ಕೈಗಾರಿಕೆ ಪ್ರಾರಂಭಕ್ಕೆ ಒತ್ತಾಯಿಸಿ ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ

ಲೋಕದರ್ಶನ ವರದಿ

ಕಾರವಾರ 12: ಯುವಜನರು ನಿರುದ್ಯೋಗ ಸಮಸ್ಯೆಯಿಂದ ಅನ್ಯ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಸರಕಾರ ಕೂಡಲೇ ಕಾರವಾರದಲ್ಲಿ ಕೈಗಾರಿಕೆ ಪ್ರಾರಂಭಿಸಬೇಕೆಂದು ವಾಟಾಳ್ ಪಕ್ಷದ ಮುಖಂಡರು ಸಕರ್ಾರವನ್ನು ಆಗ್ರಹಿಸಿದರು.  ಗಡಿಭಾಗವಾದ ಕಾರವಾರ ತಾಲೂಕಿನಲ್ಲಿ ಉದ್ಯೋಗ ಸೃಷ್ಠಿಗೆ ಕೈಗಾರಿಕೆಗಳನ್ನು  ಸ್ಥಾಪಿಸಲು  ಮುಂದಾಗಬೇಕು ಎಂದು ಒತ್ತಾಯಿಸಿ ಕನ್ನಡ ವಾಟಾಳ್ ಪಕ್ಷ ಹಾಗೂ ಜನಶಕ್ತಿ ವೇದಿಕೆ ಸಂಯುಕ್ತವಾಗಿ ನ.24 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಹಾಗೂ ಜನಶಕ್ತಿ ವೇದಿಕೆ ಮಾಧವ ನಾಯ್ಕ ಹೇಳಿದರು.

ನಗರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ತಾಲೂಕಿನಲ್ಲಿ  ವಿದ್ಯಾವಂತ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.ಹೀಗಾಗಿ ಪದವೀಧರರು ಉದ್ಯೋಗ ಅರಸಿ ಗೋವಾ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇಲ್ಲಿನ ಕೊಂಕಣ ರೈಲ್ವೆ ಮೂಲಕ ಪ್ರತಿದಿನ ಮುಂಜಾನೆ ಸಾವಿರಾರು ಜನರು ಉದ್ಯೋಗಕ್ಕಾಗಿ ತೆರಳುತ್ತಿದ್ದಾರೆ. ಇದನ್ನು ತಪ್ಪಿಸಲು ಕಾರವಾರದ ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಮೀಸಲಿಟ್ಟ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕು. ಇದಲ್ಲದೇ ಉಸುಕಿನ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆ ಹರಿಸಬೇಕು. ಹಾಗೂ ಗೋವಾಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ  ಮೀನು ರಫ್ತಿನ ಮೇಲೆ  ನಿರ್ಭಂದದಿಂದ ಸಾವಿರಾರು ಅಸಂಘಟಿತ ವಲಯದ ಕಾಮರ್ಿಕರು ಕೂಡ ಉದ್ಯೋಗವಿಲ್ಲದೇ ಪರದಾಡಬೇಕಾಗಿದೆ. ಈ ಎಲ್ಲ ಸಮಸ್ಯೆಗಳನ್ನು  ಹೋಗಲಾಡಿಸಲು ಸರಕಾರದ ಮೇಲೆ ಒತ್ತಡ ಹಾಕಲು ಪಕ್ಷಾತೀತವಾಗಿ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಸಂಘಟಿತ ಹೋರಾಟಕ್ಕೆ ಮೀನುಗಾರರು,ಮರಳುಗಾರಿಕೆ ನಂಬಿದ ಕಾಮರ್ಿಕರು, ಗುತ್ತಿಗೆದಾರರು, ಆಟೋ ರೀಕ್ಷಾ ಯುನೀಯನ್ದವರು ಬೆಂಬಲ ಸೂಚಿಸಿದ್ದಾರೆ.ಪ್ರತಿಭಟನೆಯಲ್ಲಿ ಸಾವಿರಾರು ಯುವಜನತೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ  ನಾಯ್ಕ ಮಾತನಾಡಿ,ಇಲ್ಲಿನ ಗಡಿಭಾಗದ ಸಮಸ್ಯೆಗಳ ಬಗ್ಗೆ ವಾಟಾಳ್ ನಾಗರಾಜ ಅವರೊಂದಿಗೆ ಚಚರ್ಿಸಿ ನ.24 ರಂದು ಹೋರಾಟ ಕೈಗೆತ್ತಿಕೊಳ್ಳಲು ನಿರ್ಣಯಿಸಲಾಯಿತು. ಇಲ್ಲಿನ ಸಾವಿರಾರು ಜನರು ರಾಷ್ಟ್ರೀಯ ಹಾಗೂ ರಾಜ್ಯದ ಯೋಜನೆಗಳಿಗಾಗಿ ಮನೆ,ಮಠಗಳನ್ನು ತ್ಯಾಗ ಮಾಡಿ ನಿರಾಶ್ರಿತರಾಗಿದ್ದಾರೆ. ಸೀಬಡರ್್,ಕೊಂಕಣ ರೈಲ್ವೆ,ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಕೆಪಿಸಿಯ ಜಲವಿದ್ಯುತ್ ಯೋಜನೆಗಳಿಗಾಗಿ ಸಾವಿರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಆದರೆ ಈವರೆಗೂ ಅವರಿಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ. ಅಲ್ಲದೇ ತಾಲೂಕಿನ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳನ್ನು ವಿದ್ಯಾಥರ್ಿಗಳ ಕೊರತೆ ನೆಪ ಹೇಳಿ ಮುಚ್ಚಲಾಗುತ್ತಿದೆ.  ತಾಲೂಕಿನ ಹೊಸಾಳಿ, ಮುಡಗೇರಿ, ಗಾಂವಗೇರಿ, ಮಾಜಾಳಿ, ಮಖೇರಿ ಮುಂತಾದ ಗ್ರಾಮೀಣ ಭಾಗದಿಂದ ಹಲವು  ಮಕ್ಕಳು ಗೋವಾದಲ್ಲಿ  ಇಂಗ್ಲೀಷ ಅಥವಾ ಮರಾಠಿ ಮಾಧ್ಯಮದ ಶಾಲೆಗಳಿಗೆ ಹೋಗುತ್ತಿದ್ದಾರೆ.ಇದನ್ನು ತಡೆಯುವ ದಿಸೆಯಲ್ಲಿ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಡಿಭಾಗವನ್ನು ಗೋವಾಕ್ಕೆ  ಸೇರಿಸಬೇಕು ಎಂಬ ಎಂಇಎಸ್ ಅಥವಾ ಕೊಂಕಣಿ ಮಂಚ್  ಕೂಗಿಗೆ ಇನ್ನಷ್ಟು ಬಲಬಂದರೂ ಆಶ್ಚರ್ಯವಿಲ್ಲ.ಆದ್ದರಿಂದ  ಈ ಭಾಗದ ಕನ್ನಡದ ಸಕರ್ಾರಿ ಶಾಲೆಗಳಿಗೆ ತರಗತಿಗೆ ಒಬ್ಬ ಶಿಕ್ಷಕರನ್ನು ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ಕಾರವಾರ ತಾಲೂಕಿನ ಕಸಾಪ ಬೇಡಿಕೆಗೆ ಸಕರ್ಾರ ಮಾನ್ಯತೆ ನೀಡಬೇಕು ಎಂದರು. 

ಪೂರಕ ವಾತಾವರಣ ಸೃಷ್ಟಿಯಾಗಬೇಕು:

ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು. ಕೈಗಾರಿಕೆಗಳಿಗೆ ತಡೆರಹಿತ ವಿದ್ಯುತ್, ಕಚ್ಚಾ ಸಾಮಗ್ರಿಗಳು ಸಿಗುವ ವ್ಯವಸ್ಥೆಯಾಗಬೇಕು. ಮೂವತ್ತು ವರ್ಷಗಳ ಹಿಂದೆ ಕೈಗಾರಿಕೆಗಾಗಿ ವಶಪಡಿಸಿಕೊಳ್ಳಲಾದ 250 ಏಕರೆ ಭೂಮಿಯಲ್ಲಿ ಕೈಗಾರಿಕಾ ವಲಯ  ನಿಮರ್ಿಸಬೇಕು. ಈಗಾಗಲೇ ಮುಚ್ಚಿ ಹೋಗಿರುವ ಕೈಗಾರಿಕೆಗಳನ್ನು  ಪುನರಾಂಭಿಸಲು ಯೋಜನೆ ರೂಪಿಸಬೇಕು. ಗಡಿಭಾಗದ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಮೀಸಲಾತಿಯಡಿ ವಿವಿಧ ಸವಲತ್ತು ನೀಡಬೇಕು. ಒಳ್ಳೆಯ ಗುಣಮಟ್ಟದ ಶಿಕ್ಷಣ ಇಲ್ಲಿಯೇ ದೊರೆಯುವಂತಾಗಬೇಕು. ಆ ಮೂಲಕ ಯುವಜನತೆ, ಮಕ್ಕಳು ಅನ್ಯ ರಾಜ್ಯಕ್ಕೆ ಉದ್ಯೋಗ, ಶಿಕ್ಷಣಕ್ಕಾಗಿ ವಲಸೆ ಹೋಗುವುದಕ್ಕೆ ತಡೆ ಒಡ್ಡಬೇಕು. ಒಟ್ಟಾರೆ ಹೈದ್ರಾಬಾದ್-ಕನರ್ಾಟಕ ಮಾದರಿಯಂತೆ ಉತ್ತರ ಕನ್ನಡ ಜಿಲ್ಲೆಯನ್ನು ಗುಡ್ಡಗಾಡು ಜಿಲ್ಲೆ ಎಂದು ಘೋಷಿಸಬೇಕು. ಅದರಂತೆ, ಗಡಿಭಾಗದ  ಅಭಿವೃದ್ಧಿ ಹಾಗೂ ಕನ್ನಡ ರಕ್ಷಣೆಗೆ ಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ತಾಫ್ ಶೇಖ್, ಎಂ. ಖಲೀಲುಲ್ಲಾ,ಪೂಣರ್ಿಮಾ ಮಾಯೇಕರ,ಸಂಗೀತಾ ನಾಯ್ಕ,ಫರೀದಾ ಬೇಗಂ,ಅಜಯ ಬೇಳೂರಕರ,ಜಗನ್ನಾಥ್ ನಾಯ್ಕ,ವಿಲ್ಸನ್ ಫನರ್ಾಂಡೀಸ್,ಚಂದ್ರಕಾಂತ್ ನಾಯ್ಕ,ಗಣೇಶ ಕೋಳಂಬಕರ ಇದ್ದರು.