ಸರ್ಕಾರಿ ಪ್ರಾಥಮಿಕ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ

ಸರ್ಕಾರಿ ಪ್ರಾಥಮಿಕ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ Protest demanding to save government primary school

ಧಾರವಾಡ ಇಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ರಾಜ್ಯದ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಧಾರವಾಡದ ಬೆನಕನಕಟ್ಟಿ ಗ್ರಾಮದ  ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಉಳಿಸಬೇಕು ಎಂದು ಊರಿನ ಪೋಷಕರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿ  ಮಾತನಾಡುತ್ತಾ... ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ದೇವರಹುಬ್ಬಳ್ಳಿ  ಗ್ರಾಮಕ್ಕೆ ಕಳುಹಿಸಲು ಬೆನಕನಕಟ್ಟಿ ಗ್ರಾಮದ ಜನರಿಗೆ ಸಮ್ಮತಿ ಇರುವುದಿಲ್ಲ. ಏಕೆಂದರೆ ಇಲ್ಲಿ ವಾಸಿಸುವ ಜನರೆಲ್ಲಾ ರೈತರು, ಕಾರ್ಮಿಕರು ಅವರೆಲ್ಲರೂ ಬೆಳಿಗ್ಗೆ ಹೊಲದ ಕೆಲಸಕ್ಕೆ ಹೋದರೆ ಬರುವುದು ಸಾಯಂಕಾಲ ಆಗುತ್ತದೆ.ಹಾಗಾಗಿ ತಮ್ಮ ಮಕ್ಕಳನ್ನು ಇಡೀ ದಿನ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆಯಿಂದ ಶಿಕ್ಷಣ ಕಲಿಯಲು ಬಿಟ್ಟು ಹೋಗುತ್ತಾರೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗಬೇಕೆಂದರೆ ಮೂರು ಕಿಲೋ ಮೀಟರ್ ದೂರದಲ್ಲಿರುವ ದೇವರಹುಬ್ಬಳ್ಳಿ ಗ್ರಾಮಕ್ಕೆ ಹೋಗಲು ಈ ಚಿಕ್ಕ ಮಕ್ಕಳಿಗೆ ಸಾಧ್ಯವಿಲ್ಲ.., ಆದ್ದರಿಂದ 60ಕ್ಕೂ ಹೆಚ್ಚು ಮಕ್ಕಳು ಇರುವ ಈ ಶಾಲೆಯ ಶಿಕ್ಷಣಕ್ಕೆ ಒತ್ತು ನೀಡಬೇಕು, ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆನಕನಕಟ್ಟಿ ಗ್ರಾಮದಲ್ಲಿ  ಯಾವುದೇ ಶಾಲೆ ಕಾರಣಕ್ಕೂ ಮುಚ್ಚಬಾರದು ಎಂದು ಶಾಲೆಯನ್ನು ಉಳಿಸಲು ಆಗ್ರಹಿಸಿ ಎಐಡಿಎಸ್‌ಓ ಹಾಗೂ ಬೆನಕನಕಟ್ಟಿ ಗ್ರಾಮದ  ಪೋಷಕರು ಆಗ್ರಹವಾಗಿದೆ. 

ಕರ್ನಾಟಕ ರಾಜ್ಯದಲ್ಲಿ ಮುಚ್ಚುತ್ತಿರುವ 40 ಸಾವಿರಕ್ಕೂ ಹೆಚ್ಚು ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರವು ಮುಂದಾಗಿದೆ... ಆದರೆ ನಮ್ಮ ರಾಜ್ಯದ ಶಿಕ್ಷಣ ಸಚಿವರು ಮಾತ್ರ ಬರೀ ಹಸಿ ಸುಳ್ಳು ಹೇಳುತ್ತಿದ್ದಾರೆ. ಪತ್ರಿಕೆಯ ಮುಂದೆ ಶಾಲೆ ಮುಚ್ಚಲ್ಲ ಅಂತ ಹೇಳಿ, ಇಲಾಖೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಪಟ್ಟಿ ಬಿಡುಗಡೆ ಮಾಡುತ್ತಿದ್ದಾರೆ ಹಾಗೂ ಆದೇಶ ಯಾಕೆ ಹೊರಡಸುತ್ತಿದ್ದಾರೆ? 

ಈ ದೇಶದ ಶಿಕ್ಷಣಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಶಿಕ್ಷಣವು ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಆಶಯವು ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ, ಸಾವಿತ್ರಿ ಬಾಯಿ ಹಾಗೂ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರವರದ್ದು ಆಗಿತ್ತು. ಆದರೆ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಶಿಕ್ಷಣದ ಬಾಗಿಲು ಮುಚ್ಚಿ, ಖಾಸಗೀಕರಣ ಮಾಡಿ ಬಡವರಿಂದ ಶಿಕ್ಷಣವನ್ನು ಕಸಿಯುತ್ತಿರುವ ಸರ್ಕಾರಗಳ ಹುನ್ನಾರ ಇದಾಗಿದೆ. ಆದ್ದರಿಂದ ಎಲ್ಲಾ ಪೋಷಕರು ವಿದ್ಯಾರ್ಥಿಗಳು ಜನ ಸಮಿತಿ ರಚಿಸಿಕೊಂಡು ಒಗ್ಗಟ್ಟಾಗಿ, ಚಳುವಳಿಗಳನ್ನು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಎಐಡಿಎ??? ಕಛೇರಿ ಕಾರ್ಯದರ್ಶಿ ಸ್ಫೂರ್ತಿ ಚಿಕ್ಕಮಠ ಸದಸ್ಯ ಸಿದ್ದು ಚಿಪ್ಪಲಕಟ್ಟಿ , ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್, ಚನಬಸಯ್ಯ.ಸಿ, ಕಲ್ಲಪ್ಪ ಬಡಿಗೇರ್, ಶಿವಪ್ಪ ಮಡಿವಾಳರ್, ಶಂಕ್ರಯ್ಯ  ಎಚ್, ಮುರುಗಯ್ಯ  ಹಾಗೂ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.