ಪುಣ್ಯ ಸ್ಮರಣೆ: ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಪುಣ್ಯ ಸ್ಮರಣೆ: ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ  Punya Smarane: Prize distribution to the winners of the essay competition

ಪುಣ್ಯ ಸ್ಮರಣೆ: ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ  

 ರಾಣೇಬೆನ್ನೂರು 11: ಇಲ್ಲಿನ ಪಂಪಾಪತಿ ಸಭಾಭವನದಲ್ಲಿ ಇತ್ತೀಚೆಗೆ ಕೆ.ಎಲ್‌.ಇ. ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ಕಲಾ ವಾಣಿಜ್ಯ ಮಹಾವಿದ್ಯಾಲಯವು, ಕೆ. ಎಫ್‌. ಪಾಟೀಲ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ, ಲಿಂಗೈಕ್ಯ "ಕೆ.ಎಫ್‌. ಪಾಟೀಲ್ "ಜೀ ಅವರ 29ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಧಾರವಾಡದ ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ ಅವರು, ಸಮಾಜದಲ್ಲಿ ಅಂದು  ಹೆಣ್ಣು ಮಕ್ಕಳ ಶಿಕ್ಷಣವೇ ನಿಷೇಧವಿದ್ದ ಕಾಲದಲ್ಲಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ತತ್ವದ ಅಡಿಯಲ್ಲಿ ಪಾಟೀಲರು ದಿಟ್ಟ ನಿರ್ಧಾರದಿಂದ ಸಂಸ್ಥೆ ಪ್ರಾರಂಭಿಸಿದ್ದರಿಂದ ಇಂದು ಲಕ್ಷಾಂತರ  ಮಹಿಳೆಯರು ಶಿಕ್ಷಣ ಕಲಿತಂತಾಗಿದೆ  ಎಂದರು. ಕೆ.ಎಲ್‌.ಎ. ಶಿಕ್ಷಣ ಸಂಸ್ಥೆ, ಸಮಾಜಮುಖಿ ಸೇವೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಶಿಕ್ಷಣ, ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ತನ್ನ ಶಿಕ್ಷಣ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡು ದೇಶವಿದೇಶಗಳಲ್ಲಿ ಹೆಸರು ಮಾಡುತ್ತಿರುವುದು ನಾಡಿಗೆ ಮತ್ತು ದೇಶಕ್ಕೆ  ಮಾದರಿ ಮತ್ತು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.   ಸ್ಥಾನಿಕ ಕಾರ್ಯಧ್ಯಕ್ಷ, ವಿ.ಪಿ.ಲಿಂಗನಗೌಡ್ರ ಅವರು ಮಾತನಾಡಿ, ಪಾಟೀಲರ ಕನಸು ನನಸಾಗಿದೆ. ಕೆಎಲ್‌ಇ ಸಂಸ್ಥಾಪಕ ಅಧ್ಯಕ್ಷರಾದ ಪ್ರಭಾಕರ್ ಕೋರೆ ಅವರು, ಎಲ್ಲ ಹಂತದ ಶಿಕ್ಷಣ ಪರಿಪೂರ್ಣತೆಗೆ ಎಲ್ಲ ರೀತಿಯಲ್ಲಿಯೂ ಸಹಾಯ ಸಹಕಾರ ನೀಡುತ್ತಿದ್ದಾರೆ.        

ಕೋರೆ ಅವರ ಬಹು ದೂರದೃಷ್ಟಿ ಸಾಕಷ್ಟಿದೆ. ಮುಂದಿನ ದಿನಮಾನಗಳಲ್ಲಿ ಹಲವು ವಿಭಾಗಗಳು ತೆರೆಯಬೇಕೆನ್ನುವ ಉದ್ದೇಶ ಹೊಂದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಾವಿತ್ರ ಎನ್ ಕೋಟಿಹಾಳ,ನೇಹಾ ಪಿ ಪಟಕರ, ಚೇತನಾ ಸಿ. ಪಾಟೀಲ್, ಶಿವಲೀಲಾ ಹ. ಮಲ್ಲೂರ, ದೀಪಾ ಸಂ. ಇಂಗಳೆ, ಭವಾನಿ ಯಲಿಗಾರ, ಅವರುಗಳಿಗೆ ನಗದು ಮೊತ್ತ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.      ಪ್ರಾಚಾರ್ಯ ನಾರಾಯಣ ನಾಯಕ್ ಎ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ ನಾಗರಾಜ ಗವಿಯಪ್ಪನವರ, ಐಕ್ಯೂ ಎ.ಸಿ ಸಂಯೋಜಕಿ  ಪ್ರೊ,ಸಾಯಿಲತಾ ಮಡಿವಾಳರ, ಕಾರ್ಯದರ್ಶಿ ಯಶಸ್ವಿನಿ ಜ್ಯೋತಿ ಬಣ್ಣದ ಪ್ರೊರೇಖಾ ಶಿಡೇನೂರ, ಪ್ರೋ,ಶೋಭಾ ದೊಡ್ಡನಾಗಳ್ಳಿ  ವಿದ್ಯಾಶ್ರೀ, ರತ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.