ಹುಲ್ಯಾಳದಲ್ಲಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರದ ಗರ್ಭಗುಡಿ ಚೌಕಟ್ಟು ಪೂಜೆ

ಹುಲ್ಯಾಳದಲ್ಲಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರದ ಗರ್ಭಗುಡಿ ಚೌಕಟ್ಟು ಪೂಜೆ  Puja for the sanctum sanctorum doorway of the Mallikarjuna Shivayogi temple in Hulyal


ಜಮಖಂಡಿ 07: ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರದ ಗರ್ಭಗುಡಿ ಚೌಕಟ್ಟು ಹಾಗೂ ಹೊಸ್ತಿಲು ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.  

ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯ ನೆರವೇರಿಸಿದರು. ಪುಂಡಲೀಕ ಶಾಸ್ತ್ರಿಗಳು ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.  

ಮಾವಿನ ಎಲೆ, ಹೂವಿನ ಹಾರ ಹಾಗೂ ರಂಗೋಲಿಯಿಂದ ಅಲಂಕರಿಸಲಾಗಿತ್ತು. ಅರಿಶಿನ, ಕುಂಕುಮ, ಶ್ರೀಗಂಧ, ಅಕ್ಷತೆ, ತೆಂಗಿನಕಾಯಿ, ಕಪೂರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.  

ಶಿರೋಳದ ಶಂಕರಾರೂಢ ಶ್ರೀಗಳು, ಹುಬ್ಬಳ್ಳಿಯ ವೀರಭಿಕ್ಷಾವೃತ್ತಿಮಠದ ಶಿವಶಂಕರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಂದಿರ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವ ಶಿಲ್ಪಿಗಳಿಗೆ ವಸ್ತ್ರದಾನ ಮಾಡಲಾಯಿತು.