ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ: ಪ್ರಭು ಸ್ವಾಮೀಜಿ

 ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ: ಪ್ರಭು ಸ್ವಾಮೀಜಿ Providing cultured education to children is the need of the hour: Prabhu Swamiji

ಲೋಕದರ್ಶನ ವರದಿ 

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ: ಪ್ರಭು ಸ್ವಾಮೀಜಿ 

ಮಹಾಲಿಂಗಪುರ 03: ಇಂದಿನ ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಂಡು ಓದುವವುದನ್ನು ಕಡಿಮೆ ಮಾಡಿದ್ದು, ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ “ ಪಾಠದ ಜೊತೆಗೆ ಆಟಗಳಲ್ಲೂ ಪಾಲ್ಗೊಳ್ಳುವಂತೆ ಮಾಡಬೇಕು. ತನ್ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕು” ಎಂದು ಚಿಮ್ಮಡದ ವಿರಕ್ತಮಠದ  ಪ ಪೂ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು. 

    ಚಿಮ್ಮಡದ  ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ  ಪ್ರಭುಲಿಂಗೇಶ್ವರ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎರಡನೇ ವಾರ್ಷಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಸಂಸ್ಕಾರ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ ಮಗುವಿನಲ್ಲಿ ಮಾನವೀಯ ಮೌಲ್ಯಗಳ ಸಂಸ್ಕೃತಿ, ನೈತಿಕತೆ ಮತ್ತು ಶಿಸ್ತನ್ನು ಬೆಳೆಸುವ ಶಿಕ್ಷಣ ಎಂದರು. 

ನಂತರ ಮಾತನಾಡಿದ ಜಮಖಂಡಿ ವಲಯ ಶಿಕ್ಷಣ ಅಧಿಕಾರಿ ಎ ಕೆ ಬಸಣ್ಣವರ “ಹಿಂದೆಲ್ಲ ಮಕ್ಕಳು ಕೀರ್ತನೆ, ಪ್ರವಚನಗಳನ್ನು ಕೇಳಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಆದರೆ, ಇಂದು ಟಿವಿ ಮಾಧ್ಯಮದಿಂದ ಮಕ್ಕಳು ಇವುಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಒತ್ತು ನೀಡಬೇಕು” . “ತಂದೆ-ತಾಯಿ, ಗುರುವನ್ನು ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳಬೇಕು ಎಂದರು. 

ನಂತರ ಮಾತನಾಡಿದ ಯಲ್ಲಟ್ಟಿಯ ಕೊಣ್ಣೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಿಕ್ಷಣ ಸಂತ ಬಸವರಾಜ ಕೊಣ್ಣೂರು “ಇಂದು ಗುರುವಿನ ಜವಾಬ್ದಾರಿ ಅಂತ್ಯಂತ ಮಹತ್ವ ಪಡೆದುಕೊಂಡಿದೆ. ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಮರ್ಥರನ್ನಾಗಿ ಮಾಡಬೇಕು. ಉತ್ತಮ ನಡತೆ ಯೋಗ ಮತ್ತು ಸಂಯಮವನ್ನು, ಕಲಿಸುವುದು  ವಿದ್ಯಾರ್ಥಿ ದಿಸೆಯಲ್ಲಿ ದೇಶಪ್ರೇಮ ಮತ್ತು ಸಮಾಜಮುಖಿ ಚಿಂತನೆಯನ್ನು ಬೆಳೆಸುವುದು. ಅವಶ್ಯವಾಗಿದೆ. ಎಂದರು. 

    ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ಮಾತನಾಡಿ ಮಕ್ಕಳಿಗೆ ಪುರಾತನ ಸಂಪ್ರದಾಯದಲ್ಲಿ ಗರ್ಭದಾನದಿಂದ ಅಂತೇಷ್ಟಿಯವರೆಗೆ 16 ರೀತಿಯ ಸಂಸ್ಕಾರಗಳನ್ನು ಕಲಿಸುತ್ತೀದ್ದರು. ಇವು ವ್ಯಕ್ತಿಯ ಬೆಳವಣಿಗೆಗೆ ಸಹಕಾರಿ. ಯುವಕರು ಹೆತ್ತವರನ್ನು ಪ್ರೀತಿಸುವ ಮತ್ತು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಎಂದರು 

ಈ ಸಂಧರ್ಭದಲ್ಲಿ ಜನಾರ್ಧನ್ ಮಹಾರಾಜ, ಚಿದಾನಂದ್ ಸವದಿ, ಬಾಬಾಗೌಡ ಪಾಟೀಲ, ಬಾಲಚಂದ್ರ ನಂಡೆಪ್ಪನವರ, ಡಾ ಸತೀಶ ಮಾಳಿ ರಮೇಶ ಅವಟಿ, ದಾಕ್ಷಾಯಣಿ ಮಂಡಿ, ರಮೇಶ ಪೂಜಾರಿ, ವಿದ್ಯಾಧರ್ ಸವದಿ ಎ ಸಿ ಮಣ್ಣಿಕೇರಿ, ವೇದಿಕೆ ಮೆಲೆ ಉಪಸ್ಥಿತರಿದ್ದರು. ಮಕ್ಕಳು, ಪಾಲಕರು, ಶಿಕ್ಷಕ ವೃಂದ, ಸೇರಿ ಹಲವರು ಇದ್ದರು.