ತಿಚಿಛಿಛಚಿಡಿಚಿಣಟಠಟಿ.ರಠತ.ಟಿ/ಖಖಉ2018/ ಸಂಪಕರ್ಿಸಬಹುದು.