ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಫಲಿತಾಂಶ ಹೆಚ್ಚಿಸಿ: ಮನ್ನಿಕೇರಿ
Provide quality education to children and increase results: Mannikeri
ರನ್ನ ಬೆಳಗಲಿ 14: ಬಾಗಲಕೋಟ ನೂತನ ಉಪ ನಿರ್ದೇಶಕ ಎ ಸಿ ಮನ್ನಿಕೇರಿ ಅವರು ರನ್ನ ಬೆಳಗಲಿಯ ಸಿದ್ಧಾರೂಢ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಪರೀಶೀಲಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಜಿಲ್ಲೆಯ ಫಲಿತಾಂಶ ಉತ್ತಮವಾಗಬೇಕು. ಮಕ್ಕಳಲ್ಲಿ ಓದುವಂತಹ ಅಭಿರುಚಿ ಆಸಕ್ತಿ ಬೆಳೆಸಿರಿ ಎಂದರು ಹಾಗೂ ಶಾಲಾ ಆವರಣದಲ್ಲಿ ರಚಿಸಿದ ತಿಂಗಳಿಗೊಂದು ಚಿತ್ರ ಮಾಲಿಕೆಯಲ್ಲಿ ವಿದ್ಯಾರ್ಥಿಗಳು ಬಿಡಿಸಿದ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ನೋಡಿ ಮಕ್ಕಳಲ್ಲಿಯ ಸೃಜನಾತ್ಮಕತೆಯನ್ನು ಶಿಕ್ಷಕರು ಹೊರ ತೆಗೆಯಬೇಕು ಎಂದರು.
ನಂತರ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪರೀಶೀಲಿಸಿ ಮಕ್ಕಳ ಆರೋಗ್ಯ, ಶುಚಿತ್ವ ಮತ್ತು ಸಂಸ್ಕಾರದ ಬಗ್ಗೆ ತಿಳಿ ಹೇಳಬೇಕು ಎಂದರು.
ಬಾಗಲಕೋಟ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಚ್ ಎ ಮಿರ್ಜಿಯವರು ಮಕ್ಕಳಿಗೆ ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ತಂದೆ ತಾಯಿಯ ಪಾತ್ರ ಗುರುವಿನ ಪಾತ್ರ ಏನೆಂಬುದನ್ನು ನಿದರ್ಶನಗಳ ಮೂಲಕ ತಿಳಿಹೇಳಿದರು ಹಾಗೂ ಶಿಕ್ಷಕರಿಗೆ ಗುಂಪು ಚರ್ಚೆಗೆ ಆದ್ಯತೆ ನೀಡಿ ಮಕ್ಕಳಲ್ಲಿ ಧೈರ್ಯ ಆತ್ಮವಿಶ್ವಾಸಗಳನ್ನು ಬೆಳೆಸಿ, ಮತ್ತು ವಿದ್ಯಾರ್ಥಿಗಳಿಗೆ ಧ್ಯಾನದ ಬಗ್ಗೆ ಹೇಳಿಕೊಟ್ಟು ಈ ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದರು.
ನಂತರ ಬಿಸಿಯೂಟ ಕೊಠಡಿಗೆ ತೆರಳಿ ಅಲ್ಲಿನ ಶುಚಿತ್ವ ಮತ್ತು ಸುರಕ್ಷತೆಗಳ ಬಗ್ಗೆ ಅಡುಗೆ ಸಿಬ್ಬಂದಿಯವರಿಗೆ ತಿಳಿ ಹೇಳಿದರು. ಮುಧೋಳ ತಾಲೂಕ ಶಾಲಾ ಶಿಕ್ಷಣ ಸಮನ್ವಯ ಅಧಿಕಾರಿಗಳಾದ, ಎ ಆರ್ ಛಬ್ಬಿ, ರನ್ನಬೆಳಗಲಿಯ ವಲಯದ ಸಿಆರ್ಿಗಳಾದ ಬಸವರಾಜ ಬಳ್ಳಾರಿ, ಶಾಲಾ ಮುಖ್ಯ ಗುರು ಮಾತೆಯರಾದ ಎಸ್ ಎಸ್ ಉದಪುಡಿ. ವಸತಿ ನಿಲಯದ ಮುಖ್ಯೋಪಾಧ್ಯಯ ಸ್ಮಿತಾ ವಲ್ಯಾಪುರ, ಬಿ. ಪಿ ಚೋಪಡೆ, ಗೀತಾ ಬಡಿಗೇರ ಹಾಗೂ ಪತ್ರಕರ್ತರಾದ ಎಂ ಕೆ ಕುಲಗೋಡ ಹಾಗೂ ಶಿಕ್ಷಕ ಬಳಗದವರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 