ವಿಶ್ವ ಸ್ಕಿಜೋಫ್ರೆನಿಯಾ ದಿನದ ನಿಮಿತ್ಯ ವಿರಜನಲ್ಲಿ ಜನ ಜಾಗೃತಿ ಕಾರ್ಯಕ್ರಮ
Public awareness program in Viraj on the occasion of World Schizophrenia Day
ಲೋಕದರ್ಶನ ವರದಿ
ಕಾಗವಾಡ 22: ಸ್ಕಿಜೋಫ್ರೆನಿಯಾ ಎಂಬುದು ಗಂಭೀರ ಮಾನಸಿಕ ಅಸ್ವಸ್ಥತೆಯಾಗಿದ್ದರೂ, ಸರಿಯಾದ ಚಿಕಿತ್ಸೆ, ಕುಟುಂಬದ ಬೆಂಬಲ ಹಾಗೂ ಸಮಾಜದ ಸಹಕಾರ ದೊರೆತರೇ ರೋಗಿಯು ಮತ್ತೇ ಸಾಮಾನ್ಯ ಹಾಗೂ ಗೌರವಯುತ ಜೀವನ ನಡೆಸಬಹುದೆಮದು ಮಿರಜನ ಖ್ಯಾತ ಮನೋಶಾಸ್ತ್ರಜ್ಞ ಹಾಗೂ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದ್ದಾರೆ.
ಅವರು ಗುರುವಾರ ದಿ. 21 ರಂದು ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆಯ ಸಭಾಭವನದಲ್ಲಿ ಮೇ 24 ರಂದು ನಡೆಯಲಿರುವ ‘ವಿಶ್ವ ಸ್ಕಿಜೋಫ್ರೆನಿಯಾ ಜಾಗೃತಿ ದಿನ’ದ ಪೂರ್ವಿಭಾವಿಯಾಗಿ ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರತಿ ವರ್ಷ ಮೇ 24 ರಂದು ವಿಶ್ವ ಸ್ಕಿಜೋಫ್ರೆನಿಯಾ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಹಾಗೂ ರೋಗಿಗಳಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ಕಿಜೋಫ್ರೆನಿಯಾಗೆ ಮೆದುಳಿನ ರಾಸಾಯನಿಕ ಅಸಮತೋಲನ, ತೀವ್ರ ಮಾನಸಿಕ ಒತ್ತಡ, ವ್ಯಸನಗಳು ಹಾಗೂ ಸಾಮಾಜಿಕ ಏಕಾಂಗಿತನ ಮುಂತಾದ ಹಲವು ಕಾರಣಗಳಿರಬಹುದು. ಸದಾ ಅನುಮಾನ ಪಡುವುದು, ಇಲ್ಲದ ಧ್ವನಿಗಳು ಕೇಳಿಸಿಕೊಳ್ಳುವುದು, ಅಸ್ತವ್ಯಸ್ತ ಚಿಂತನೆ, ಸಮಾಜದಿಂದ ದೂರವಿರುವುದು, ಭಯ ಹಾಗೂ ನಿದ್ರಾಹೀನತೆ ಮೊದಲಾದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದು ವಿವರಿಸಿದರು. ವಿಶ್ವದಾದ್ಯಂತ ಸುಮಾರು 2 ಕೋಟಿ 40 ಲಕ್ಷ ಜನರು ಸ್ಕಿಜೋಫ್ರೆನಿಯಾದಿಂದ ಬಳಲುತ್ತಿದ್ದು, ಭಾರತದಲ್ಲಿಯೂ ಸುಮಾರು 35-40 ಲಕ್ಷ ಜನರಲ್ಲಿ ಈ ಅಸ್ವಸ್ಥತೆ ಕಂಡುಬರುತ್ತಿದೆ. ಆದರೆ ಅಂಧಶ್ರದ್ದೆಯಿಂದಾಗಿ ಮತ್ತು ಭಯ, ಸಾಮಾಜಿಕ ಕಲಂಕದ ಕಾರಣದಿಂದಾಗಿ ಅನೇಕರು ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಪ್ಯಾರನಾಯ್ಡ್, ಕ್ಯಾಟಟೋನಿಕ್, ಡಿಸ್ಆರ್ಗನೈಜ್ ಹಾಗೂ ರೆಸಿಡ್ಯುಯಲ್ ಸೇರಿದಂತೆ ಸ್ಕಿಜೋಫ್ರೆನಿಯಾದ ವಿವಿಧ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ ಅವರು, ನಿರಂತರ ಓಷಧೋಪಚಾರ, ಸಮಾಲೋಚನೆ, ಕುಟುಂಬದ ಸಹಕಾರ ಹಾಗೂ ಪುನರ್ವಸತಿ ಮೂಲಕ ರೋಗವನ್ನು ನಿಯಂತ್ರಣದಲ್ಲಿಡಬಹುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಹುಚ್ಚ ಎಂದು ದೂರ ತಳ್ಳದೇ, ಅವರಿಗೆ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ವೇಳೆ ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವೈದ್ಯರು, ಸಿಬ್ಬಂದಿ ವರ್ಗದವರು, ರೋಗಿಗಳ ಪಾಲಕರು ಉಪಸ್ಥಿತರಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 