ವಿಬಿ-ಜಿ ರಾಮ್‌ಜಿ ಕಾಯಿದೆಯನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಪ್ರತಿಭಟನೆ
Protest demanding withdrawal of VB-G Ramji Act
ಬೆಳಗಾವಿ 30: ನಗರದಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ ಪಕ್ಷ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಕೇಂದ್ರ ಸರ್ಕಾರದ ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಬೃಹತ್ ಕೂಲಿ ಕಾರ್ಮಿಕರ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಅಂಬೇಡ್ಕರ ಗಾರ್ಡನನಲ್ಲಿ ನೂರಾರು ರೈತ ಕೃಷಿ ಕಾರ್ಮಿಕರು ಜಮಾವಣೆಗೊಂಡು ರ್ಯಾಲಿ ಮುಖಾಂತರ ಡಿಸಿ ಕಚೇರಿಗೆ ಧಾವಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿಯವರಿಗೆ ಮನವಿಯನ್ನ ಸಲ್ಲಿಸಿದರು.
. ಪ್ರತಿಭಟನಾ ಸಭೆಯನ್ನ ಉದ್ದೇಶಿಸಿ ಖಗಅಋ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕಾಂಬ್ರೇಡ್ ರಾಮಾಂಜನಪ್ಪ ಆಲ್ದಲ್ಲಿ ಮಾತನಾಡಿ “ ನರೇಗಾ ಕಾಯ್ದೆಯು ಹಸಿವಿನಿಂದ ಸಾಯುವ, ಗುಳೆ ಹೋಗುವಿಕೆ ತಡೆಗಟ್ಟಲು, ಉದ್ಯೋಗದ ಹಕ್ಕಿಗಾಗಿ ನಡೆದ ದುಡಿಯುವ ಜನಗಳ ಹೋರಾಟದ ಫಲವಾಗಿ ಜಾರಿ ಬಂದಿತು. ಇಂದು ಕೇಂದ್ರ ಸರ್ಕಾರ ಸಂಸತ್ತಿನ್ನಲ್ಲಿ ಸೂಕ್ತ ಚರ್ಚೆ ಇಲ್ಲದೆ ನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇನ್ನೊಂದು ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಂದು ಉದ್ಯೋಗದ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಜನ ಕಲ್ಯಾಣ ಯೋಜನೆಗಳನ್ನು ಹಿನ್ನೆಲೆಗೆ ಸರಿಸಿ, ಅದಕ್ಕೆ ಮೀಸಲಿಡುವ ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಹಾಗಾಗಿ ಈ ಕಾಯಿದೆಯನ್ನು ವಾಪಸ್ ಆಗುವರೆಗೂ ಕೂಲಿ ಕಾರ್ಮಿಕರು ನಿರಂತರ ಸಂಘಟಿತ ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಂಋಏಒಖ) ರಾಜ್ಯ ನಾಯಕರಾದ ಲಕ್ಷ್ಮಣ ಜಡಗಣ್ಣವರ್ ಮಾತನಾಡಿ, “ಸರ್ಕಾರಿ ಕೆಲಸವನ್ನು ಹಕ್ಕಿನಿಂದ ಪಡೆಯುವ ಆಯ್ಕೆಯಿದ್ದ ನರೇಗಾ ಕಾಯ್ದೆಯನ್ನು ರದ್ದು ಮಾಡಿ ಹೊಸ ಕಾಯ್ದೆಯನ್ನು ಏಕಾಏಕಿ ತಂದಿರುವುದು ಬಡವರ ಸ್ವಾಭಿಮಾನಕ್ಕೆ ಹಾಕಿದ ಕೊಡಲಿ ಪೆಟ್ಟಾಗಿದೆ. ಈ ಹೊಸ ಕಾಯ್ದೆಯಲ್ಲಿ ಅನೇಕ ತೊಡಕುಗಳಿವೆ. ಕೇಂದ್ರ ಸರ್ಕಾರ ತನ್ನ ಪಾಲನ್ನು ಶೇ 90 ರಿಂದ ಶೇ 60 ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೇ ಶೇ 40 ರಷ್ಟು ಹೊರೆ ಹಾಕಿರಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಕಾರಣ ಈ ಕಾಯ್ದೆಯನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ನರೇಗಾ ಕಾಯಿದೆಯನ್ನು ಹೆಚ್ಚು ಜನಸ್ನೇಹಿಯಾಗಿ ರೂಪಿಸಿ, ಮಾನವ ದಿನಗಳನ್ನು 200 ಕ್ಕೆ ಏರಿಸಬೇಕೆಂದು, ಕೂಲಿ ದರವನ್ನು 600 ಕ್ಕೆ ಏರಿಸಿ ಮರು ಜಾರಿಗೆ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟಕರು ಲಕ್ಕಪ್ಪ ಬಿಜ್ಜನ್ನವರ್, ರಾಜು ಗಾಣಗಿ, ಜ್ಯೋತಿಬಾ ಮಾನ್ವಾಡಕರ್, ಭರಮಪ್ಪ ಮಾಶೇನಟ್ಟಿ, ರೇಣುಕಾ ಹಳ್ಳಿಕಾರ್, ಜ್ಯೋತಿ ಪವಾರ್ ನೂರಾರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 