ಏಪ್ರಿಲ್ ಆರರ ಒಳಗೆ ರೈಲ್ವೆ ಹಳಿ ಪಕ್ಕದ ರಸ್ತೆ ನಿರ್ಮಾಣ ಮಾಡದಿದ್ದರೆ ರೈಲ್ವೆ ತಡೆದು ಪ್ರತಿಭಟನೆ
Protest will be held against the railway if the road next to the railway track is not constructed by
ಬ್ಯಾಡಗಿ 28: ಮೋಟೆಬೆನ್ನೂರು ಗ್ರಾಮದಿಂದ ಕೋಡಿಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ರೈಲ್ವೆ ಹಳಿ ಪಕ್ಕದಲ್ಲಿ ಪೂರ್ಣ ಪ್ರಮಾಣದ ಕಾಂಕ್ರೀಟ್ ರಸ್ತೆ ನಿರ್ಮಾಣವನ್ನು ಶಿಘ್ರವೇ ಮಾಡಿಕೊಡಿ ಇಲ್ಲದಿದ್ದರೆ ಏಪ್ರಿಲ್ ಆರನೇ ತಾರೀಖಿನಂದು ರೈಲ್ವೆ ಹಳಿ ತಡೆದು ಪ್ರತಿಭಟನೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರಿಗೆ ರೈತರೊಂದಿಗೆ ಪ್ರತಿಭಟನೆ ಮಾಡುವ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿ ಮಾತನಾಡಿದವರು ಮೋಟೆಬೆನ್ನೂರು ಗ್ರಾಮದಲ್ಲಿ ರೈಲ್ವೆ ಹಳಿಯ ಎಡಭಾಗದ ಸರ್ವೆ ನಂಬರ್ 42 ರಿಂದ 133 ವರೆಗೆ ಹಾಗೂ ಬಲಭಾಗದ ಸರ್ವೆ ನಂಬರ್ 45 ರಿಂದ 210 ವರೆಗೆ ಒಂದೇ ದಾರಿ ಇದೆ ಇದೇ ದಾರಿಯನ್ನು ಬಳಸಿಕೊಂಡು ರೈತರು ಬರುತ್ತಿದ್ದಾರೆ ಆದರೆ ಇತ್ತೀಚೆಗೆ ರೈಲ್ವೆ ಇಲಾಖೆಯಿಂದ ಡಬಲ್ ಹಳಿ ನಿರ್ಮಾಣದ ಹಿನ್ನೆಲೆಯಲ್ಲಿ ರೈತರಿಗೆ ಚಕ್ಕಡಿಗಾಡಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ
ಈ ಮಧ್ಯೆ ರೈಲ್ವೆ ಬ್ರಿಜ್ನಿಂದ ಕೇವಲ ಐದನೂರು ಮೀಟರ್ ವರೆಗೆ ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಉಳಿದ ಭಾಗದಲ್ಲಿ ಸಂಚಾರ ದುಸ್ತರವಾಗಿದೆ ಮಳೆ ಬಂದಿ ತೆಂದರೆ ರೈತರ ಗೋಳು ಕೇಳುವರು ಯಾರು? ಪರಿಣಾಮ ರೈತರು ತಮ್ಮ ಕೃಷಿ ಚಟುವಟಿಗಳನ್ನು ನಡೆಸಲು ಸಮಸ್ಯೆ ಉಂಟಾಗುತ್ತಿದೆ ಕೂಡಲೇ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದರು. ಕೋಟ್ ಹಾಕಿ "ಮಾನ್ಯ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ನಾವು ಹಲವು ಬಾರಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದೆವೆ ಆದರೆ ಅವರು ರಸ್ತೆ ಮಾಡಿಕೊಡುತ್ತೇನೆಂದು ಭರವಸೆ ನೀಡಿದ್ದರು ಆದರೆ ಅದು ಕೇವಲ ಭರವಸೆಯಾಗಿ ಉಳಿದಿದೆ ಯಾವುದೇ ಪ್ರಯೋಜನವಾಗಿಲ್ಲ ರೈತರ ಸಮಸ್ಯೆ ಕೇಳುವರ್ಯಾರು ಇಲ್ಲ ಸಂಸದರ ಭರವಸೆಯು ಭರವಸೆಯಾಗಿ ಉಳಿದಿದೆ ಹಾಗಾಗಿ ಕೂಡಲೇ ಇಲಾಖೆಯವರು ಎಚ್ಚೆತ್ತು ಕಾಂಕ್ರೀಟ್ರ ರಸ್ತೆ ನಿರ್ಮಾಣ ಮಾಡಿಕೊಡದೆ ಇದ್ದರೆ ಎಪ್ರಿಲ್ ಆರನೇ ತಾರೀಖನಂದು ರೈಲ್ವೆ ತಡೆದು ಬೃಹತ್ ಪ್ರಮಾಣದಲ್ಲಿ ರೈತರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು" ಈ ವೇಳೆ ಪ್ರತಿಭಟನೆಯಲ್ಲಿ ಇಂದೂಧರ್ ರುದ್ರದೇವರ ಮಠ. ಮಾಲತೇಶ್ ಮೈಲಾರ. ನಿಂಗಪ್ಪ ಅಂಗರಗಟ್ಟಿ .ಸುರೇಶ್ ಹಿತ್ತಲಮನಿ. ದಾನಪ್ಪ ಬಳ್ಳಾರಿ. ರಮೇಶ್ ಹೊಳಲ. ಮುತ್ತಪ್ಪ ಅನ್ವೇರಿ. ಬಸವರಾಜ್ ಚಂದ್ರ್ಪನವರ. ಪ್ರದೀಪ್ ಮಲ್ಲು ಹಾಗೂ ಇನ್ನು ಅನೇಕ ರೈತರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 