ಕನಿಷ್ಟ 50 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ
Purchase at least 50 quintals of maize at support price
ಬೀಳಗಿ 03: ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಎಲ್ಲ ತಾಲೂಕಿನ ಎಪಿಎಮ್‌ಸಿಯಲ್ಲಿ ತೆರೆದು ಕನಿಷ್ಟ 50 ಕ್ವಿಂಟಲ್ ಕೇಂದ್ರ ಸರಕಾರದ 2400 ಬೆಂಬಲ ಬೆಲೆಯಲ್ಲಿ ಖರೀದಿಸಬೇಕು, ಅತಿವೃಷಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ, ವಿಮೆ ಕಟ್ಟಿದವರಿಗೆ ಕ್ಲೇಮ್ ನ್ನು ಶೀಘ್ರದಲ್ಲಿ ಕೊಡಿಸಬೇಕೆಂದು ಆಗ್ರಹಿಸಿ ಬುಧವಾರ ದಿವಸ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ನೇತ್ರತ್ವದಲ್ಲಿ ತಾಲೂಕು ಆಡಳಿತ ಸೌಧದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ ತಹಶೀಲ್ದಾರ ವಿನೋದ ಹತ್ತಳ್ಳಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬಾಗಲಕೋಟೆ ಜಿಲ್ಲೆಯ ರೈತರು 85,000 ಹೆಕ್ಟರ್ ಬೆಳೆಯಲಾಗಿದ್ದು, ಪ್ರತಿ ಕ್ವಿಂಟಲ್ 1500 ರಿಂದ 1800 ವರೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗಿದ್ದು, ಬಿತ್ತನೆಗೆ ಮಾಡಿದ ಖರ್ಚು ಬರದೇ ತೊಂದರೆ ಅನುಭವಿಸುತ್ತಿದ್ದು, ಅಳಿದುಳಿದ ಮೆಕ್ಕೆಜೋಳವನ್ನು ಜಮಖಂಡಿ ಬಾಗಲಕೋಟೆ ಹೋಗಿ ಗುಣಮಟ್ಟವನ್ನು ಪರೀಕ್ಷಿಸಿ ಅಲ್ಲಿ ಪಾಸಾದರೆ ನಂತರ ಧಾರವಾಡಕ್ಕೆ ಹೋಗಿ ಮಾರಾಟ ಮಾಡಬೇಕು ಅಲ್ಲಿಗೆ ಹೋಗಬೇಕಾದರೆ ಪ್ರತಿ ಕ್ವಿಂಟಲ್‌ಗೆ 200 ರಿಂದ 300 ವರೆಗೆ ಖರ್ಚು ಆಗುತ್ತದೆ.
ಅದರಲ್ಲಿ ಪಾಸಾದರೆ 25 ಕ್ವಿಂಟಲ್ ಮೆಕ್ಕೆಜೋಳವನ್ನು ಕೆಎಂಎಫ್ ಪಶು ಆಹಾರ ಘಟಕದವರು ಖರೀದಿಸುತ್ತಾರೆ, ಮತ್ತು ಕೆರೂರ್ ಪಿಕೆಪಿಎಸ್ ನಲ್ಲಿ 5 ಕ್ವಿಂಟಲ್ ಖರೀದಿಗೆ ಅವಕಾಶ ನೀಡಿದ್ದು ಸರ್ಕಾರ ಅವೈಜ್ಞಾನಿಕ ಆದೇಶ ಹೊರಡಿಸಿದ್ದು ಸರಿಯಾದುದ್ದಲ್ಲ ತಕ್ಷಣ ಕೇಂದ್ರ ಸರ್ಕಾರದ 2400 ಬೆಂಬಲ ಬೆಲೆ ರಾಜ್ಯ ಸರ್ಕಾರ 600 ರೂಗಳನ್ನು ಹೆಚ್ಚಿಗೆ ನೀಡಿ ಒಟ್ಟು 3000 ಗಳನ್ನು ಕನಿಷ್ಟ 50 ಕ್ತ್ವಿಂಟಲ್ ಖರೀದಿಸಬೇಕು, ಧಾರವಾಡ ಕೆಎಂಎಫ್ ಬದಲು ಆಯಾ ತಾಲೂಕು ಕೇಂದ್ರದ ಎಪಿಎಂಸಿಯಲ್ಲಿ ಖರೀದಿಸುವಂತೆ ಅದೇಶಿಸಬೇಕು ಎಂದು ಒತ್ತಾಯಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 