ಇಂಡಿಯಲ್ಲಿ ಪುರಂದರದಾಸರ ಜಯಂತಿ ಆಚರಣೆ
Purandaradas Jayanti Celebration in Indi
ಇಂಡಿ 19: ಪುರಂದರದಾಸರು ತಾವು ಸ್ವತಃ ರಚಿಸಿರುವ ಕೀರ್ತನೆಗಳ ಮೂಲಕ ಜಗದೋಧ್ದಾರ ಮಾಡಿದ ಮಹಾನುಭಾವರು ಎಂದು ವೆಂಕಟೇಶ ಕುಲಕರ್ಣಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಇಂಡಿ ಪಟ್ಟಣದ ಪುರಂದರದಾಸರ ವೃತ್ತದಲ್ಲಿ ಪುರಂದರದಾಸರ ಜಯಂತ್ಯೋತ್ಸವ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು ಎಂದು ಬಿರುದು ಪಡೆದುಕೊಂಡಿದ್ದಾರೆ. ಇದಲ್ಲದೇ ದಾಸ ಸಾಹಿತ್ಯದ ಚಕ್ರವರ್ತಿ ಪುರಸ್ಕಾರ ಪಡೆದುಕೊಂಡಿದ್ದಾರೆ. ಇವರ ಅಂಕಿತ ನಾಮ ಪುರಂದರ ವಿಠ್ಠಲ ಆಗಿದೆ ಎಂದರು. 1584 ರಲ್ಲಿ ಅಳಮಟ್ಟಿಯಲ್ಲಿ ಜನಿಸಿದ ಇವರು ತಮ್ಮ ಜೀವನದುದ್ದಕ್ಕೂ ತಾವೇ ನಿರ್ಮಿಸಿದ ಕೀರ್ತನೆಗಳನ್ನು ಹಾಡಿ ಜನರನ್ನು ಸನ್ಮಾರ್ಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ಜಯಂತ್ಯೋತ್ಸವದಲ್ಲಿ ಪ್ರೇಮಾ ಕುಲಕರ್ಣಿ, ಅಂಬುಜಾ ಪಾಟೀಲ, ಲಕ್ಮೀ ಕುಲಕರ್ಣಿ, ಹೇಮಲತಾ ಕುಲಕರ್ಣಿ, ಅರುಣಾ ಕುಲಕರ್ಣಿ, ಶೋಭಾ ಪಾಟೀಲ, ರಾಘವೇಂದ್ರ ಕುಲಕರ್ಣಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 