ಜಮಖಂಡಿ 24: ಡಾ. ಬಿ.ಆರ್,ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗೃಹಸಚಿವ ಖಾತೆಯಿಂದ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು ಹಾಗೂ ವಿಧಾನ ಪರಿಷತ ಸದಸ್ಯ ಸಿ.ಟಿ.ರವಿಯನ್ನು ವಿಧಾನಪರಿಷತ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹಳೆ ತಹಶೀಲ್ದಾರ ಕಚೇರಿಯಿಂದ ಕಾಂಗ್ರೇಸ್ ಪಕ್ಷದಿಂದ ಪ್ರಾರಂಭಗೊಂಡ ಪ್ರತಿಭಟನೆ ಮೆರವಣಿಗೆ ಡಾ, ಬಿ,ಆರ್,ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಿ, ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ, ಎ,ಜಿ, ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭನೆಯನ್ನು ನಡೆಸಿದರು. ನಂತರ ತಹಶೀಲ್ದಾರ ಸದಾಶಿವ ಮಕ್ಕೋಜಿ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಅನಂದ ನ್ಯಾಮಗೌಡ ಮಾತನಾಡಿ, ಡಾ,ಬಿ,ಆರ್,ಅಂಬೇಡ್ಕರ್ ಅವರಿಗೆ ಹಗುರವಾಗಿ ಮಾತನಾಡಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ, ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೆವೆಂದು ಬಹಿರಂಗವಾಗಿ ಹೇಳಿದ್ದಾರೆ, ಅಂಬೇಡ್ಕರ ಬಗ್ಗೆ ಹಗುರವಾಗಿ ಮಾತನಾಡಿರುವದು ದೇಶದ್ರೋಹದ ಕೆಲಸವಾಗಿದೆ ಎಂದರು.
ವಿಧಾನಪರಿಷತ ಸದಸ್ಯ ಸಿ,ಟಿ,ರವಿ ವಿಧಾನಪರಿಷತನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಅಕ್ಷೇಪಾರ್ಹ ಪದಬಳಕೆ ಮಾಡಿ ಅವರಿಗೆ ಮಾನಹಾನಿಯಾಗುವ ಹಾಗೆ ಮಾತನಾಡಿದ್ದಾರೆ, ಇದರಿಂದ ಮಹಿಳಾ ಕುಲಕ್ಕೆ ಅವಮಾನ ಮಾಡಿದಂತಾಗಿದೆ, ಇವರ ಸಂಸ್ಕೃತಿ ಅವರ ಮಾತಿನಲ್ಲಿಯೇ ತಿಳಿಯುತ್ತದೆ, ಆದ್ದರಿಂದ ಅವರನ್ನು ಕೂಡಲೇ ಅನರ್ಹಗೊಳಿಸಬೇಕು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ದಲಿತ ಮುಖಂಡ ಶ್ಯಾಮ ಘಾಟಗೆ, ಕಾಂಗ್ರೇಸ್ ಮುಖಂಡ ಬಸವರಾಜ ಸಿಂಧೂರ, ರಾಜು ಮೇಲಿನಕೇರಿ, ಯಮನಪ್ಪ ಗುಣದಾಳ, ನ್ಯಾಯವಾದಿ ಎನ್,ಎಸ್,ದೇವರವರ, ರಫಿಕ್ ಬಾರಿಗಡ್ಡಿ, ಸೇರಿದಂತೆ ಅನೇಕರು ಮಾತನಾಡಿದರು, ನಗರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಪಾಟೀಲ, ನಗರ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಮಹೇಶ ಕೋಳಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮೀನ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಮಾದಿಗ ಹೋರಾಟ ರಾಜ್ಯಾಧ್ಯಕ್ಷ ಶಂಕರ ಪೂಜಾರಿ,ರವಿ ಯಡಹಳ್ಳಿ, ಕಲ್ಲಪ್ಪಾ ಗಿರಡ್ಡಿ, ಮಾಮೂನ ಪಾರಥನಳ್ಳಿ, ತೊಫಿಕ್ ಪಾರಥನಳ್ಳಿ, ಬಸವರಾಜ ಹರಕಂಗಿ, ದಾನೇಶ ಘಾಟಗೆ, ರೋಹಿತ ಸೂರ್ಯವಂಶಿ, ಸುನೀಲ ತೇಲಿ, ಮಲ್ಲು ಶಿರಹಟ್ಟಿ, ಕುಮಾರ ಶಿವನಕ್ಕನವರ, ಬಕರ ಕುಡಚಿ, ಪುಟ್ಟು ಪಾನಿ,ಶ್ರೀನಾಥ ನವಣಿ, ಅಕ್ಬರ್ ಜಮಾದಾರ, ಮೀರಾ ಒಂಟಮೋರೆ ಸೇರಿದಂತೆ ಸಾವಿರಾರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದರು.