ರಾಣೆಬೆನ್ನೂರಲ್ಲಿ ತಂಬಾಕು ರಹಿತ ದಿನಾಚರಣೆ ಜನ ಜಾಗೃತಿ ಜಾತಾ

ರಾಣೆಬೆನ್ನೂರಲ್ಲಿ ತಂಬಾಕು ರಹಿತ ದಿನಾಚರಣೆ ಜನ ಜಾಗೃತಿ ಜಾತಾ Public awareness rally to celebrate No Tobacco Day in Ranebennur

ರಾಣೆಬೆನ್ನೂರು 13 : ಆರೋಗ್ಯ ಜೀವನದಿಂದ ಬದುಕಿ ಬಾಳಿದಾಗ   ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಸಾಧ್ಯವಿದೆ ಆ ನಿಟಿನಲ್ಲಿ ಪ್ರತಿಯೊಬ್ಬರು ಆರೋಗ್ಯ ಮೂಡಿಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಆರೋಗ್ಯ ನೀರೀಕ್ಷಕ ನಾಗರಾಜ ಕುಡುಪಲಿ ಹೇಳಿದರು.  

ಅವರು ಇತ್ತೀಚೆಗೆ ಇಲ್ಲಿನ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಇಂದಿನ ಯುವ ಜನಾಂಗದಲ್ಲಿ ತಂಬಾಕು, ಗುಟ್ಕಾ, ಗಾಂಜಾ, ಚರಶ ಸೇರಿದಂತೆ ಇತರೆ ಮಾದಕ ಅಮಲು ಪದಾರ್ಥಗಳು ಹೆಚ್ಚಾಗಿ ಬಳಕೆಯಾಗುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಲ್ಲಿದೆ ಎಂದರು.  

 ಚಠಾಧಿಪತಿಗಳಾಗದೇ, ಚಟದಿಂದ ಮುಕ್ತರಾದರೆ ಭವಿಷ್ಯದ ಜೀವನ ಸದಾ ಸುಂದರ ವಾಗಲಿದೆ ಇಲ್ಲದೆ ಹೋದರೆ ಚಟದಲ್ಲಿಯೇ ಅಂತಿಮವಾಗಿ ಚಟ್ಟ ಕಟ್ಟುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮಾದಕ ಪದಾರ್ಥಗಳಿಂದ ದೂರವಿದ್ದು ಆರೋಗ್ಯ ಜೀವನ ನಡೆಸಿ ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.  

ಎಚ್‌.ಎಸ್‌. ಸಿದ್ದಪ್ಪನವರ,  ಕುಮಾರ ಮಡಿವಾಳರ ಅವರುಗಳು ಮಾತನಾಡಿ, ಕಾನೂನಿನಲ್ಲಿ ಅಮಲು ಪದಾರ್ಥಗಳು ಸೇವಿಸಲು ಅವಕಾಶವಿಲ್ಲ. ತಂಬಾಕು. ಗುಟ್ಕಾ, ಗಾಂಜಾ ಇವೆಲ್ಲವೂ ನಿಷಿದ್ಧವಿದೆ ಆದರೂ ಕಾನೂನು ಬಾಹಿರವಾಗಿ  ಅಲ್ಲಲ್ಲಿ ಸೇವನೆ ನಡೆಯುತ್ತಲೇ ಇದೆ. ಇದಕ್ಕೆ ಬಲಿಯಾದವರು ಜೀವನಪರ್ಯಂತ ಸಂಕಷ್ಟವನ್ನು ಅನುಭವಿಸುತ್ತಿರುವುದನ್ನು ಕಾಣುತ್ತಿದ್ದೇವೆ.  

 ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ  ಇಂತಹ ಸಮಾಜಮುಖಿ ಆರೋಗ್ಯ ಜಾಗೃತಿ  ಕಾರ್ಯಕ್ರಮಗಳ ಮೂಲಕ ಯುವಕರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಹೆಚ್‌.ಹೆಚ್‌. ತಿಮ್ಮೇನಹಳ್ಳಿ, ಕಾರ್ಯದರ್ಶಿ ಸುರೇಶ್ ದ್ಯಾವಕ್ಕಳ್ಳವರ,  

ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವಿನಯಕುಮಾರ, ಡಾ. ಪ್ರಕಾಶ್ ಡಿ.ಡಿ, ಸ್ಫೂರ್ತಿ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಕಮ್ಮಾರ ಸೇರಿದಂತೆ ಆರೋಗ್ಯ ಇಲಾಖೆ ಹಿರಿಯ ಹಾಗೂ ಕಿರಿಯ ವೈದ್ಯರು ಸಿಬ್ಬಂದಿ ಉಪಸ್ಥಿತರಿದ್ದರು.

ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಫೂರ್ತಿ ನರ್ಸಿಂಗ್ ಕಾಲೇಜ್ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಸಮಾರಂಭಕ್ಕೂ ಮುನ್ನ ನ್ಯಾಯಾಲಯದ ಆವರಣದಿಂದ ಹೊರಟ ತಂಬಾಕು ರಹಿತ ದಿನಾಚರಣೆ ಆರೋಗ್ಯ ಜಾಗೃತಿ  ಜಾತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ಸಭಾ ವೇದಿಕೆಗೆ  ಸಾಂಗತ್ಯಗೊಂಡಿತು.