ಧಾರವಾಡ: ನಿರಂತರವಾಗಿ ಸಂಘಟಿಸುತ್ತಿರುವ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಫಲದಿಂದ ಮತ್ತು ಜನಜಾಗೃತಿ ಕಾರ್ಯಕ್ರಮಗಳಿಂದಾಗಿ ಮಾರಕ ರೋಗ ಏಡ್ಸ್ ರಾಜ್ಯ ಸೇರಿದಂತೆ ದೇಶದಲ್ಲಿ ಕಡಿಮೆಯಾಗಿದ್ದು, ಇದರ ಸಂಪೂರ್ಣ ನಿಮರ್ೂಲನೆಗೆ ಹೆಚ್ಚು ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮತ್ತು ಸಾರ್ವಜನಿಕರ ಸಹಕಾರ ಪಡೆಯುವುದು ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಏಡ್ಸ್ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ, ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮಾಹಿತಿ ಕೊರತೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳ ಕೊಳಚೆ ಪ್ರದೇಶಗಳಲ್ಲಿನ ಜನರಲ್ಲಿ ಏಡ್ಸ್ ರೋಗ ಕಂಡು ಬರುತ್ತಿತ್ತು. ಆದರೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ಜನಜಾಗೃತಿ, ರಕ್ತ ಪರೀಕ್ಷೆ, ಉಚಿತ ಚಿಕಿತ್ಸೆ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದ ಇಂದು ರೋಗಿಗಳ ಸಂಖ್ಯೆ ಹಾಗೂ ರೋಗ ಸೊಂಕೀತರ ಸಂಖ್ಯೆ ಇಳಿಮುಖವಾಗಿದೆ.
ಏಡ್ಸ್ ರೋಗವನ್ನು ಸಂಪೂರ್ಣವಾಗಿ ನಿಮರ್ೂಲನೆ ಮಾಡಿ, ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ರೂಪಿಸಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಾತನಾಡಿ, ವೈದ್ಯಕೀಯ ಸಂಶೋಧನೆಗಳಿಂದಾಗಿ ಇಂದು ಏಡ್ಸ್ ರೋಗವನ್ನು ಸಹ ಗುಣಪಡಿಸಬಹುದಾಗಿದೆ. ಸರಕಾರಗಳ ನಿರಂತರ ಪ್ರಯತ್ನದಿಂದಾಗಿ ರಾಷ್ಟ್ರಮಟ್ಟದಲ್ಲಿ ಶೇ.50 ರಷ್ಟು ಮತ್ತು ರಾಜ್ಯಮಟ್ಟದಲ್ಲಿ ಶೇ.56 ರಷ್ಟು ಏಡ್ಸ್ ಕಾಯಿಲೆ ಪೀಡಿತರ ಹಾಗೂ ಎಚ್.ಐ.ವಿ ಸೊಂಕೀತರ ಸಂಖ್ಯೆ ಕಡಿಮೆಯಾಗಿದೆ.
ಏಡ್ಸ್ ಪೀಡಿತರ ಚಿಕಿತ್ಸೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 2013-14 ರಲ್ಲಿ 40476 ಜನರನ್ನು ಪರೀಕ್ಷೆಗೆ ಒಳಪಡಿಸಿ, 1217 ಜನರಲ್ಲಿ ಏಡ್ಸ್ ರೋಗ ಗುರುತಿಸಲಾಗಿತ್ತು. ಇದು ಶೇ. 3.0 ರಷ್ಟಾಗಿತ್ತು. ಆದರೆ 2019-20 ನೇ ಸಾಲಿಗಾಗಿ 2019ರ ಅಕ್ಟೋಬರ್ ಅಂತ್ಯದವರೆಗೆ 46506 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 376 ಜನರಲ್ಲಿ ಈ ರೋಗವನ್ನು ಗುರುತಿಸಲಾಗಿದೆ.
ಇದು ಶೇ. 0.80 ರಷ್ಟು ಆಗಿದೆ. ಜಿಲ್ಲೆಯಲ್ಲಿ ರೋಗ ನಿಯಂತ್ರಣವಿರುವುದು ಮತ್ತು ರೋಗಿಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿರುವುದು ಕಂಡುಬಂದಿದೆ.
ಏಡ್ಸ್ ಹಾಗೂ ಎಚ್.ಐ.ವಿ ಹರಡದಂತೆ ನಿಯಂತ್ರಿಸಲು ಜಿಲ್ಲೆಯಲ್ಲಿ 12 ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳನ್ನು, 32 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 02 ಪೂರ್ಣಪ್ರಮಾಣದ ಎ.ಆರ್.ಟಿ ಚಿಕಿತ್ಸಾ ಕೇಂದ್ರಗಳನ್ನು, 03 ಲಿಂಕ್-ಎ.ಆರ್.ಟಿ ಪ್ಲಸ್ ಕೇಂದ್ರಗಳು, 02 ಲೈಂಗಿಕ ಸಂಪರ್ಕದ ರೋಗಗಳ ಚಿಕಿತ್ಸಾ ಕೇಂದ್ರಗಳು ಮತ್ತು 02 ಬೆಂಬಲ ಹಾಗೂ ಆರೈಕೆ ಕೇಂದ್ರಗಳನ್ನು ತೆರೆದು, ಸೌಲಭ್ಯ ನೀಡಲಾಗಿದೆ.
ಏಡ್ಸ್ ನಿಯಂತ್ರಣಕ್ಕೆ ಜನಜಾಗೃತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾನಪದ ಕಲಾ ತಂಡಗಳು ಮತ್ತು ಆಶಾ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೂಲಕ ಬೀದಿ ನಾಟಕ, ಜಾನಪದ ಗೀತೆ, ಕರಪತ್ರ, ಬಿತ್ತಿಪತ್ರ, ಗೋಡೆಬರಹಗಳ ಮೂಲಕ ಮನೆ ಮನೆಗೆ ಮಾಹಿತಿ ತಲುಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ ಸ್ವಾಗತಿಸಿದರು. ಡಾ.ಕೆ.ಎನ್.ತನುಜಾ ವಂದಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿ.ಡಿ.ಕಪರ್ೂರಮಠ, ಆರ್.ಸಿ.ಎಚ್.ಓ. ಡಾ.ಎಸ್.ಎಮ್.ಹೊನಕೇರಿ, ಡಾ. ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ಡಾ.ಎಸ್.ಬಿ.ನಿಂಬನ್ನವರ, ಡಾ.ಅಯ್ಯನಗೌಡ ಪಾಟೀಲ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕತರ್ೆಯರು ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾಥರ್ಿಗಳು, ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.