ಸಾರ್ವಜನಿಕ ಸೇವೆಯೇ ನನ್ನ ಮೂಲ ಧ್ಯೇಯ : ಪ್ರಕಾಶ ಚವ್ಹಾಣ
Public service is my main mission: Prakash Chavan
ಚಡಚಣ 14 : ಜನರ ಸೇವೆಯೇ ಜನಾರ್ಧನ ಸೇವೆ ಎಂಬ ಧ್ಯೇಯದೊಂದಿಗೆ ಹಾಗೂ ಪ್ರಧಾನಿ ಮೋದಿ ಅವರ ಕಾರ್ಯ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಪಣ ತೊಟ್ಟಿದ್ದೇನೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ರಾಷ್ಟರೀಯ ಬಂಜಾರಾ ಪರಿಷತ್ ರಾಜ್ಯಾಧ್ಯಕ್ಷ ಪ್ರಕಾಶ ಚವ್ಹಾಣ ಅವರು ಹೇಳಿದರು. ಬಿರು ಬಿಸಿಲ ತಾಪತ್ರಯ ತಣಿಸಲು ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಬುಧವಾರ ತಮ್ಮ ಸಂಸ್ಕಾರ ಫೌಂಡೇಶನ್ ವತಿಯಿಂದ ಉಚಿತ ಕೊಡೆಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ದೇಶ ಸೇವೆ, ಸಮಾಜ ಸೇವೆ ನನ್ನ ಮೇಲೆ ಪರಿಣಾಮ ಬೀರಿದ್ದು ಹಾಗೂ ಉತ್ತರ್ರದೇಶ ಮುಖ್ಯಮಂತ್ರಿ ಯೋಗಿ ಆಧಿನಾಥ ಅವರ ಜನಸೇವೆಯ ಪ್ರಭಾವಕ್ಕೊಳಗಾಗಿ ನಾನು ಸಹ ಸಮಾಜಸೇವೆ ಮಾಡಬೇಕು ಎಂದು ತೀರ್ಮಾನಿಸಿ, ವಿಜಯಪುರ ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಬಿರು ಬಿಸಿಲಿನಲ್ಲಿ ತಮ್ಮ ಜೀವದ ಹಂಗು ತೊರೆದು ಯಾವುದೇ ನೆರಳಿನ ಆಸರೆ ಇಲ್ಲದೆ ವ್ಯಾಪಾರ ಮಾಡುವದನ್ನು ನೋಡಿ ನಮ್ಮ ಸಂಸ್ಕಾರ ಫೌಂಡೇಶನ್ ವತಿಯಿಂದ ಅವರಿಗೆ ಕೊಡೆಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದು ಹೇಳಿದ ಅವರು, ಇಂದು ಚಡಚಣ ಪಟ್ಟಣದಲ್ಲಿ ಕೊಡೆಗಳನ್ನು ವಿತರಿಸಲಾಗುತ್ತಿದೆ.
ನಾಳೆಯಿಂದ ಜಿಲ್ಲೆಯ ಎಲ್ಲ ಗ್ರಾಮೀಣ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕೊಡೆಗಳನ್ನು ವಿತರಿಸುತ್ತೇವೆ.ಜನರ ಸೇವೆಯೇ ಜನಾರ್ಧನ ಸೇವೆ ಎಂಬ ಮನೋಭಾವದಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಗೋಪಾಲ ಮಹಾರಾಜರು, ಸುರೇಶ ಚವ್ಹಾಣ, ವಿಜಯ ಚವ್ಹಾಣ, ಮಲ್ಲಿಕಾರಜುನ ಭೈರಗೊಂಡ, ಮಹೇಶ ಶಿಂಧೆ, ಪ್ರವೀಣ ಕಲ್ಯಾಣಶೆಟ್ಟಿ, ರಾಮ ಮಾಲಾಪೂರ, ಶಾಂತುಗೌಡ ಬಿರಾದಾರ, ಭಿಮಾಶಂಕರ ವಾಳಿಖಿಂಡಿ, ದಯಾನಂದ ಕಸಮೂಳಿ, ರಾಹುಲ ಲೋಖಂಡೆ, ರವಿ ಶಿಮಧೆ, ರೇವಣಸಿದ್ದ ಗೋಡಖೆ, ಭೀಮನಗೌಡ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.14ಸಿಡಿಎನ್1 : ಮುಖಂಡ ಪ್ರಕಾಶ ಚವ್ಹಾಣ ಅವರು ತಮ್ಮ ಸಂಸ್ಕಾರ ಫೌಂಡೇಶನ್ ವತಿಯಿಂದ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಬುಧವಾರ ಉಚಿತ ಕೊಡೆಗಳನ್ನು ವಿತರಿಸಿದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 