ಸಮಾಜದಲ್ಲಿ ಸಹಕಾರ ಕ್ಷೇತ್ರ ಬೆಳೆಯಲು ಸಾರ್ವಜನಿಕರ ಸಹಕಾರ ಬಹುಮುಖ್ಯ
Public cooperation is crucial for the growth of the cooperative sector in society
ಲೋಕದರ್ಶನ ವರದಿ
ಹಾವೇರಿ 21: ಸಮಾಜದಲ್ಲಿ ಸಹಕಾರ ಕ್ಷೇತ್ರ ಬೆಳೆಯಲು ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದ್ದು, ಹಾವೇರಿಯಲ್ಲಿರುವ ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇನ್ನೂ ಉಜ್ವಲವಾಗಿ ಬೆಳೆಯಲಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಶುಭ ಕೋರಿದರು.
ಇಲ್ಲಿನ ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಕಛೇರಿಯಲ್ಲಿ ಜರುಗಿದ 2ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತ ಸೇವಾ ಪೋರ್ಸ್(ರಿ) ರಾಜ್ಯಾಧ್ಯಕ್ಷರು ಹಾಗೂ ಸೊಸೈಟಿಯ ಅಧ್ಯಕ್ಷರಾದ ಏಳಕೋಟೆಪ್ಪ ಎಸ್.ಪಾಟೀಲ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ) ವತಿಯಿಂದ ಗೌರವಿಸಿ ಸನ್ಮಾನಿಸಿ ಅವರು ಮಾತನಾಡಿದರು.
ಜನರು ಆರ್ಥಿಕವಾಗಿ ಬಲಿಷ್ಠರಾಗಲು ಸಹಕಾರಿ ಸಂಘ-ಸೊಸೈಟಿಗಳ ಪಾತ್ರ ಮುಖ್ಯವಾಗಿವೆ.ಹಾವೇರಿಯಲ್ಲಿ ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಏಳಕೋಟೆಪ್ಪ ಎಸ್ ಪಾಟೀಲ ಅವರು ಜನರಿಗೆ ಅನುಕೂಲವಾಗಲಿ ಹಾಗೂ ಜನರು ಅರ್ಥಿಕವಾಗಿ ಸಬಲರಾಗಲಿ ಎಂಬ ಉತ್ತಮವಾದ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ತಮ್ಮ ಟೀಮಿನವರೊಂದಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ಉಜ್ವಲವಾಗಿ ಬೆಳೆಯಲಿ.ಇನ್ನೂ ಹೆಚ್ಚು ಜನರಿಗೆ ಅನುಕೂಲವಾಗಲಿ ಎಂದು ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಶುಭ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಸಮಿತಿ(ರಿ)ಯ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ,ಸಮಾಜದ ಮುಖಂಡರಾದ ಪ್ರಕಾಶ ಪೂಜಾರ,ಕರಿಯಪ್ಪ ಕಟ್ಟಿಮನಿ,ಬಸವಣ್ಣೆಪ್ಪ ಅರಳಿಹಳ್ಳಿ,ಬಸವರಾಜ ಸಂಗಣ್ಣನವರ,ನಾಗೇಂದ್ರ್ಪ ಹರಿಜನ,ಪರಮೇಶ ಮಲ್ಲಮ್ಮನವರ,ರಮೇಶ ಹರಿಜನ,ನಾಗರಾಜ ಎ.ಕೆ.ನಿಂಗಪ್ಪ ಕಡೂರ,ಪ್ರಕಾಶ ಬಣಕಾರ, ಸುರೇಶ ನಾಗಣ್ಣನವರ,ಫಕ್ಕೀರೇಶ ಬಣಕಾರ, ಮಲ್ಲಪ್ಪ ದೇವರಮನಿ,ರಾಜು ಹಿತ್ತಲಮನಿ, ಸುನೀತಾ ಹಲಗೇರಿ,ಯಲ್ಲಪ್ಪ,ಮಾರುತಿ ಬಣಕಾರ,ಹನಮಂತ ಕಡಹಳ್ಳಿ,ಮಾಲತೇಶ ಪಾಟೀಲ,ಪರಶುರಾಮ ಮಲ್ಲಮ್ಮನವರ,ರವಿ ದೊಡ್ಡಮನಿ, ಶಂಕರ ಹರಿಜನ,ರಾಜು ಮಾಳಗಿ,ಮಾರುತಿ ಸೊಟ್ಟಪ್ಪನವರ,ಮಾದೇವಪ್ಪ ಕರೆಯಣ್ಣನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 