ಶ್ರೀನಗರ, ಜೂನ್ 19,ಪುಲ್ವಾಮಾ ಗುಂಡಿನ ಚಕಮಕಿ ವೇಳೆ ತಲೆಮರೆಸಿಕೊಂಡು, ಧಾರ್ಮಿಕ ಸ್ಥಳದ ಬಳಿ ಅಡಗಿದ್ದ ಉಗ್ರರಿಬ್ಬರು ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಹತರಾಗಿದ್ದು, ಮೃತರಾದ ಒಟ್ಟು ಉಗ್ರರ ಸಂಖ್ಯೆ 3ಕ್ಕೇರಿದೆ. ಈ ಇಬ್ಬರು ಉಗ್ರರನ್ನು ಯಾವುದೇ ಗುಂಡಿನ ದಾಳಿ ಅಥವಾ ಸ್ಫೋಟಕ ಬಳಸದೆ ಕೊಲ್ಲಲಾಯಿತು ಎಂದು ಕಾಶ್ಮೀರ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಕಾಶ್ಮೀರ ಶ್ರೇಣಿ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.ಪುಲ್ವಾಮಾದ ಪಂಪೋರ್ ಗ್ರಾಮದ ಮೀಗ್ ಎಂಬ ಹಳ್ಳಿಯಲ್ಲಿ ಉಗ್ರರು ಇರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ವಿಶೇಷ ಕಾರ್ಯಾಚರಣಾ ಪಡೆ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಸೈನಿಕರು ಗುರುವಾರ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.ಆದರೆ, ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದರು. ಭದ್ರತಾ ಪಡೆಗಳೂ ಪ್ರತೀಕಾರ ತೀರಿಸಿಕೊಂಡವು. ಎನ್‌ಕೌಂಟರ್‌ನಲ್ಲಿ ಉಗ್ರನನ್ನು ಕೊಲ್ಲಲಾಯಿತು. ನಂತರ, ಇನ್ನೂ ಇಬ್ಬರು ಉಗ್ರರು ಹತ್ತಿರದ ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಭದ್ರತಾ ಪಡೆಗಳು ಧಾರ್ಮಿಕ ಸ್ಥಳದೊಳಗೆ ಪ್ರವೇಶಿಸಿಲ್ಲ ಅಥವಾ ಗುಂಡಿನ ದಾಳಿ ನಡೆಸಿಲ್ಲ ಎಂದು ಐಜಿಪಿ ಬಹಿರಂಗಪಡಿಸಿದ್ದಾರೆ. "ನಾವು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಲಿಲ್ಲ. ಅಶ್ರುವಾಯು ಶೆಲಗಳನ್ನು ಬಳಿ ಉಗ್ರರಿಬ್ಬರನ್ನೂ ತಟಸ್ಥಗೊಳಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.