ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುಗಾಡಿ, ಕೊಡೆ: ಶಾಸಕ ಪಾಟೀಲ
Provide pushcarts and umbrellas to street vendors: MLA Patil
ಇಂಡಿ 01 :ಬೀದಿ ಬದಿ ವ್ಯಾಪಾರ ಮಾಡುವ ಬಡ ವ್ಯಾಪಾರಸ್ಥರಿಗೆ ಒತ್ತುವ ಗಾಡಿ ಹಾಗೂ ನೆರಳಿಗಾಗಿ ಕೊಡಿ ಒದಗಿಸುವದಾಗಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಬದುಕು ಹಾಗೂ ಕುಟುಂಬ ನಿರ್ವಹಣೆಗಾಗಿ ಬಿಸಿಲು, ಮಳೆ ಹಾಗೂ ಚಳಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಕುಟುಂಬಗಳು ತಮ್ಮ ಉಪ ಜೀವನಕ್ಕೆ ಬೇಕಾದ ತಳ್ಳುಗಾಡಿ ಹಾಗೂ ಕೊಡೆ ಬೇಡಿಕೆ ಇಟ್ಟಿದ್ದು, ಅವನ್ನು ಬೆಸಿಗೆ ಬರುವಷ್ಟರಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.ನನ್ನ ಚುನಾವಣೆಯಲ್ಲಿ ಹೆಚ್ಚು ಸಹಾಯ ಮಾಡಿದ ಬಡವರ ಋಣ ಮರೆಯುವುದಿಲ್ಲ. 40 ವರ್ಷಗಳ ಕಾಲ ನನ್ನ ಕುಟುಂಬಕ್ಕೆ ಅಶೀರ್ವಾದ ಮಾಡಿದ್ದಾರೆ.
ಎಲ್ಲ ಸಮಾಜದ ಬಡವರು ನನಗೆ ಸಹಾಯ ಮಾಡಿದ್ದಾರೆ.ಸಹಾಯ ಮಾಡಿದವರ ಸ್ಮರಣೆ ಮಾಡುವುದು ಮನುಷ್ಯ ಧರ್ಮ ಎಂದು ಹೇಳಿದರು.ಬಡವರ ಹೃದಯದಿಂದ ಬರುವ ಸರ್ವರನ್ನು ಪ್ರೀತಿಯಿಂದ ಎಲ್ಲ ಜಾತಿ.ಜನಾಂಗದವರ ಜತೆಗೂಡಿ ರಾಜಕಾರಣ ಮಾಡುವ ದಾರಿ ಹಾಕಿದ್ದೇನೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಕುಟುಂಬಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ವ್ಯಾಪಾರದ ಜತೆಗೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಯನ್ನು ಬಿಟ್ಟು ವ್ಯಾಪಾರ ಮಾಡಬೇಕು ಹಾಗೂ ಸಂಘಟಕರಾದ ನಿಸಾರ್ ಅಹ್ಮದ ಬಾಗವಾನ ಅವರು ಹಲವಾರು ಬಾರಿ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ನನ್ನಲ್ಲಿ ವಿನಂತಿಸಿದ್ದಾರೆ. ನಿಮ್ಮೆಲ್ಲ ಬೇಡಿಕೆಗಳನ್ನು ಬರುವಂತ ದಿನಗಳಲ್ಲಿ ಹಂತ ಹಂತವಾಗಿ ಈಡೇರಿಸುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಸಾರ್ ಅಹಮದ್ ಬಾಗವಾನ ಅವರು ವಹಿಸಿ ನಮ್ಮೆಲ್ಲರ ಮನೆಗೆ ಶಾಸಕರು ಸ್ಪಂದಿಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥರ ಪರವಾಗಿ ಧನ್ಯವಾದಗಳು ತಿಳಿಸಿದರು.ಸಂದರ್ಭದಲ್ಲಿ ನೂತನ ಬೀದಿಬದಿ ವ್ಯಾಪಾರಿಗಳನ್ನು ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಿಯಾಜಅಹ್ಮದ್ ಬಾಗವಾನ, ಉಪಾಧ್ಯಕ್ಷರಾಗಿ ಅಮೀರನೂರಹಮ್ಮದ ಪಠಾಣ ಹಾಗೂ ಮೂಸಾ ಅಲಿ ಬಾಗವಾನ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಮೌಲಾನಾ ಶಾಕೀರ ಹುಸೇನ ಮಾಸ್ತಿ ಅವರು ನಡೆಸಿ ಕೊಟ್ಟರು.ರಾಜ್ಯ ನಿಂದೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಯ ಕವಲಗಿ, ಭೀಮಾತಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಇಟ್ಟಿದ್ದ ರವಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇಲಿಯಾಸರೀತಿ ಜಿಲ್ಲಾಧ್ಯಕ್ಷ ಇಲ್ಯಾಸ್ ಬೋರಾಮಣಿ, ತಾಲೂಕು ಅಧ್ಯಕ್ಷ ರಾಜಾನ್ ಶೇಖ, ಶ್ರೀಕಾಂತ ಕುಡಿಗನೂರ ಯಾಕೂಬ ನಾಟೀಕಾರ.ಲಕ್ಕಪ್ಪ ಪೂಜಾರಿ ಫಯಾಜ್ ಸೇರಿದಂತೆ ಪಟ್ಟಣದ ಪ್ರಮುಖರು ಗಣ್ಯರು ಅಧಿಕಾರಿಗಳು ಹಾಗೂ ಬಿದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 