ಮಂಗಳೂರು ನಗರದಲ್ಲಿ ಪಂಪ್ ವೆಲ್ ಮೇಲ್ಸೇತುವೆ ಲೋಕಾರ್ಪಣೆ
ಮಂಗಳೂರು, ಜ 31, ಮಂಗಳೂರು ನಗರದ ದೀರ್ಘಕಾಲದ ಬಾಕಿ ಉಳಿದುಕೊಂಡಿದ್ದ ಪಂಪ್ ವೆಲ್ ಮೇಲ್ಸೇತುವೆ ಯನ್ನು ಜಿಲ್ಲಾಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಶುಕ್ರವಾರ ಉದ್ಘಾಟಿಸಿದರು. ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಬಹುತೇಕ 10 ವರ್ಷಗಳ ವಿಳಂಬ, ಒಂದರ ನಂತರ ಒಂದರಂತೆ ಹಲವು ಅಂತಿಮ ಗಡುವುಗಳು ಮುಗಿದ ನಂತರ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ- ಕುಂದಾಪುರ ನಡುವಣ ನಾಲ್ಕು ಪಥ ಮಾರ್ಗದ ಭಾಗವಾಗಿ ಪಂಪ್ ವೆಲ್ ಮೇಲ್ಸೇತುವೆ ಕೊನೆಗೆ ಶುಕ್ರವಾರ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಂಡಿತು. ನಂತೂರು- ಎನ್ ಐ ಟಿ ಕೆ ಸರತ್ಕಲ್ ಮಾರ್ಗ ಹೊರತುಪಡಿಸಿ, ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ- ಕುಂದಾಪುರ ನಡುವಣ ನಾಲ್ಕುಪಥ ಮಾರ್ಗದ ಕಾಮಗಾರಿ 2010 ಸೆಪ್ಟಂಬರ್ ನಲ್ಲಿ ಆರಂಭಗೊಂಡಿತ್ತು, ಪಂಪ್ ವೆಲ್ (ಮಹಾ ವೀರ ಸರ್ಕಲ್) ಮೇಲ್ಸೇತುವೆ ಈ ಯೋಜನೆಯ ಭಾಗವಾಗಿತ್ತು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 