‘ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರು’
Pt. Chandrasekhara Shastri was a great scholar of Sanskrit.
‘ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರು’
ಧಾರವಾಡ 25: ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರು. ಕನ್ನಡ ನಾಡು ನುಡಿಯು ಅವರ ಜೀವನದ ಉಸಿರಾಗಿತ್ತು. ಕನ್ನಡದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹಾರಿಸಿದ ಅವರು ‘ವ್ಯಾಕರಣತೀರ್ಥ’ ‘ವಿದ್ಯಾವಾರಿಧಿ’ ಎಂಬ ಬಿರುದುಗಳಿಂದ ಶೋಭಿತರಾದವರು ಎಂದು ಕ.ವಿ.ವಿ. ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ವ್ಯಾಕರಣ ತೀರ್ಥ ಪಂ. ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಂದ್ರಶೇಖರ ಶಾಸ್ತ್ರಿಗಳ ಬದುಕು-ಬರಹ’ ವಿಷಯ ಕುರಿತು ಮಾತನಾಡುತ್ತಿದ್ದರು.
ಪಂ. ಚಂದ್ರಶೇಖರ್ ಶಾಸ್ತ್ರಿಗಳಿಗೆ ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದಿಂದ ಕಂತಿ ಭಿಕ್ಷೆ ಹಾಗೂ ಕೂಲಿ ನಾಲಿ ಮಾಡಿ ಜೀವನ ಸಾಗಿಸಿದರು. ಇವರ ಓದುವ ಆಸಕ್ತಿ ಗಮನಿಸಿ ಬ್ಯಾಡಗಿ ಸಿದ್ಧಲಿಂಗಪ್ಪನವರು ಸಂಸ್ಕೃತ ಶಾಲೆಗೆ ಪ್ರವೇಶ ಕೊಡಿಸಿದರು. ಪ್ಲೇಗ ರೋಗ ಹರಡಿದ ಕಾರಣ ಬ್ಯಾಡಗಿಯಿಂದ ಶಿರಹಟ್ಟಿ, ಗದಗ, ಹಾವೇರಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಬೇಕಾಯಿತು. ಕೊನೆಗೆ ಓದು ತೃಪ್ತಿ ತರದ ಕಾರಣ ಕಾಶಿಗೆ ತೆರಳಿ ಜಂಗಮವಾಡಿ ಮಠದಲ್ಲಿದ್ದು 7 ವರ್ಷ ಅಧ್ಯಯನ ನಿರತರಾದರು.
ಪಂ. ಚಂದ್ರಶೇಖರ್ ಶಾಸ್ತ್ರಿಗಳು ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಗ್ಗೂಡಿಸಿ ಸಮಗ್ರ ಕರ್ನಾಟಕದ ಕನಸು ಕಂಡಿದ್ದರು. ಕರ್ನಾಟಕ ಏಕೀಕರಣವಾಗದ ವಿನಹ ಭಾರತ ಸ್ವಾತಂತ್ರ್ಯ ಪಡೆದರೂ ಅರ್ಥವಿಲ್ಲ ಎಂಬ ಭಾವನೆ ಹೊಂದಿದ್ದರು. ಕನ್ನಡದ ನೆಲದಲ್ಲಿ ಕನ್ನಡಿಗರು ಅನಾಥ ಪ್ರಜ್ಞೆ ಹೊಂದಿದಾಗ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ಸಾಹಿತ್ಯಾಸಕ್ತರಾದ ಅವರು ಕನ್ನಡದಲ್ಲಿ ‘ಬಸವತತ್ವ ರತ್ನಾಕರ’ ಸೇರಿದಂತೆ 13 ಕೃತಿ ರಚಿಸಿದ್ದರು. ಪತ್ರಿಕೆ ಓದುವ ಸಭೆ ಸಮಾರಂಭದಲ್ಲಿ ಭಾಗವಹಿಸುವ ಹವ್ಯಾಸದಿಂದ ಅನೇಕ ಗ್ರಂಥಮಾಲೆ ಸ್ಥಾಪಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಪಂ. ಚಂದ್ರಶೇಖರ ಶಾಸ್ತ್ರಿಗಳು ಮರೆಯಲಾರದ ಮಹಾನುಭಾವರು. ಅವರಲ್ಲಿ ಜೀವನದ ಯಶೋಗಾಥೆ ಭವಿಷ್ಯದ ಪೀಳಿಗೆಗೆ ಅನುಕರಣೀಯ ಎಂದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಸುರೇಶ ಹಾಲಭಾವಿ, ಡಾ. ಪಾರ್ವತಿ ಹಾಲಭಾವಿ, ವ್ಹಿ. ಜಿ. ಪಾಟೀಲ, ವಸಂತ ಲೋಖಂಡೆ, ನಾಗರಾಜ ಹಂಗಳಕಿ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 