ಲೋಕದರ್ಶನ ವರದಿ
ಬ್ಯಾಡಗಿ14: ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಗ್ರಾಪಂ ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪತ್ರಿಭಟನೆ ನಡೆಸಿದ ಘಟನೆ ತಾಲೂಕಿನ ಶಿಡೆನೂರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಕಳೆದ ಹಲವಾರು ತಿಂಗಳುಗಳಿಂದ ಗ್ರಾಮದಲ್ಲಿಕುಡಿಯುವ ನೀರಿ ಪೂರೈಕೆ ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ಬೆಳಿಗ್ಗೆ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತಗೆ ಬಂದ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು.ಈ ಸಂದರ್ಭದಲ್ಲಿ ಕಛೇರಿಯಲ್ಲಿದ್ದ ಸಿಬ್ಬಂದಿಯನ್ನು ಹೋರಹಾಕಿ ಬೀಗ ಜಡೀದುಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಸುಭಾಷ ಓಲೇಕಾರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಗ್ರಾಮಸ್ಥರ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿರುವ ಇವರಿಗೆ ಗ್ರಾಮಸ್ಥರ ಬಗ್ಗೆ ಕಾಳಜಿ ಇದ್ದಂತಿಲ್ಲ. ಮಳೆಗಾಲದಲ್ಲೂ ಕೂಡಾ ಸಮರ್ಪಕವಾಗಿ ನೀರು ಪೂರೈಸದೆ ಗ್ರಾಮಸ್ಥರನ್ನು ನೀರಿರುವಲ್ಲಿಗೆ ಅಲೇದಾಡಿಸುತ್ತ ಇಲ್ಲದ ಸಬೂಗಳನ್ನು ಹೇಳುತ್ತಾ ಕಾಲ ಹರಣ ಮಾಡುತ್ತ ಕುಳಿತಿರುವ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಜೀವಂತವಾಗಿಡುವಲ್ಲಿ ಹೆಚ್ಚಿನ ಆಸಕ್ತಿ ಎಂದು ಆರೋಪಿಸಿದರು.
4 ತಿಂಗಳಾತೂ ನೀರಿಲ್ಲ: ಗೀತಾ ಸಣ್ಮನಿಮಾತನಾಡಿ ಕಳೆದ 4 ತಿಂಗಳಿಂದಾಒಂದು ಹನೀ ನೀರು ಬಂದಿಲ್ಲ ನೀರಿಗಾಗಿಎಲ್ಲಾಬದುಕು ಬಾಳೇ ಬಿಟ್ಟುಈಡೀ ದೀನಾ ಕಳಿಬೇಕು,ಗ್ರಾಮ ಪಂಚಾಯತಿಯ ಕೂದಲೆಳೆ ಅಂತರದಲ್ಲಿಇರುವ ಎಸ್ಸಿ ಕಾಲೋನಿಯಲ್ಲಿ ಸಮರ್ಪಕವಾಗಿ ನೀರು ಬೀಡದೆತಾರಮತ್ಯ ನೀತಿ ಮಾಡುತ್ತಿರುವ ಅಧಿಕಾರಿಗಳಿಗೆ ಧಿಕ್ಕಾರಎಂದುಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸಮರ್ಪಕವಾಗಿ ನೀರು ಬಿಡದಿದ್ದರೇ ನಿರಂತವಾಗಿಗ್ರಾಪಂಎದುರುಧರಣಿ ನಡೆಸು ವುದಾಗಿ ಎಚ್ಚರಿಸಿದರು.
ಮುಂದಿನ ಎರಡು ದಿನದಲ್ಲಿ ಸಮಸ್ಯೆ ಪರಿಹರಿಸಿವುದಾಗಿ ಗ್ರಾಪಂ ಸಿಬ್ಬಂದಿ ಭರವಸೇ ನೀಡಿದ ನಂತರ ಪ್ರತಿಭಟನಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.ಈ ಸಂದರ್ಭದಲ್ಲಿ ಸತ್ತರಸಾಬ ಅರಳಿಕಟ್ಟಿ, ರಮೇಶಕಡೇಮನಿ, ಸೇರಿದಂತೆ ನೂರಾರುಗ್ರಾಮಸ್ಥರು ಭಾಗವಹಿಸಿದ್ದರು.