ತಹಶೀಲ್ದಾರರ ಕಚೇರಿ ಮುಂದೆ ಶವವಿಟ್ಟು ಸಾರ್ವಜನಿಕರಿಂದ ಪ್ರತಿಭಟನೆ

ಲೋಕದರ್ಶನ ವರದಿ 

ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ 2ನೇ ವಾಡರ್ಾದ ಹರಿಪೂರ ಗ್ರಾಮದಲ್ಲಿ ಶವಗಳನ್ನು ಹೂಳಲು ಹಾಗೂ ಸುಡಲು ಸಾರ್ವಜನಿಕ ಸಕರ್ಾರಿ ರುದ್ರಭೂಮಿ ಇಲ್ಲದೇ ಸಾರ್ವಜನಿಕರು ಶವಗಳನ್ನು ರಸ್ತೆ ಪಕ್ಕದಲ್ಲಿಯೇ ಸುಡುವ ಪರಿಸ್ಥಿತಿ ಎದುರಾಗಿದ್ದು, ಸದರೀ ಗ್ರಾಮದಲ್ಲಿ ಮೃತಪಟ್ಟ ಪ್ರಭು ಮೊರಬದ ಅವರ ಶವವನ್ನು ತಹಶೀಲ್ದಾರ ಕಚೇರಿ ಮುಂದಿಟ್ಟು ಹರಿಪೂರ ಗ್ರಾಮದ ಸಾರ್ವಜನಿಕರು ಸಾರ್ವಜನಿಕ ಸರ್ಕಾರಿ  ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಪ್ರತಿಭಟನೆ ಮಾಡಿದರು. 

ಪಟ್ಟಣದ ಹತ್ತಿರದ ಹರಿಪೂರ ಗ್ರಾಮದಲ್ಲಿ ಶವ ಸಂಸ್ಕಾರವನ್ನು ಮಾಡಲು ನಿವೇಶ ಇಲ್ಲದೇ ಇರುವುದನ್ನು ಖಂಡಿಸಿ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆಯನ್ನು ನೆರವೇರಿಸಿದರು. 

ಘಟನೆಯ ವಿವರ: ಪಟ್ಟಣದ ಪಟ್ಟಣ ಪಂಚಾಯತ ವ್ಯಾಪ್ತಿಯ ವಾರ್ಡ ನಂ2 ರಲ್ಲಿ ಸುಮಾರು ವರ್ಷಗಳಿಂದ ಶವಗಳನ್ನು ಹೂಳಲು ಮತ್ತು ಸುಡಲು ಜಾಗೆ ಇಲ್ಲದೇ ಗ್ರಾಮದ ಪಕ್ಕದ ಹೊಲದಲ್ಲಿ ಹೂಳಲಾಗುತ್ತಿತ್ತು. ಹಲವಾರು ಮನವಿ ಮೇರೆಗೆ 7 ವರ್ಷಗಳ ಹಿಂದೆ ಪಪಂ  2 ಎಕರೆ ಜಮೀನು ಖರೀದಿಸಲು ಮುಂದಾಗಿತ್ತು. ಆದರೆ ರೈತರಿಗೆ ದೊರಕಬೇಕಾದ ಖರೀದ ಹಣ ಈ ವರೆಗೂ ಸರಕಾರದಿಂದ ಸಂದಾಯವಾಗದ ಕಾರಣ ಜಮೀನಿನ ಮಾಲಿಕರು ಶವ ಹೂಳಲು ಅವಕಾಶ ವನ್ನು ನೀಡದೇ ಇರುವುದರಿಂದ ನಮಗೆ ದಿಕ್ಕು ತೋಚದೇ ತಹಶೀಲ್ದಾರರವರ ಖಛೇರಿ ಎದರು ಶವವನ್ನು ಇಟ್ಟು ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯ ಬಂದೊದಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ಹರಿಪೂರ ಗ್ರಾಮದ ಪಪಂ ಸದಸ್ಯ ಮಹದೇವ ಗಾಣಿಗೇರ ಮಾತನಾಡಿ, ಗ್ರಾಮಕ್ಕೆ ಕನಿಷ್ಠವಾದ ಮೂಲ ಭೂತ ಸೌಕರ್ಯವನ್ನು ಒದಗಿಸುವಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಾ ಬಂದಿದೆ. ಸ್ಮಶಾನಕ್ಕೆ ಜಾಗ ಇಲ್ಲದೇ ಇರುವುದು ನಮ್ಮೆಲ್ಲ ದುದರ್ೈವ. ಜೊತೆಗೆ ಪಟ್ಟಣದಲ್ಲಿ ರಸ್ತೆಗಳಿಲ್ಲ. ಗಟಾರಗಳಿಲ್ಲ. ಇರುವ ಗಟಾರಗಳ ಸ್ವಚ್ಛತೆಯೂ ಇಲ್ಲದೇ ಸಾಕಷ್ಟು ರೋಗರುಜಿನಗಳಿಗೆ ಕಾರಣವಾಗಿದೆ. ಈ ಬೇಡಿಕೆ ಏಳು ದಿನಗಳಲ್ಲಿ ಈಡೇರದಿದ್ದರೆ ಉಗ್ರ ಹೋರಾಟವನ್ನು ಮಾಡಬೇಕಾದ ಅನಿವಾರ್ಯ ಉಂಟಾಗುತ್ತದೆ ಎಂದು ಹೇಳಿದರು. 

ಗ್ರಾಮದ ರೈತ ಬಾಬು ಯಲ್ಲಪ್ಪ ಹಾಲಪ್ಪನವರ ಮಾತನಾಡಿ, ಕಳೆದ 2012ರಲ್ಲಿ ಭೂಮಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು ಈರವರೆಗೂ ಮುಕ್ತಾಯವಾಗಿಲ್ಲ. ಆದ್ದರಿಂದ ನಾವು ಶವ ಸಂಸ್ಕಾರಕ್ಕೆ ಅವಕಾಶವನ್ನು ಒದಗಿಸಿಲ್ಲ. ಇದಕ್ಕೆಲ್ಲ ತಹಶೀಲ್ದಾರ ಮತ್ತು ಪಪಂ ಆಡಳಿತ ವೈಖರಿಯೇ ಕಾರಣವಾಗಿದೆ. ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಈ ಪ್ರಕರಣ ನಮಗೆ ಇಂದು ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಏಳು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸಮಸ್ಯೆಯನ್ನು ಇತ್ಯರ್ಥಗೊಳಿ ಸುವುದಾಗಿ ಮನವರಿಕೆಮಾಡುವ ಮೂಲಕ ಶವ ಸಂಸ್ಕಾರವನ್ನುಗೊಳಿಸವಂತೆ ಕೇಳಿಕೊಂಡರು.