ಜಿಲ್ಲೆಯ ಜನರಿಗೆ ಕಂದಾಯ ಇಲಾಖೆ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಜಿಲ್ಲೆಯ ಜನರಿಗೆ ಕಂದಾಯ ಇಲಾಖೆ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ Provide revenue department facilities to the people of the district

ಹಾವೇರಿ  18:  ಸರ್ಕಾರದ ಕಂದಾಯ ಇಲಾಖೆಯಲ್ಲಿನ ಯೋಜನೆಗಳ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.  

ಸೋಮವಾರ ಹಾನಗಲ್ ತಹಶೀಲ್ದಾರ ಕಚೇರಿಯ  ಸಭಾಂಗಣದಲ್ಲಿ ಜರುಗಿದ ಕಂದಾಯ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ  ಮಾತನಾಡಿದ ಅವರು,  ಜಿಲ್ಲೆಯ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅವರ ಸಮಸ್ಯೆವನ್ನು ಆಲಿಸಿ ಪರಿಹರಿಸಿ, ಜನರು ಸರ್ಕಾರದ ಯೋಜನೆಗಳ ಕುರಿತು ಗೊಂದಲಕ್ಕೆ ಒಳಗಾದಲ್ಲಿ ಅದನ್ನು ಬಗೆಹರಿಸಿ ಆ  ಯೋಜನೆಯ ಉಪಯುಕ್ತತೆಯನ್ನು ಅವರಿಗೆ ತಲುಪುವಂತೆ ಮಾಡಿ ಎಂದರು. 

ಜಿಲ್ಲೆಯಲ್ಲಿ ಬಗರ್‌ಹುಕುಂ ಅರ್ಜಿಗಳು ವಿಲೇ ಆಗದೇ ಉಳಿದಿದ್ದರೆ ಅವುಗಳನ್ನು  ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು, ಗ್ರಾಮಾಡಳಿತ ಅಧಿಕಾರಿಗಳು ಇ ಆಫೀಸ್ ನಿರ್ವಹಣೆಯೊಂದಿಗೆ  ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಕಂದಾಯ ಗ್ರಾಮ, ಪಾವತಿ ಆಂದೋಲನ, ಭೂ ಸುರಕ್ಷೆ ಮೊದಲಾದವುಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದರು.  

ಜಿಲ್ಲೆಯ ಸಾರ್ವಜನಿಕರು ಒಂದೇ ವಿಷಯವಾಗಿ  ಪದೆ ಪದೆ ಕಚೇರಿಗೆ ಅಲೆಯುಂತಾಗಬಾರದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ, ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.  

ಸಭೆಯಲ್ಲಿ ತಹಶೀಲ್ದಾರ್ ಶ್ರೀಮತಿ ರೇಣುಕಮ್ಮ , ಉಪ ತಹಶೀಲ್ದಾರ, ಕಂದಾಯ ನೀರಿಕ್ಷಕರು ಮತ್ತು  ಗ್ರಾಮಾಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.