ಸ್ಲಂ ಜನರ ಮೇಲೆ ಭೂ ಮಾಫಿಯಾಗಳ ದೌರ್ಜನ್ಯ ಖಂಡಿಸಿ 11 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ-ಇಮ್ತಿಯಾಜ ಮಾನ್ವಿ
Protest in front of the District Collector's office on the 11th, condemning the atrocities of land m
ಸ್ಲಂ ಜನರ ಮೇಲೆ ಭೂ ಮಾಫಿಯಾಗಳ ದೌರ್ಜನ್ಯ ಖಂಡಿಸಿ 11 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ-ಇಮ್ತಿಯಾಜ ಮಾನ್ವಿ
ಗದಗ-07, ಗದಗ ನಗರದ ರಿ.ಸ.ನಂ 594 ನವನಗರ ಸ್ಲಂ ಪ್ರದೇಶ ಹಾಗೂ ಗೋಸಾವಿ ಸ್ಲಂ ಪ್ರದೇಶಗಳನ್ನು ಸ್ಲಂ ಕಾಯ್ದೆ 1973 ಪ್ರಕಾರ ಅಧಿಕೈತವಾಗಿ ಘೋಷಣೆ ಮಾಡಲು ಸಂಘಟನೆಯಿಂದ ನಿರಂತರ ಹೋರಾಟವನ್ನು ನಡೆಸಲಾಗುತ್ತಿದೆ, ಆದರೆ ಭೂ-ಮಾಲಿಕ ಹಾಗೂ ಭೂ-ಮಾಫಿಯಾಗಳು ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಇಲ್ಲಿಯ ಜನರ ಮನೆಗಳನ್ನು ತೆರವುಗೊಳಿಸಲು ಕುತಂತ್ರ ನಡೆಸುತ್ತಿರುವುದನ್ನು ಖಂಡಿಸಿ ಇದೇ ಆ. 11ರಂದು ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸ್ಲಂ ಜನರ ವಿರೋಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಹೇಳಿದರು.
ಅವರು ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಿ.ಸ.ನಂ: 594 ರ ನವನಗರ ಪ್ರದೇಶದಲ್ಲಿ ಸುಮಾರು 80ಕ್ಕೊ ಹೆಚ್ಚು ಬಡ ಕೊಲಿ ಕಾರ್ಮಿಕರು 2001 ರಲ್ಲಿ ಭೂ ಮಾಲಿಕನಿಂದ ನಿವೇಶನಗಳನ್ನು ಖರೀದಿಸಿ ಹಲವು ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇನ್ನು ಕೆಲ ಕುಟುಂಬಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸರ್ಕಾದ ಅನುದಾನದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ, ಆದರೆ ಭೂ ಮಾಲಿಕನ ಹೆಸರಲ್ಲಿ ಭೂ ಮಾಫಿಯಾಗಳು ಸ್ಥಳೀಯ ಜನರ ಮೇಲೆ ದೌರ್ಜನ್ಯವನ್ನು ನಡೆಸಿ ಇವರ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿರುವುದು ನಾವು ಖಂಡಿಸುತ್ತೇವೆ,
ಇದೇ ರೀತಿ ನಗರದ ಮಧ್ಯ ಭಾಗದಲ್ಲಿರುವ ಗೋಸಾವಿ ಗುಡಿಸಲು ಪ್ರದೇಶದಲ್ಲಿ ಸುಮಾರು 28ಕ್ಕೊ ಹೆಚ್ಚು ಕುಟುಂಬಗಳು ಕಳೆದ 70 ವರ್ಷಗಳಿಂದ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ಚಿಂದಿ ಅಯುವ ಕೆಲಸ ಮಾಡಿಕೊಂಡು ತಮ್ಮ ಬದುಕನ್ನು ನಡೆಸುತ್ತ ಬಂದಿದ್ದಾರೆ. ಗೋಸಾವಿ ಪ್ರದೇಶವನ್ನು ಸ್ಲಂ ಘೋಷಣೆ ಮಾಡಲು ಈಗಾಗಲೇ ಸ್ಲಂ ಬೋರ್ಡ ಆಯುಕ್ತರಿಗೆ ದಾಖಲೆಗಳನ್ನು ನೀಡಲಾಗಿದೆ, ನಮ್ಮ ದೇಶದ ಸಂವಿಧಾನದ ಪ್ರಕಾರ ದೇಶದ ಎಲ್ಲಾ ನಾಗರೀಕರಿಗೊ ವಸತಿ, ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳು ಸಿಗುವಂತೆ ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು, ಆದರೆ ಗೋಸಾವಿ ಸ್ಲಂ ಪ್ರದೇಶದ ಮನೆಗಳಿಗೆ ಈ ವರೆಗೊ ವಿದ್ಯುತ್ ಸಂಪರ್ಕವನ್ನು ಕಲ್ಪಿಸದೇ 70 ವರ್ಷಗಳಿಂದ ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ,
ಕನಿಷ್ಟ ಮಟ್ಟದ ಸೌಲಭ್ಯಗಳು ದೂರಕಿಸಿ ಕೊಡದೇ ನಮ್ಮ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು 2003 ರಲ್ಲಿ ಆಶ್ರಯ ಮನೆಗಳನ್ನು ಮಂಜೂರು ಮಾಡಿದ್ದೇವೆ ಎಂದು ಸುಳ್ಳು ಹೇಳಿ ನಗರಸಭೆ ಪೌರಾಯುಕ್ತರ ಮೂಲಕ ಗೋಸಾವಿ ಸ್ಲಂ ಜನರಿಗೆ ನೋಟೀಸ್ ನೀಡಿ ಸ್ಥಳೀಯ ಜನರಿಗೆ ಎತ್ತಂಗಡಿ ಮಾಡಲು ಹುನ್ನಾರ ನಡೆಸುತ್ತಿರುವುದನ್ನು ಪ್ರಶ್ನಿಸಿ ಗೋಸಾವಿ ಸ್ಲಂ ಜನರ ಪರವಾಗಿ ಹೈಕೋರ್ಟನಲ್ಲಿ ನ್ಯಾಯಕ್ಕಾಗಿ ಅರ್ಜಿಗಳು ಹಾಕಲಾಗಿತ್ತು. ಇದರ ಪರಿಣಾಮ ಹೈಕೋರ್ಟನಲ್ಲಿ ದಿನಾಂಕ: 17-07-2025 ರಂದು ಯಾವುದೇ ಕಾರಣಕ್ಕೊ ಸ್ಥಳೀಯ ಜನರಿಗೆ ತೆರವುಗೊಳಿಸಬಾರದೆಂದು ಹೈಕೋರ್ಟನಿಂದ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದರು, ಯಾವುದೇ ಕಾರಣಕ್ಕೊ ವಿನಾಕಾರಣ ಸ್ಲಂ ಜನರು ವಾಸವಾಗಿರುವ ಪ್ರದೇಶಗಳನ್ನು ತೆರವುಗೊಳಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾದರೆ ನಗರದ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಇದರ ವಿರುಧ್ದ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ನಿರಂತರ ಹೋರಾಟವನ್ನು ನಡೆಸಿ ಸ್ಲಂ ಜನರ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಕ್ಕೆ ನೀಡಿದರು.
ನವನಗರ ಸ್ಲಂ, ಗೋಸಾವಿ ಸ್ಲಂ ಪ್ರದೇಶ ಹಾಗೂ ಇನ್ನು ನಗರದ ಹಲವಾರು ಸ್ಲಂ ಪ್ರದೇಶಗಳ ಜನರಿಗೆ ಸಂವಿಧಾನ ಬದ್ದವಾದ ಹಕ್ಕುಗಳನ್ನು ನೀಡದೇ ಸ್ಲಂ ಜನರ, ಬಡವರ ಭೂಮಿಯನ್ನು ಕಬ್ಬಳಿಸುವ ಕುತಂತ್ರವನ್ನು ನಡೆಸಲಾಗುತ್ತಿದೆ. ಇದನ್ನು ಖಂಡಿಸಿ ಹಾಗೂ ನಮ್ಮ ದೇಶದ ಸಂವಿಧಾನ ಪ್ರಕಾರ ಸ್ಲಂ ಜನರಿಗೆ ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳನ್ನು ಕಲ್ಪಿಸಲು ಆಗ್ರಹಿಸಿ ಮತ್ತು ಭೂ-ಮಾಫಿಯಾಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ದಿನಾಂಕ: 11-08-2025 ರಂದು ನಗರದ 30ಕ್ಕೊ ಹೆಚ್ಚು ಸ್ಲಂ ಪ್ರದೇಶದ ಜನರ ಬೆಂಬಲದೊಂದಿಗೆ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಇಮ್ತಿಯಾಜ.ಆರ.ಮಾನ್ವಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷರಾದ ಅಶೋಕ ಕುಡತಿನ್ನಿ, ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹಬೂಬಸಾಬ ಬಳ್ಳಾರಿ, ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಸಾಕ್ರುಬಾಯಿ ಗೋಸಾವಿ, ಅಶೋಕ ಗುಮಾಸ್ತೆ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮಂಗಳಾ ಗೋಸಾವಿ, ರವಿಕುಮಾರ ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಬಸವರಾಜ ಕಳಸದ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 