ದೇಶದ ಅಭಿವೃದ್ಧಿಗೆ ಸಾರ್ವಜನಿಕರ ಸಹಾಯ ಸಹಕಾರ ನೀಡುವುದು ಅಗತ್ಯ
Public support and cooperation are essential for the development of the country.
ಸವಣೂರ 18:ದೇಶದ ಭವಿಷ್ಯ ನಿರ್ಮಾಣ ಮಾಡುತ್ತಿರುವ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಾಯ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಿಕ್ಷಣ ಪ್ರೇಮಿಗಳಾದ ಗಂಗಾಧರ ಕನವಳ್ಳಿ ಹೇಳಿದರು.
ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಟಿಎಂಎಇಎಸ್ ಪ್ರೌಢ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾತಮಿಕ ಶಾಲೆ ಆಯೋಸಿದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಅವರು ಮಾತನಾಡಿದರು.
79ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ದಿನ ದೇಶದ ಹಿತಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ.ದೇಶದ ಭವಿಷ್ಯ ಶಾಲೆಗಳಲ್ಲಿ ಅಡಕವಾಗಿದೆ.ಶಿಕ್ಷಕರು ಉತ್ತಮ ಗುಣಾತ್ಮಕ ಶಿಕ್ಷಣ ನೀಡಿದಾಗ ಗ್ರಾಮ ಹಾಗೂ ದೇಶ ಉತ್ತಮವಾಗಲಿ ಸಾಧ್ಯವಾಗಲಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಕಲಕೋಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರಭಾರಿ ಪ್ರಧಾನ ಗುರುಗಳಾದ ಪಿ.ಕೆ.ಹಳೇರಿತ್ತಿ ಮಾತನಾಡಿ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ಸದಾ ಕ್ರೀಯಾಶೀಲವಾಗಿ ಕೆಲಸ ಮಾಡಬೇಕಾಗಿದೆ. ಗುರುಗಳನ್ನು ಮಿರಿಸುವ ಶಿಷ್ಯದಿಂರು ಬೆಳೆದಾಗ ನಮ್ಮ ಬದುಕು ಸಾರ್ಧಕವಾಗಲಿದೆ. ಈ ವೇದಿಕೆ ಮೇಲೆ ಇರುವ ಬಹುತೇಕರು ನನ್ನ ಶಿಷ್ಯಂದಿರು ಎಂಬುವುದು ಹೆಮ್ಮೆಯಾಗಿದೆ.ದೇಶ ಸ್ವಾತಂತ್ರ್ಯ ಭಾರತೀಯರ ತ್ಯಾಗ ಬಲಿದಾನದಿಂದ ದೊರಕಿದೆ. ಮಕ್ಕಳಿಗೆ ದೇಶ ಭಕ್ತಿ ದೇಶ ಪ್ರೇಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಿಸಬೇಕು.79 ನೇ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಗೆ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.ಟಿಎಂಎಇಎಸ್ ಪ್ರೌಢ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮಾಲತೇಶ ತಳವಾರ,ಶಿಕ್ಷಣ ಪ್ರೇಮಿ ಸೋಮಯ್ಯ ಹಿರೇಮಠ ಹಾಗೂ ಗ್ರಾಪಂ ಸದಸ್ಯರಾದ ನಿಂಗಪ್ಪ ಆರೇರ,ವಿರೇಶ ಚಪ್ಪರದಹಳ್ಳಿಮಠ ಅವರು ಸ್ವಾತಂತ್ರ್ಯೋತ್ಸವ ಹಾಗೂ ಶಾಲೆ ಅಭಿವೃದ್ಧಿಯ ಕುರಿತು ಮಾತನಾಡಿದರು.
ಪ್ರಾಥಮಿಕ ಶಾಲೆಯಲ್ಲಿ 2ವರ್ಷಗಳ ಕಾಲ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ.ಕೆ,ಇಚ್ಚಂಗಿ ಅವರನ್ನು ಶಾಲೆ ಹಾಗೂ ಗ್ರಾಮಸ್ಥರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ನಂತರ ಮಾತನಾಡಿದ ಪಿ.ಕೆ.ಇಚ್ಚಂಗಿ ಅವರು ಈ ಊರಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದು,ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಹಿರೇಮುಗದೂರ ಗ್ರಾಮದ ಮಹದೇವಯ್ಯ ಮೇವುಂಡಿ ಇವರ ಮಕ್ಕಳ ಸಂಸ್ಥೆಯಾದ ಇನೋವಸ್ ಟೆಕ್ನಿಕಲ್ ಸಲ್ಯೂಷನ್ಸ್ ವತಿಯಿಂದ ಅವರ ತಾಯಿ ದಿಽಽ ಶಿವಲೀಲಾ ಮೇವುಂಡಿ ಅವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡಿದರು.
ಶಾಲೆಗೆ ಸಹಾಯ ಮಾಡಿದ ಮಹದೇವಯ್ಯ ಮೇವುಂಡಿಮಠ,ಶರಣಯ್ಯ ಕೆಂಭಾವಿಮಠ, ಮಂಜು ಮಾಲಿ,ಉಳಿವೆಪ್ಪ ಹರಿಮುರಿ,ಮರಿಯಪ್ಪ ನಡುವಿನಮನಿ,ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ ಅವರನ್ನು ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಪ್ರೌಢ ಶಾಲೆ ಹಾಗೂ ಪೂರ್ವ ಪ್ರಾಥಮಿಕ-ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಷಣ ಮಾಡಿದರು.ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ ಬಾರ್ಕಿ ಶಿಕ್ಷಣ ಪ್ರೇಮಿಗಳಾದ ಸುರೇಶ ಬರದೂರ,ಪರಮಯ್ಯಸ್ವಾಮಿ ಹಿರೇಮಠ,ಪರಶುರಾಮ ಆರೇರ,ಕರಬಸವ ಕಡ್ಲೆಪ್ಪನವರ,ಶಿವರಾಜ ಮೇವುಂಡಿ,ಕೊಟೆಪ್ಪ ತಳವಾರ, ಶರಣಪ್ಪ ಸೋಮಸಾಗರ,ಸೋಮಯ್ಯ ಎಂ,ರಮೇಶ ಆರೇರ,ರಾಕೇಶ ಹಿರೇಮಠ,ಸಂಜೀವ ಮಾಲಿ,ಚಂದ್ರು ಮೇಲ್ಮರಿ,ಉಪಾಧ್ಯಕ್ಷರಾದ ಲಕ್ಷ್ಮೀ ನಡುವಿನಮನಿ,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಮಲ್ಲಪ್ಪ,ಫಕ್ಕಿರೇಶ ರಿತ್ತಿ,ಶರಣಪ್ಪ ಕೆ,ಗುಡ್ಡಪ್ಪ ಎನ್,ಕವಿತಾ ಎಸ್,ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು,ಬಿಸಿಯೂಟ ಸಿಬ್ಬಂದಿಗಳು,ಶಿಕ್ಷಣ ಪ್ರೇಮಿಗಳು,ಉಭಯ ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 