ಖಾಲಿ ಹುದ್ದೆಗಳ ನೇಮಕ ಶೀಘ್ರವಾಗಿಸಲು ಪ್ರತಿಭಟನೆ
Protest to expedite recruitment of vacant posts
ಖಾಲಿ ಹುದ್ದೆಗಳ ನೇಮಕ ಶೀಘ್ರವಾಗಿಸಲು ಪ್ರತಿಭಟನೆ
ರಬಕವಿ-ಬನಹಟ್ಟಿ 04: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳದೇ ಇರುವುದರಿಂದ ಪ್ರತಿ ವರ್ಷ ನಿರುದ್ಯೋಗಿಗಳ ಸೃಷ್ಠಿಯಾಗುತ್ತಿದೆ. ದೇಶ ಹಾಗೂ ರಾಜ್ಯದ ಜನತೆಯ ಸೇವಾ ಕಾರ್ಯಗಳು ಅಬಾಧಿತವಾಗಿ ಜನಸಾಮಾನ್ಯರಿಗೆ ದೊರೆಯಲು ಪ್ರತಿ ವರ್ಷ ನೇಮಕಾತಿಗಳು ನಿಯಮಿತವಾಗಿ ನಡೆದಲ್ಲಿ ನಾಗರಿಕರಿಗೂ ಅನುಕೂಲವಾಗುವ ಜೊತೆಗೆ ಕೆಂಭೂತವಾಗಿರುವ ನಿರುದ್ಯೋಗ ಸಮಸ್ಯೆಗೂ ಮುಕ್ತಿಯಾಗುತ್ತದೆಂದು ಬನಹಟ್ಟಿಯ ಜಿ.ಎಸ್.ಕೋಚಿಂಗ್ ಸೆಂಟರ್ ಮುಖ್ಯಸ್ಥ ಸಂಗಮೇಶ ಉಪ್ಪಾರ ಆಗ್ರಹಿಸಿದರು.
ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಮೆರವಣಿಗೆ ಮೂಲಕ ಸಾಗಿದ ನೂರಾರು ವಿದ್ಯಾರ್ಥಿಗಳು ತಹಶೀಲ್ದಾರ ಕಚೇರಿ ಎದುರು ಮಾತನಾಡಿ ಆಗ್ನಿವೀರ ನೇಮಕಾತಿಯಲ್ಲಿ ಮೊದಲಿದ್ದ ವಯೋಮಿತಿ ಸಡಿಲಿಕೆಗೊಳಿಸುವುದಾಗಿ ಹೇಳಿದ್ದ ಮಾತು ಇನ್ನೂ ಜಾರಿಯಾಗದ ಕಾರಣ ಸೈನಿಕರಾಗಿ ದೇಶಸೇವೆ ಮಾಡುವ ಕನಸು ಕಾಣುತ್ತಿರುವ ಯುವಕರು ಅವಕಾಶವಿಲ್ಲದೇ ನಿರಾಶರಾಗಿ, ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ವಯೋಮಿತಿ ಸಡಿಲಿಕೆ ಜೊತೆಗೆ ನಿಯಮಿತ ನೇಮಕಾತಿ ನಡೆದಲ್ಲಿ ನಿರುದ್ಯೋಗ ಸಮಸ್ಯೆಗೆ ಮುಕ್ತಿ ಹೇಳಲು ಸಾಧ್ಯವೆಂದರು. ತಹಶೀಲ್ದಾರ ಗೀರೀಶ ಸ್ವಾದಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪಿಎಸ್ಸೈ ಶಾಂತಾ ಹಳ್ಳಿ, ವಿಠಲ ಉಪ್ಪಾರ, ಬಸವರಾಜ ಭೂತಾಳಿ, ಮಹಾದೇವ ಬಂಗಿ ಮೊದಲಾದವರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 