ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಾಣೇಬೆನ್ನೂರು 12:  ತಾಲೂಕಿನ ಅಂತರವಳ್ಳಿ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ಪಾಲಕರು ಹಾಗೂ ವಿದ್ಯಾಥರ್ಿಗಳು ಶಾಲೆಗೆ ಬೀಗ  ಹಾಕಿ ಪ್ರತಿಭಟನೆ ನಡೆಸಿದರು.

    ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಥರ್ಿಗಳ ಹಾಜರಾತಿ ಸಾಕಷ್ಟು ಇದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ, ಹೀಗಿದ್ದು ಶಿಕ್ಷಣಾಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲ, ತಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು, ಅಲ್ಲಿಯವರೆಗೆ ಶಾಲೆಯ ಬೀಗ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪಾಲಕರು ಒತ್ತಾಯಿಸಿದರು.

    ಮುಖ್ಯ ಶಿಕ್ಷಕಿ ಗೀತಾ ಹಾಗೂ ತಾಪಂ ಸದಸ್ಯ ಕರಿಯಪ್ಪ ತೋಟಗೇರ ಅವರು ಪಾಲಕರೊಂದಿಗೆ ಸಂಧಾನ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಶ್ರೀಧರ ಅವರಿಗೆ ನಿಮ್ಮ ಮಕ್ಕಳಿಗಾಗುವ ತೊಂದರೆ ಕುರಿತು ತಿಳಿಸಿದ್ದೇವೆ ಎಂದರು.

   ಇನ್ನು ಎರಡು ದಿನಗಳಲ್ಲಿ ಶಿಕ್ಷಕನ್ನು ಕಳುಹಿಸಲಾಗುವುದು ಎಂದು ಶಿಕ್ಷಣಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದಾಗ ಪ್ರತಿಭಟನೆ ಹಿಂಪಡೆದರು. ಕಾಂತೇಶ ಬಾಗಿಲದವರ, ಹನುಮಂತಪ್ಪ ಕರೂರ, ರಾಮಪ್ಪ ಸುಂಕಾಪುರ ಸೇರಿದಂತೆ ಮಕ್ಕಳು ಪ್ರತಿಭಟನೆಯಲ್ಲಿ ಇದ್ದರು.

ಜಿಗುಪ್ಸೆಗೊಂಡ ಯುವಕನು ರೈಲಿಗೆ ತಲೆ ನೀಡಿ ಸಾವು