ಮಾಸ್ಕೋ, ಟೆಲ್ ಅವಿವ್, ಡಿ 8 :ಇಸ್ರೇಲ್ ಭದ್ರತೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚರ್ಚೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೆತನ್ಯಾಹು ಶನಿವಾರ ರಾತ್ರಿ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರು ಇರಾನ್, ಸಿರಿಯಾದ ಪರಿಸ್ಥಿತಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಇಸ್ರೇಲ್ ಭದ್ರತಾ ಅಗತ್ಯಗಳು, ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಮತ್ತು ರಷ್ಯಾ ಮಿಲಿಟರಿ ಪಡೆಗಳ ನಡುವಿನ ಸಂಘರ್ಷ ತಡೆಯುವ ಅಗತ್ಯದ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇಸ್ರೇಲ್ ಪ್ರಾಂತ್ಯಕ್ಕೆ ಶನಿವಾರ ಸಂಜೆ ಮೂರು ರಾಕೆಟ್ ಹಾರಿಸಲಾಗಿದ್ದು ಎರಡನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ ತಿಳಿಸಿದೆ.